ಎಲ್ಲಾ ಕಂಬಳಗಳಿಗೆ ಪ್ರೋತ್ಸಾಹಧನ: ವಿಧಾನಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ್ ಘೋಷಣೆ

Taluknewsmedia.com

Taluknewsmedia.comಎಲ್ಲಾ ಕಂಬಳಗಳಿಗೆ ಪ್ರೋತ್ಸಾಹಧನ: ವಿಧಾನಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ್ ಘೋಷಣೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಯೋಜಿಸಲ್ಪಡುವ 23 ಕಂಬಳಗಳಿಗೆ ಪ್ರತಿವರ್ಷ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡುವ ನಿರ್ಧಾರವನ್ನು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್ ವಿಧಾನಸಭೆಯಲ್ಲಿ ಪ್ರಕಟಿಸಿದರು. ಈಗಾಗಲೇ 10 ಕಂಬಳಗಳಿಗೆ ಅನುದಾನ ಬಿಡುಗಡೆಗೊಂಡಿದ್ದು, ಉಳಿದ ಕಂಬಳಗಳಿಗೂ ಶೀಘ್ರದಲ್ಲಿ ನೆರವು ಒದಗಿಸಲಾಗುವುದು ಎಂದು ತಿಳಿಸಿದರು. ಮುಂದಿನ ವರ್ಷದಿಂದ ಎಲ್ಲಾ ಕಂಬಳಗಳಿಗೆ ಏಕಕಾಲದಲ್ಲಿ ಅನುದಾನ ಮಂಜೂರು ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದೂ ಅಭಿಪ್ರಾಯಪಟ್ಟರು. ಶೂನ್ಯಕಾಲದ ವೇಳೆ ವಿಷಯವನ್ನು ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್ ರೈ, ಕಂಬಳವನ್ನು ಸರ್ಕಾರ ಅಧಿಕೃತ ರಾಜ್ಯ ಕ್ರೀಡೆಯಾಗಿ ಘೋಷಿಸಿರುವುದನ್ನು ಸ್ವಾಗತಿಸಿದರು. ಕಳೆದ ವರ್ಷ ಕೆಲವು ಕಂಬಳಗಳಿಗೆ ಮಾತ್ರ ಅನುದಾನ ನೀಡಲಾಗಿದ್ದರಿಂದ, ಎಲ್ಲಾ 23 ಕಂಬಳಗಳಿಗೂ ಸಮಾನವಾಗಿ ನೆರವು ನೀಡಬೇಕೆಂದು ಅವರು ಮನವಿ ಮಾಡಿದರು. ಈ ಬೇಡಿಕೆಗೆ ಕರಾವಳಿ ಪ್ರದೇಶದ ಹಲವು…

ಮುಂದೆ ಓದಿ..