ಸುದ್ದಿ 

ದಾವಣಗೆರೆ ಹೊರವಲಯದಲ್ಲಿ ರೊಟ್ವೀಲರ್ ದಾಳಿ: ಮಹಿಳೆಯ ದಾರುಣ ಸಾವು

Taluknewsmedia.com

Taluknewsmedia.comದಾವಣಗೆರೆ ಹೊರವಲಯದಲ್ಲಿ ರೊಟ್ವೀಲರ್ ದಾಳಿ: ಮಹಿಳೆಯ ದಾರುಣ ಸಾವು ತಾಲೂಕಿನ ಹೊನ್ನೂರು–ಗೊಲ್ಲರಹಟ್ಟಿ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ನಡೆದ ದಾರುಣ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಮಾಲೀಕರು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದ ಎರಡು ರೊಟ್ವೀಲರ್ ಜಾತಿಯ ನಾಯಿಗಳ ದಾಳಿಗೆ ಒಳಗಾಗಿ, ಮಲ್ಲಶೆಟ್ಟಿಹಳ್ಳಿಯ ನಿವಾಸಿ 38 ವರ್ಷದ ಅನಿತಾ ಅವರು ದುರ್ಮರಣ ಹೊಂದಿದ್ದಾರೆ. ರಾತ್ರಿ ಸುಮಾರು 11:30ರ ಸುಮಾರಿಗೆ ಮಕ್ಕಳೊಂದಿಗೆ ಜಗಳವಾದ ನಂತರ ತವರು ವಡ್ಡನಹಳ್ಳಿಗೆ ನಡೆದುಕೊಂಡು ಹೋಗುತ್ತಿದ್ದ ಅನಿತಾ ಮೇಲೆ ಆ ಎರಡು ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ಕಚ್ಚಿದ ಪರಿಣಾಮ, ಅವರು ಭಾರೀ ಗಾಯಗಳೊಂದಿಗೆ ನೆಲಕ್ಕುರುಳಿದ್ದಾರೆ. ಘಟನೆಯ ವಿಷಯ ಗ್ರಾಮಸ್ಥರಿಗೆ ಬೆಳಗಿನ ಜಾವ 3:30ಕ್ಕೆ ತಿಳಿದುಬಂದಿದ್ದು, ತಕ್ಷಣ ಅವರು ಪೊಲೀಸರ ಸಹಾಯದಿಂದ ಗಾಯಾಳುವನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯೆ ತುಮಕೂರು ಜಿಲ್ಲೆಯ ಶಿರಾ ಬಳಿ ಅವರು ಮೃತರಾಗಿದ್ದಾರೆ. ಘಟನೆಯ…

ಮುಂದೆ ಓದಿ..
ವಿಶೇಷ ಸುದ್ದಿ 

ಆರ್ಯನ್ ಖಾನ್ ವಿವಾದ: ಬೆಂಗಳೂರು ಪಬ್ ಘಟನೆಯ ಬಗ್ಗೆ ನೀವು ತಿಳಿಯಬೇಕಾದ ಅಂಶಗಳು

Taluknewsmedia.com

Taluknewsmedia.comಆರ್ಯನ್ ಖಾನ್ ವಿವಾದ: ಬೆಂಗಳೂರು ಪಬ್ ಘಟನೆಯ ಬಗ್ಗೆ ನೀವು ತಿಳಿಯಬೇಕಾದ ಅಂಶಗಳು ವೈರಲ್ ವಿಡಿಯೋದ ಆಚೆಗಿನ ಕಥೆ… ಬೆಂಗಳೂರಿನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ವರ್ತನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ, ಕೇವಲ ವೈರಲ್ ಆದ ವಿಡಿಯೋವನ್ನು ನೋಡಿ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಈ ಘಟನೆಯ ಆಳಕ್ಕಿಳಿದು, ಅದರ ಹಿಂದಿನ ಮೂರು ಪ್ರಮುಖ ಮತ್ತು ಅಚ್ಚರಿಯ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಘಟನೆಯ ವಿವರ ಮತ್ತು ಸಾರ್ವಜನಿಕರ ಆಕ್ರೋಶ… ವಿಶೇಷ ಅತಿಥಿಯಾಗಿ ಬಂದು, ವಿವಾದ ಸೃಷ್ಟಿಸಿದ ಆರ್ಯನ್ ನವೆಂಬರ್ 28ರ ಮಧ್ಯರಾತ್ರಿ, ಬೆಂಗಳೂರಿನ ಅಶೋಕನಗರ ಸಮೀಪದ ಪಬ್ ಒಂದರಲ್ಲಿ ‘ಡಿ’ಯಾವೋಲ್‌ ಆಫ್ಟರ್‌ ಡಾರ್ಕ್‌’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆರ್ಯನ್ ಖಾನ್ ಆಗಮಿಸಿದ್ದರು. ಈ ಸಂದರ್ಭದಲ್ಲಿ, ಪಬ್‌ನ ಬಾಲ್ಕನಿಯಲ್ಲಿ ನಿಂತಿದ್ದ ಆರ್ಯನ್, ಕೆಳಗೆ ನೆರೆದಿದ್ದ ಜನರತ್ತ…

ಮುಂದೆ ಓದಿ..
ಸುದ್ದಿ 

ಗದಗ ಜಿಲ್ಲೆಯಲ್ಲಿ ದಿಗ್ಭ್ರಮೆ ಉಂಟಮಾಡಿದ ದಾರುಣ ಘಟನೆದಕ್ಷ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ ಸ್ಮರಣಾರ್ಥ ಶ್ರದ್ದಾಂಜಲಿ

Taluknewsmedia.com

Taluknewsmedia.comಗದಗ ಜಿಲ್ಲೆಯಲ್ಲಿ ದಿಗ್ಭ್ರಮೆ ಉಂಟಮಾಡಿದ ದಾರುಣ ಘಟನೆದಕ್ಷ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ ಸ್ಮರಣಾರ್ಥ ಶ್ರದ್ದಾಂಜಲಿ ಗದಗ ಜಿಲ್ಲೆಯ ಅಣ್ಣಿಗೇರಿ ಬಳಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯದ ದಕ್ಷ ಹಾಗೂ ಕರ್ತವ್ಯನಿಷ್ಠ ಸಿ.ಪಿ.ಐ ಅಧಿಕಾರಿ ಶ್ರೀ ಪಂಚಾಕ್ಷರಿ ಸಾಲಿಮಠ ಅವರು ದುರ್ಮರಣ ಹೊಂದಿರುವ ಘಟನೆ ಸಾರ್ವಜನಿಕರಲ್ಲಿ ಬೇಸರ ಮತ್ತು ದುಃಖಕ್ಕೆ ಕಾರಣವಾಗಿದೆ. ಘಟನೆಯ ವೇಳೆ ಸಾಲಿಮಠ ಅವರ ಕಾರಿಗೆ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದು ಭಾರೀ ಹಾನಿಗೊಳಗಾಗಿದೆ. ಗಂಭೀರ ಗಾಯಗಳಾಗುವುದರೊಂದಿಗೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಪಘಾತದ ನಿಖರ ಕಾರಣವನ್ನು ತಿಳಿದುಕೊಳ್ಳುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮ್ಮ ನಿಷ್ಠೆ, ಶಿಸ್ತಿನ ಕಾರ್ಯಪಟುತೆಗೆ ಹೆಸರುವಾಸಿಯಾಗಿದ್ದ ಸಾಲಿಮಠ ಅವರ ಅಕಾಲಿಕ ನಿಧನ ಇಲಾಖೆಗೆ ಮಾತ್ರವಲ್ಲ, ಸಾರ್ವಜನಿಕ ಜೀವನಕ್ಕೂ ಭಾರೀ ನಷ್ಟವಾಗಿದೆ. ಅವರ ಸೇವಾ ಮನೋಭಾವ, ಸರಳತೆ ಹಾಗೂ…

ಮುಂದೆ ಓದಿ..
ಸುದ್ದಿ 

ಕೆಂಗೇರಿ ಮೆಟ್ರೋ ದುರಂತ: ಒಂದು ಆತ್ಮಹತ್ಯೆ, ಸಾವಿರಾರು ಪ್ರಯಾಣಿಕರ ಪರದಾಟ – ನಗರದ ಜೀವನಾಡಿ ಸ್ತಬ್ಧ!

Taluknewsmedia.com

Taluknewsmedia.comಕೆಂಗೇರಿ ಮೆಟ್ರೋ ದುರಂತ: ಒಂದು ಆತ್ಮಹತ್ಯೆ, ಸಾವಿರಾರು ಪ್ರಯಾಣಿಕರ ಪರದಾಟ – ನಗರದ ಜೀವನಾಡಿ ಸ್ತಬ್ಧ! ಬೆಂಗಳೂರಿನ ಮೆಟ್ರೋ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಆಘಾತಕಾರಿ ಸುದ್ದಿ ಬೆಂಗಳೂರಿನಲ್ಲಿ ಪ್ರತಿದಿನ ಬೆಳಿಗ್ಗೆ ಲಕ್ಷಾಂತರ ಮಂದಿ ತಮ್ಮ ದಿನವನ್ನು ಆರಂಭಿಸುವುದು ಮೆಟ್ರೋ ರೈಲಿನ ಸದ್ದಿನೊಂದಿಗೆ. ಎಂದಿನಂತೆ ತಮ್ಮ ಕೆಲಸಗಳಿಗೆ, ಕಾಲೇಜುಗಳಿಗೆ ಹೊರಟಿದ್ದ ಸಾವಿರಾರು ಪ್ರಯಾಣಿಕರಿಗೆ, ನಗರದ ಜೀವನಾಡಿಯಾದ ‘ನಮ್ಮ ಮೆಟ್ರೋ’ ಇಂದು ಬೆಳಿಗ್ಗೆ ದಿಢೀರ್ ನಿಂತುಹೋಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬಂದ ಒಂದು ಆಘಾತಕಾರಿ ಸುದ್ದಿ, ಇಡೀ ನೇರಳೆ ಮಾರ್ಗದ ಸಂಚಾರವನ್ನು ಸ್ಥಗಿತಗೊಳಿಸಿ, ನಗರವನ್ನೇ ಒಂದು ಕ್ಷಣ ಬೆಚ್ಚಿಬೀಳಿಸಿತು. ಈ ದುರಂತ ಕೇವಲ ಒಂದು ಜೀವದ ಅಂತ್ಯವಲ್ಲ, ಬದಲಿಗೆ ನಗರದ ಸಾರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಳಗಿನ ಜಾವದ ದುರಂತ: ಒಂದು ಜೀವ ಬಲಿ ಇಂದು ಬೆಳಿಗ್ಗೆ ಸುಮಾರು…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ದುರಂತ – ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರ್ ಡಿಕ್ಕಿ, ನಾಲ್ವರ ಸಾವು

Taluknewsmedia.com

Taluknewsmedia.comಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ದುರಂತ – ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರ್ ಡಿಕ್ಕಿ, ನಾಲ್ವರ ಸಾವು ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಮೀಪ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು ಸಿದ್ದಾಪುರ ಗ್ರಾಮದ ನಿವಾಸಿಗಳಾದ ವಿಶ್ವನಾಥ್ (17), ಪ್ರವೀಣ್ (22), ಗಣೇಶ್ (20) ಮತ್ತು ಪ್ರಜ್ವಲ್ (17) ಎಂದು ಗುರುತಿಸಲಾಗಿದೆ. ಕಾರು ಭೀಕರವಾಗಿ ಜಜ್ಜಿ ಹೋದ ಪರಿಣಾಮ ಮೃತಪಟ್ಟವರು ವಾಹನದೊಳಗೆ ಸಿಲುಕಿಕೊಂಡಿದ್ದು, ಜೆಸಿಬಿ ಸಹಾಯದಿಂದ ಮೃತದೇಹಗಳನ್ನು ಪೊಲೀಸರು ಹೊರತೆಗೆದರು. ಅಪಘಾತ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಪ್ರಾರಂಭಿಸಿದ್ದಾರೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಪ್ರಯತ್ನ…

ಮುಂದೆ ಓದಿ..
ಸುದ್ದಿ 

ಉದ್ಯಮಿಯ ಕೋಟ್ಯಂತರ ಹಣ ದೋಚಿದ ಕುತಂತ್ರಿ ಕಳ್ಳರಿಗೆ ಪೊಲೀಸ್ ಬಲೆ!

Taluknewsmedia.com

Taluknewsmedia.comಉದ್ಯಮಿಯ ಕೋಟ್ಯಂತರ ಹಣ ದೋಚಿದ ಕುತಂತ್ರಿ ಕಳ್ಳರಿಗೆ ಪೊಲೀಸ್ ಬಲೆ! ಹುಲಿಮಂಗಲದ ಎಲಿಗೆನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ್ದ ಕೋಟಿ ಮೌಲ್ಯದ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಮುನ್ನಡೆ ಸಿಕ್ಕಿದೆ. ಲಕ್ಷಾಂತರ ರೂ. ದೋಚಿ ಪರಾರಿಯಾಗಿದ್ದ ಇಬ್ಬರು ಅಪರಾಧಿಗಳನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶ್ರೀನಿವಾಸ ಮೂರ್ತಿ ಮತ್ತು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ನವೆಂಬರ್ 8ರಂದು ಸುನೀಲ್ ಕುಮಾರ್ ಅವರ ಫ್ಲಾಟ್‌ನಲ್ಲಿ ಈ ದೋಚಾಟ ನಡೆದಿತ್ತು. ಪ್ರಿಸಮ್ ಸರ್ಫೆಸ್ ಕೋಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲಕರಾಗಿರುವ ಸುನೀಲ್ ಕುಮಾರ್, ಉದ್ಯಮ ವ್ಯವಹಾರಕ್ಕಾಗಿ 1.16 ಕೋಟಿ ರೂ. ನಗದು ಮನೆಯಲ್ಲಿ ಇಟ್ಟುಕೊಂಡಿದ್ದರು. ಇದನ್ನೇ ಗುರಿಯಾಗಿಸಿಕೊಂಡ ಕಳ್ಳರು ಫ್ಲಾಟ್‌ಗೆ ನುಗ್ಗಿ ಸಂಪೂರ್ಣ ಹಣವನ್ನು ಕಸಿದುಕೊಂಡು ರಫ್ತು ಮಾಡಿದ್ದರು. ಅಪರಾಧಿಗಳಿಗಾಗಿ ವಿಶೇಷ ತಂಡವನ್ನು ರಚಿಸಿದ ಪೊಲೀಸರು, ನಿಖರ ಸುಳಿವುಗಳ ಆಧಾರದಲ್ಲಿ ಇಬ್ಬರನ್ನೂ ಬುಕ್ಕಿ ಹಾಕಿದ್ದು, 1.16 ಕೋಟಿ ರೂ. ನಗದು ಮೊತ್ತವನ್ನೂ ವಶಪಡಿಸಿಕೊಂಡಿದ್ದಾರೆ. ಪೊಲೀಸರ…

ಮುಂದೆ ಓದಿ..
ಅಂಕಣ ರಾಜಕೀಯ ಸುದ್ದಿ 

ಹೆಚ್.ಡಿ. ದೇವೇಗೌಡರು ಹಿಂದಿನ ಪಕ್ಷಕ್ಕೆ ದ್ರೋಹ ಮಾಡಿ ಹೊಸ ಪಕ್ಷ ಕಟ್ಟಿದರು ಎಂಬ ಹೇಳಿಕೆ ಇತಿಹಾಸಕ್ಕೆ ಹೊಂದುವುದಿಲ್ಲ.

Taluknewsmedia.com

Taluknewsmedia.comಹೆಚ್.ಡಿ. ದೇವೇಗೌಡರು ಹಿಂದಿನ ಪಕ್ಷಕ್ಕೆ ದ್ರೋಹ ಮಾಡಿ ಹೊಸ ಪಕ್ಷ ಕಟ್ಟಿದರು ಎಂಬ ಹೇಳಿಕೆ ಇತಿಹಾಸಕ್ಕೆ ಹೊಂದುವುದಿಲ್ಲ. ರಾಜಕೀಯದಲ್ಲಿ ಹೊಸ ಪಕ್ಷಗಳ ಹುಟ್ಟು, ಪಕ್ಷ ಬದಲಾವಣೆ ಸಾಮಾನ್ಯ. ಆದರೆ ಕೆಲವೊಮ್ಮೆ ಇದಕ್ಕೆ “ದ್ರೋಹ” ಎಂಬ ಲೇಬಲ್ ಜೋಡಿಸಲಾಗುತ್ತದೆ. ಮಾಜಿ ಪ್ರಧಾನಿ ಹಾಗೂ ಜನತಾ ದಳ (ಸೆಕ್ಯುಲರ್) ಪಕ್ಷದ ಸಂಸ್ಥಾಪಕರಾದ ಹೆಚ್.ಡಿ. ದೇವೇಗೌಡರ ರಾಜಕೀಯ ಜೀವನದಲ್ಲಿಯೂ ಈ ಪ್ರಶ್ನೆಯನ್ನು ಕೆಲವು ರಾಜಕೀಯ ವಲಯಗಳಲ್ಲಿ ಎತ್ತಲಾಗುತ್ತದೆ. ಆದ್ದರಿಂದ, ಈ ವಿಷಯವನ್ನು ಸ್ಪಷ್ಟ ರೂಪದಲ್ಲಿ ಇತಿಹಾಸಾಧಾರವಾಗಿ ನೋಡೋಣ. ಪ್ರಾರಂಭಿಕ ರಾಜಕೀಯ….. ಹೆಚ್.ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಕಾಂಗ್ರೆಸ್) ಪಕ್ಷದ ಮೂಲಕ ಆರಂಭಿಸಲಿಲ್ಲ ಎಂಬುದು ಗಮನಿಸಬೇಕಾದ ಮಹತ್ವದ ಸಂಗತಿ. ಅವರು ಮೊದಲಿಗೆ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ವಲಯದಲ್ಲಿ ಜನರಿಂದಲೇ ಬೆಂಬಲ ಪಡೆದು ರಾಜಕೀಯಕ್ಕೆ ಪ್ರವೇಶಿಸಿದರು. ನಂತರ ಜನತಾ ಪಕ್ಷದ ಚಳವಳಿಯ ಸಮಯದಲ್ಲಿ ಅವರು ಜನತಾ ಪರಿವಾರದ ರಾಜಕೀಯಕ್ಕೆ…

ಮುಂದೆ ಓದಿ..
ಸುದ್ದಿ 

ಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ?

Taluknewsmedia.com

Taluknewsmedia.comಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ? ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾಂಸ ಮಾರಾಟದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮದ ಗಂಭೀರ ಚಿತ್ರ ಮತ್ತೊಮ್ಮೆ ಹೊರಬಿದ್ದಿದೆ. ಸ್ಟೆರಾಯ್ಡ್ ತುಂಬಿದ ಕೋಳಿ ಮಾಂಸ ಮಾರಾಟವಾಗುತ್ತಿರುವುದು ಒಂದೆಡೆ ಇದ್ದರೆ, ಮತ್ತೊಂದೆಡೆ ಅವಧಿ ಮೀರಿದ, ಕೆಟ್ಟ ವಾಸನೆ ಬರುವ ಹಾಳಾದ ಕೋಳಿಯನ್ನು ಬಣ್ಣ ಬಳಿದು ತಾಜಾ ಎಂದು ಗ್ರಾಹಕರಿಗೆ ಮಾರಾಟ ಮಾಡುವ ಕಳಂಕಿತ ಕಾರ್ಯ ಬೆಳಕಿಗೆ ಬಂದಿದೆ. ನಗರದ ಕುರುಬರಹಳ್ಳಿ ಪ್ರದೇಶದಲ್ಲಿರುವ “MY Chicken & More” ಅಂಗಡಿ ಇದೀಗ ಈ ಆರೋಪದ ಕೇಂದ್ರವಾಗಿದೆ. ಮೀಲುವೆಂಬ ಗ್ರಾಹಕರು ಆ ಅಂಗಡಿಯಿಂದ ಚಿಕನ್ ಖರೀದಿಸಿದ ಬಳಿಕ ಮನೆಗೆ ಬಂದು ನೋಡುತ್ತಿದ್ದಂತೆಯೇ ಮಾಂಸ ಸಂಪೂರ್ಣವಾಗಿ ಹಾಳಾಗಿದ್ದು, ದುರ್ವಾಸನೆ ಹೊಳೆಯುತ್ತಿರೋದನ್ನು ಗಮನಿಸಿದ್ದರು. ತಕ್ಷಣವೇ ಅವರು ಮಾಂಸವನ್ನು ಹಿಡಿದು ಅಂಗಡಿಗೆ ಹಿಂತಿರುಗಿದಾಗ, ಅಂಗಡಿ ಮಾಲೀಕರು ಕ್ಷಮೆ ಕೇಳುವ ಬದಲು ಗ್ರಾಹಕರಿಗೇ ಕಿಡಿಕಾರಿದ್ದು, ಜಗಳವಾಡಿ ಬೆದರಿಕೆಯ…

ಮುಂದೆ ಓದಿ..
ಸುದ್ದಿ 

ಕೋಲಾರ: ಜಮೀನು ವಿವಾದ ಹಿನ್ನಲೆ ಯುವಕನ ಮೇಲೆ ಹಲ್ಲೆ

Taluknewsmedia.com

Taluknewsmedia.comಕೋಲಾರ: ಜಮೀನು ವಿವಾದ ಹಿನ್ನಲೆ ಯುವಕನ ಮೇಲೆ ಹಲ್ಲೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೈರಪಳ್ಳಿ ಗ್ರಾಮದಲ್ಲಿ ಜಮೀನು ವಿವಾದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ಕಾರ್ತಿಕ್ ಎನ್ನುವ ಯುವಕನ ಮೇಲೆ ಗ್ರಾಮದಲ್ಲಿನ ವೆಂಕಟರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಎಂಬುವವರಿಂದ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಘಟನೆಯ ದೃಶ್ಯಗಳು ಸ್ಥಳೀಯರ ಮೊಬೈಲ್ ಫೋನ್‌ಗಳಲ್ಲಿ ಸೆರೆದಲ್ಲಿದ್ದು, ಹಲ್ಲೆಯ ವೇಳೆ ಗಡಾರಿಯನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಯಲ್ಲಿ ಕಾರ್ತಿಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಜಮೀನು ವಿಚಾರದಲ್ಲಿ ನಡೆದ ವಾಗ್ವಾದವು ಕೈಯಂಚಿಗೆ ತಿರುಗಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ. ಪ್ರಕರಣದ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಜಮೀನಿನ ಖಾತೆ ಬದಲಾವಣೆಗೆ ಲಂಚ ಬೇಡಿಕೆ: ಮಂಜುನಾಥ ಲೋಕಾಯುಕ್ತ ಬಲೆಗೆ

Taluknewsmedia.com

Taluknewsmedia.comಜಮೀನಿನ ಖಾತೆ ಬದಲಾವಣೆಗೆ ಲಂಚ ಬೇಡಿಕೆ: ಮಂಜುನಾಥ ಲೋಕಾಯುಕ್ತ ಬಲೆಗೆ ತುಮಕೂರು: ಜಮೀನು ಖಾತೆ ಹಸ್ತಾಂತರಕ್ಕೆ ಲಂಚ ಬೇಡಿಕೆ ಇಟ್ಟಿದ್ದ ಕ್ಯಾತ್ಸಂದ್ರ ವೃತ್ತದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂಧಿಸಿದ್ದಾರೆ. ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ಬಿ. ಯೋಗೀಶ್ ಅವರ ತಾತನ ಹೆಸರಿನಲ್ಲಿದ್ದ 38 ಗುಂಟೆ ಜಮೀನನ್ನು ಅವರ ತಂದೆಯ ಹೆಸರಿಗೆ ವರ್ಗಾಯಿಸಲು ಮಂಜುನಾಥ ಬಳಿ ಕಾರ್ಯಾಚರಣೆಗಾಗಿ ಸಂಪರ್ಕಿಸಿದ್ದರು. ಈ ವೇಳೆ ಮಂಜುನಾಥ ಅವರು ಮೊದಲಿಗೆ ₹10 ಸಾವಿರ ಲಂಚವನ್ನು ವಸೂಲಿ ಮಾಡಿಕೊಂಡು, ಇನ್ನೂ ₹10 ಸಾವಿರ ನೀಡಬೇಕೆಂದು ಒತ್ತಡಹಾಕಿದಿದ್ದಾರೆಂದು ತಿಳಿದುಬಂದಿದೆ. ಹೆಚ್ಚುವರಿ ಹಣ ನೀಡಲು ಯೋಗೀಶ್ ಸಮ್ಮತಿಸದೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಅದರಂತೆ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಊರ್ಡಿಗೆರೆ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿ ಬಳಿ ಲಂಚದ ಹಣ ಸ್ವೀಕರಿಸುವ ಕ್ಷಣದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ…

ಮುಂದೆ ಓದಿ..