ಸುದ್ದಿ 

ರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ,

Taluknewsmedia.com

Taluknewsmedia.comರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ, ಮಂತ್ರಿಗಳಿಗೆ ತಮ್ಮ ಸ್ಥಾನ ಮಾತ್ರ ಮುಖ್ಯ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, “ರೈತರು ಇಂದು ಪ್ರವಾಹ, ಅತಿವೃಷ್ಠಿ, ಬೆಳೆ ನಾಶ — ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಆದರೆ ಮಂತ್ರಿಗಳು ಟಿಫನ್‌ ಮೇಜಿನಲ್ಲೇ ಕುಳಿತು ತಮ್ಮ ‘ಸೀಟಿಂಗ್’ ರಾಜಕಾರಣ ಮಾಡ್ತಾ ಇದ್ದಾರೆ. ಸಿಎಂ–ಡಿಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದರೂ, ಕನಿಷ್ಠ ಈ ಜಿಲ್ಲೆಗೆ ಸಂಬಂಧಪಟ್ಟ ಮಂತ್ರಿಗಳು ಇದ್ದಾರೆ ಅಲ್ವಾ? ಯಾರಾದರೂ ಒಂದು ದಿನ ಮುಂಚೆಯೇ ಬಂದು ರೈತರ ಜೊತೆ ಮಾತಾಡಬಹುದಿತ್ತು,” ಎಂದು ಆರೋಪಿಸಿದರು. ಅವರು ಮುಂದುವರಿಸಿದರು:“ರೈತರು ಹೋರಾಟಕ್ಕೆ ಬರ್ತಿದ್ದಾರೆ ಅಂತ ದಿನಾಂಕ ನಿಗದಿ ಪಡಿಸಿದ್ದೇವೆ ಅಂತ ಹೇಳಿದಾಗಲೇ ಸರ್ಕಾರ ಜಾಗೃತಿಯಾಗಬೇಕಾಗಿತ್ತು. ಒಂದು ದಿನ ಮುಂಚೆ ಬಂದಿದ್ದರೆ, ‘ಬೆಂಬಲ ಬೆಲೆ ಕೊಡ್ತೀವಿ, ಖರೀದಿ…

ಮುಂದೆ ಓದಿ..
ರಾಜಕೀಯ ಸುದ್ದಿ 

ಕಾಶಪ್ಪನವರ್ ಅವರಿಂದ ಕನ್ನೇರಿ ಶ್ರೀ ವಿರುದ್ಧ ತೀವ್ರ ವಾಗ್ದಾಳಿ: ‘ನೀನು ಆಕಾಶದಿಂದ ಇಳಿದು ಬಂದಿಲ್ಲ, ಕಾವಿ ಬಿಚ್ಚಿ ಗ್ರೌಂಡ್‌ಗೆ ಬಾ’

Taluknewsmedia.com

Taluknewsmedia.comಕಾಶಪ್ಪನವರ್ ಅವರಿಂದ ಕನ್ನೇರಿ ಶ್ರೀ ವಿರುದ್ಧ ತೀವ್ರ ವಾಗ್ದಾಳಿ: ‘ನೀನು ಆಕಾಶದಿಂದ ಇಳಿದು ಬಂದಿಲ್ಲ, ಕಾವಿ ಬಿಚ್ಚಿ ಗ್ರೌಂಡ್‌ಗೆ ಬಾ’ ಕನ್ಯೇರಿ ಶ್ರೀಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಶಪ್ಪನವರ್ ಅವರು, ಶ್ರೀಗಳ ವರ್ತನೆಗೆ ಹುಚ್ಚು ಹಿಡಿದಿದೆ ಮತ್ತು ‘ಮದ’ (ಅಹಂಕಾರ) ಏರಿದೆ ಎಂದು ಆರೋಪಿಸಿದ್ದಾರೆ. ಕನ್ನೇರಿ ಶ್ರೀಗಳು ‘ನಾನೇ ಶ್ರೇಷ್ಠ, ನಾನೇ ದೇವರು’ ಎಂದು ಹೇಳುತ್ತಿರುವುದು ಅವರ ಬಾಯಿಗೆ ಬಂದ ಮಾತುಗಳಾಗಿವೆ ಎಂದು ಟೀಕಿಸಿದರು. ದೇವಮಾನವನಲ್ಲ, ಮನುಷ್ಯನಾಗಿ ಹುಟ್ಟಿದ್ದಾನೆ: ಕನ್ನೇರಿ ಶ್ರೀಗಳು ಆಕಾಶದಿಂದ ಉದುರಿ ಬಂದವರೇ? ಅವರು ತಾಯಿ ಹೊಟ್ಟೆಗೆ ಜನಿಸಿ, ಮನುಷ್ಯನಾಗಿ ಹುಟ್ಟಿದ್ದಾರೆ. ಈ ಜಗತ್ತಿನಲ್ಲಿ ಇಲ್ಲಿಯವರೆಗೆ ಯಾರೂ ದೇವಮಾನವ ಅಥವಾ ಆಕಾಶದಿಂದ ಇಳಿದು ಬಂದ ಮಾನವ ಎಂದು ಹೇಳುವವರು ಇಲ್ಲ ಎಂದು ಅವರು ಪ್ರಶ್ನಿಸಿದರು. ಆದರೂ, ಕಾವಿ ಧರಿಸಿಕೊಂಡು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಕಾವಿ ಬಿಚ್ಚಿ ಮಾತನಾಡಲು ಸವಾಲು: ಯಾವುದೇ ಧರ್ಮದ…

ಮುಂದೆ ಓದಿ..
ರಾಜಕೀಯ ಸುದ್ದಿ 

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ತಾವು ಬಂಡಾಯಗಾರರು (ರೆಬೆಲ್ಸ್) ಅಲ್ಲ ಎಂದು ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ.

Taluknewsmedia.com

Taluknewsmedia.comಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ತಾವು ಬಂಡಾಯಗಾರರು (ರೆಬೆಲ್ಸ್) ಅಲ್ಲ ಎಂದು ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ಅವರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ದೃಢಪಡಿಸಿದರು. ಇಡೀ ದೇಶದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಉತ್ತರ ಪ್ರದೇಶ ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಅದು ಬಾಕಿ ಉಳಿದಿದೆ. ಆ ಪ್ರಕ್ರಿಯೆ ನಡೆಯುವವರೆಗೂ ನಮಗೊಂದು ಅವಕಾಶವಿದೆ ಎಂದು ಭಾವಿಸಿ ತಮ್ಮ ಅಭಿಪ್ರಾಯವನ್ನ ಹೇಳಿದ್ದೇವೆ ಎಂದು ಅವರು ವಿವರಿಸಿದರು. ತಾವು ಹೈಕಮಾಂಡ್ ನೀಡಿದ ನಿರ್ಧಾರವನ್ನು ಪಾಲನೆ ಮಾಡುವ ಕಾರ್ಯಕರ್ತರು ಮತ್ತು ಅದರಲ್ಲಿ ನಿರಂತರವಾಗಿ ಇರುತ್ತೇವೆ. ತಮ್ಮ ಅಭಿಪ್ರಾಯವನ್ನು ಒಬ್ಬರಾಗಿ ಹೇಳುವುದಕ್ಕಿಂತ ಗುಂಪಾಗಿ ಹೇಳಲಾಗಿದೆ. ಯಾರನ್ನೋ ವೈಯಕ್ತಿಕವಾಗಿ ಗುರಿ ಮಾಡಿ ಹೇಳಿಲ್ಲ, ಅಥವಾ ಯಾರು ದೊಡ್ಡವರು, ಯಾರು ಸಣ್ಣವರು ಎಂದು ಹೇಳಿಲ್ಲ. ಈಗಿರುವವರು ಕೆಟ್ಟವರು ಅಥವಾ ಒಳ್ಳೆಯವರು ಎಂಬ…

ಮುಂದೆ ಓದಿ..
ರಾಜಕೀಯ ಸುದ್ದಿ 

ಬಿಜೆಪಿಯಲ್ಲಿ ಅಧಿಕಾರದ ಕಿತ್ತಾಟದ ಟೀಕೆ ಮತ್ತು ರೆಬೆಲ್ ನಾಯಕರ ದೆಹಲಿ ಯಾತ್ರೆ..

Taluknewsmedia.com

Taluknewsmedia.comಬಿಜೆಪಿಯಲ್ಲಿ ಅಧಿಕಾರದ ಕಿತ್ತಾಟದ ಟೀಕೆ ಮತ್ತು ರೆಬೆಲ್ ನಾಯಕರ ದೆಹಲಿ ಯಾತ್ರೆ.. ಅಧಿಕಾರದ ಕಿತ್ತಾಟದಿಂದಾಗಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಾತನಾಡುತ್ತಾ ಟೀಕಿಸಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರವು ಬಿಜೆಪಿ ಹೋರಾಟ ಮಾಡಿದ ಬಳಿಕ ಸ್ಪಂದಿಸಿದೆ ಎಂದೂ ಅವರು ತಿಳಿಸಿದರು. ಈ ನಡುವೆ, ಬಿಜೆಪಿ ರೆಬೆಲ್ ನಾಯಕರು ದೆಹಲಿ ಯಾತ್ರೆ ಕೈಗೊಂಡಿದ್ದು, ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ತಂಡದಲ್ಲಿ ಜಿ.ಎಂ. ಸಿದ್ದೇಶ್ವರ್, ಬಿ.ವಿ. ನಾಯಕ್, ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹಾಗೂ ಅರಸೀಕೆರೆಯ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಭಾಗಿಯಾಗಿದ್ದರು.

ಮುಂದೆ ಓದಿ..
ಸುದ್ದಿ 

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಅಸ್ತ್ರ ಪ್ರಯೋಗ; ವೇಣುಗೋಪಾಲ್ ಜೊತೆ ಹೈ ವೋಲ್ಟೇಜ್ ಸಭೆ..

Taluknewsmedia.com

Taluknewsmedia.comಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಅಸ್ತ್ರ ಪ್ರಯೋಗ; ವೇಣುಗೋಪಾಲ್ ಜೊತೆ ಹೈ ವೋಲ್ಟೇಜ್ ಸಭೆ.. ಮೊನ್ನೆಷ್ಟೇ ರಾಜಕೀಯ ಶಾಶ್ವತವಲ್ಲ ಎಂದು ವೈರಾಗ್ಯದ ಮಾತುಗಳನ್ನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೆನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ 15 ನಿಮಿಷಕ್ಕೂ ಹೆಚ್ಚು ಕಾಲ ಹೈ ವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ. ಈ ಸಭೆಯ ನಂತರ, ಮಂಗಳೂರಿನ ಕಾವೇರಿ ಗೆಸ್ಟ್ ಹೌಸ್ನಲ್ಲಿ ನಡೆದ ಲಂಚ್ ಮೀಟಿಂಗ್‌ನಲ್ಲಿ ಸಿಎಂ, ವೇಣುಗೋಪಾಲ್ ಸೇರಿದಂತೆ ಸಚಿವರಾದ ಹೆಬ್ಬಾಳ್ಕರ್, ದಿನೇಶ್ ಗುಂಡುರಾವ್, ಜಮೀರ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಸ್ಪೀಕರ್ ಖಾದರ್ ಭಾಗಿಯಾಗಿದ್ದರು. ಈ ಭೋಜನಕೂಟದಲ್ಲಿ ನಾಟಿಕೋಳಿ ಸಾರು, ನೀರ್ದೋಸೆ ಮತ್ತು ವಿವಿಧ ಬಗೆಯ ಮೀನಿನ ಖಾದ್ಯಗಳು ಇದ್ದವು. ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಮತ್ತು ದೆಹಲಿಯಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.…

ಮುಂದೆ ಓದಿ..
ರಾಜಕೀಯ ಸುದ್ದಿ 

ದೆಹಲಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ

Taluknewsmedia.com

Taluknewsmedia.comದೆಹಲಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ “ನಾನು ಮೊದಲು ಒಂದು ಖಾಸಗಿ ಮದುವೆ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿದ್ದೇನೆ. ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ನನ್ನೊಂದಿಗೆ ಜೈಲಿನಲ್ಲಿ ಕೆಲಸ ಮಾಡಿದ ಒಬ್ಬ ಅಧಿಕಾರಿಯ ಮಗನ ಮದುವೆ ಇದೆ. ಅವರು ನನಗೆ ಅಗತ್ಯ ಸಂದರ್ಭದಲ್ಲಿ ಸಾಕಷ್ಟು ಸಹಾಯಮಾಡಿದ ಕಾರಣ, ಈ ಕಾರ್ಯಕ್ರಮಕ್ಕೆ ಹಾಜರಾಗುವುದು ನನ್ನ ಕರ್ತವ್ಯವೂ ಹೌದು. ಇದರ ಬಳಿಕ 14ನೇ ತಾರೀಖಿನ ‘ವೋಟ್ ಫಾರ್ ಸೂರಿ’ ರ್ಯಾಲಿಯ ವ್ಯವಸ್ಥೆಗಳನ್ನೂ ನೋಡಿಕೊಳ್ಳಬೇಕು. ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ವಸತಿ, ಆಹಾರ, ಸಾರಿಗೆ—ಟ್ರೈನ್‌ದಿಂದ ಬರುವವರು, ಬಸ್‌ ಕನೆಕ್ಷನ್, ಎಲ್ಲೆಲ್ಲಿ ತಂಗಬೇಕು—ಇವುಗಳನ್ನೆಲ್ಲ ಸಂಯೋಜಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಈ ಕಾರಣಕ್ಕಾಗಿ ಇಂದೇ ರಾತ್ರಿ ಕೆಲರೊಂದಿಗೆ ಸಭೆ ನಡೆಸಿ, ಅಗತ್ಯ ತಂಡಗಳನ್ನು ನಿಯೋಜಿಸಬೇಕಾಗಿದೆ. ನಾಳೆ ಬೆಳಗ್ಗೆ ಕ್ಯಾಬಿನೆಟ್ ಸಭೆಯೂ ಇದೆ. ಕ್ಯಾಬಿನೆಟ್‌ ನಂತರ ಮಂತ್ರಿಗಳೊಂದಿಗೆ ಸಭೆ ನಡೆಸಿ,…

ಮುಂದೆ ಓದಿ..
ರಾಜಕೀಯ ಸುದ್ದಿ 

ಬೀಗಸ್ಥಾನ ಎನ್ನುವ ರಾಜಣ್ಣ ಹೇಳಿಕೆಗೆ ಡಿಕೆಶಿಯ ತಿರುಗೇಟು

Taluknewsmedia.com

Taluknewsmedia.comಬೀಗಸ್ಥಾನ ಎನ್ನುವ ರಾಜಣ್ಣ ಹೇಳಿಕೆಗೆ ಡಿಕೆಶಿಯ ತಿರುಗೇಟು ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಸಚಿವ ರಾಜಣ್ಣ ಅವರು ಮಾಡಿದ್ದ “ಬೀಗಸ್ಥಾನ” ಎಂಬ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ಅವರು ಅಲ್ಲಿ ಹೋಗೋದು, ಇವರು ಇಲ್ಲಿ ಬರೋದು, ಊಟ ಮಾಡ್ಕೊಂಡು ಬರೋದು… ಈ ತರಹಕ್ಕೆ ಬ್ರೇಕ್‌ಫಾಸ್ಟ್ ಮೀಟಿಂಗ್ ಬೀಗಸ್ಥಾನದ ಮೀಟಿಂಗ್ ಅನ್ನೋ ತರ ಹೇಳಿರುವುದು ಸರಿಯಲ್ಲ. ನಾನು ರಾಜಣ್ಣ ಅವರ ಮನೆಗೆ ಹೋದದ್ದು ಅವರು ನನ್ನನ್ನು ತಮ್ಮ ಬರ್ತಡೇಗೆ ಕರಿದ್ರು, ಅದು ನಮ್ಮ ಸಾಮಾನ್ಯ ಆತ್ಮೀಯತೆ. ಇಲ್ಲಿ ಬೀಗಸ್ಥಾನ ಎಲ್ಲಿ ಬರುತ್ತದೆ?” ಎಂದು ಪ್ರಶ್ನಿಸಿದ್ದಾರೆ. ಶಿವಕುಮಾರ್ ಮುಂದುವರಿಸಿ, “ಎರಡೂ ಕಡೆ ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು ನಡೆದಿವೆ. ಯಾರಿಗೂ ಯಾವುದೇ ಗೊಂದಲ ಇರಲಿಲ್ಲ. ಗೊಂದಲ ಮಾಡ್ತಾ ಇದ್ದವರು ನೀವು (ಮಾಧ್ಯಮ). ಈಗ ಎಲ್ಲವೂ ಸ್ಪಷ್ಟವಾಗಿದೆ,” ಎಂದಿದ್ದಾರೆ. ಕ್ಯಾಬಿನೆಟ್ ರೀಶಫಲ್ ಬಗ್ಗೆ ಪ್ರತಿಕ್ರಿಯೆ… ಕ್ಯಾಬಿನೆಟ್ ರೀಶಫಲ್ ನಡೆಯಬಹುದೇ ಎಂಬ ಪ್ರಶ್ನೆಗೆ ಡಿಕೆಶಿ,…

ಮುಂದೆ ಓದಿ..
ರಾಜಕೀಯ ಸುದ್ದಿ 

ಕರ್ನಾಟಕದಲ್ಲಿ ಮುಖ್ಯಮಂತ್ರಿ ಪದವಿಯನ್ನು ಕುರಿತ ಜಟಾಪಟಿಯ ನಡುವೆ ಕಾಂಗ್ರೆಸ್‌ನಲ್ಲೀಗ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ.

Taluknewsmedia.com

Taluknewsmedia.comಕರ್ನಾಟಕದಲ್ಲಿ ಮುಖ್ಯಮಂತ್ರಿ ಪದವಿಯನ್ನು ಕುರಿತ ಜಟಾಪಟಿಯ ನಡುವೆ ಕಾಂಗ್ರೆಸ್‌ನಲ್ಲೀಗ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಎರಡು ಬ್ರೇಕ್ಫಾಸ್ಟ್ ಮೀಟಿಂಗ್‌ಗಳು ನಡೆದಿದ್ದು, ಮೊದಲ ಸಭೆ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ರಾಹುಲ್ ಗಾಂಧಿ ಅವರ ಮಧ್ಯೆ ನಡೆದ ಚರ್ಚೆಯ ಪರಿಣಾಮವಾಗಿ ಕೂಡಿಗೆ ಸೇರಿಸಲಾಯಿತು. ಎರಡನೇ ಬ್ರೇಕ್ಫಾಸ್ಟ್ ಸಭೆಗೆ ಮುನ್ನ ಸ್ವತಃ ಸೋನಿಯಾ ಗಾಂಧಿಯವರೇ ಖರ್ಗೆ ಅವರ ಜೊತೆ ಮಾತುಕತೆ ನಡೆಸಿ ವಿಶೇಷ ಸೂಚನೆಗಳನ್ನು ನೀಡಿದರೆಂಬ ಮಾಹಿತಿ ಹೊರಬಂದಿದೆ. ಕಳೆದ ಎರಡು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದು, ಪಕ್ಷದ ಕ್ರಿಯಾಶೀಲತೆಯಲ್ಲಿ ನೇಪಥ್ಯ ಪಾತ್ರವಹಿಸಿದ್ದ ಸೋನಿಯಾ ಗಾಂಧಿ, ಕರ್ನಾಟಕದ ಸಂಕಷ್ಟ ತೀವ್ರಗೊಂಡಾಗ ನೇರವಾಗಿ ಮಧ್ಯ ಪ್ರವೇಶಿಸಿರುವುದು ಗಮನಾರ್ಹ. ಅವರ ಅಭಿಪ್ರಾಯ ಪ್ರಕಾರ—ಬದಲಾವಣೆ ಮಾಡಬೇಕೆಂದಿದ್ದರೆ ತತ್‌ಕ್ಷಣವೇ ಮಾಡಬೇಕು; ವಿಳಂಬ ಮಾಡಿದರೆ ಪಕ್ಷಕ್ಕೆ ನಷ್ಟ ಅನಿವಾರ್ಯ. ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ವಿಳಂಬದ ನಿರ್ಧಾರಗಳಿಂದ ಕಾಂಗ್ರೆಸ್ ಬಲವಾದ ಹಿನ್ನಡೆ ಅನುಭವಿಸಿದ ಉದಾಹರಣೆಗಳನ್ನು ಅವರು ಸ್ಮರಿಸಿದ್ದಾರೆ. ಕರ್ನಾಟಕದಲ್ಲಿ…

ಮುಂದೆ ಓದಿ..
ರಾಜಕೀಯ ಸುದ್ದಿ 

ದತ್ತಪೀಠವು ಹಿಂದೂಗಳ ಮಹತ್ವದ ಶ್ರದ್ಧಾಕೇಂದ್ರ. ಈ ಪವಿತ್ರ ಸ್ಥಳಕ್ಕಾಗಿ ನಾವು ಸುದೀರ್ಘಕಾಲದಿಂದ ನಿರಂತರ ಹೋರಾಟವನ್ನು ನಡೆಸುತ್ತಿದ್ದೇವೆ.

Taluknewsmedia.com

Taluknewsmedia.comದತ್ತಪೀಠವು ಹಿಂದೂಗಳ ಮಹತ್ವದ ಶ್ರದ್ಧಾಕೇಂದ್ರ. ಈ ಪವಿತ್ರ ಸ್ಥಳಕ್ಕಾಗಿ ನಾವು ಸುದೀರ್ಘಕಾಲದಿಂದ ನಿರಂತರ ಹೋರಾಟವನ್ನು ನಡೆಸುತ್ತಿದ್ದೇವೆ. ಈ ಹೋರಾಟದಿಂದ ಹಲವಾರು ಬದಲಾವಣೆಗಳು ಕಂಡುಬಂದಿವೆ. ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಇದ್ದಂತೆ, ದತ್ತಪೀಠದಲ್ಲೂ ಕೂಡ ಅದೇ ರೀತಿಯ ಪೂಜೆ-ಪರಂಪರೆಗಳು ಜರುಗಬೇಕು. ದತ್ತಾತ್ರೇಯರ ಪಾದುಕೆಗೆ ಮುಕ್ತ ದರ್ಶನದ ಅವಕಾಶ ಕಲ್ಪಿಸಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇದು ಸರ್ಕಾರಕ್ಕೆ ನಮ್ಮ ಸ್ಪಷ್ಟವಾದ ಆಗ್ರಹ. ಇನ್ನೊಂದು ವಿಚಾರವೆಂದರೆ, ಡಿಕೆ ಶಿವಕುಮಾರ್ ಅವರು ಡೆಹಲಿಗೆ ತೆರಳಿರುವುದು ಮತ್ತು ಕೆಲವು ಬಿಜೆಪಿ ನಾಯಕರು ಹೈಕಮಾಂಡ್‌ ಭೇಟಿ ಮಾಡಲು ಡೆಹಲಿಯಲ್ಲೇ ತಂಗಿರುವುದು. ನಾವು ವಿರೋಧ ಪಕ್ಷವಾಗಿ ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡುವುದು ತಪ್ಪಲ್ಲ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಆಡಳಿತದ ಜವಾಬ್ದಾರಿ ಹೊಂದಿರುವವರು ಜನರ ಸಮಸ್ಯೆಗಳನ್ನು ಕೇಳದೇ, ತಮ್ಮ ಕುರ್ಚಿಯನ್ನು ಉಳಿಸಲು ಮತ್ತು ಪರಸ್ಪರ ಅಧಿಕಾರಕ್ಕಾಗಿ ಓಡಾಟ ನಡೆಸುತ್ತಿರುವುದು ರಾಜ್ಯದಲ್ಲಿ ಆಡಳಿತ ಶೂನ್ಯವಾಗಿದೆ ಎನ್ನುವ ಭಾವನೆಯನ್ನು…

ಮುಂದೆ ಓದಿ..
ರಾಜಕೀಯ ಸುದ್ದಿ 

ಡಿಕೆ ಶಿವಕುಮಾರ್ ಅವರು 2018ರಲ್ಲಿ ಕುಮಾರಸ್ವಾಮಿ ಅವರನ್ನು ಕೈತ್ತಿ ಬ್ರದರ್ ಅಂತ ಕರೆಯುತ್ತಿದ್ದರೆ, ಈಗ ಮತ್ತೆ ಸಿದ್ದರಾಮಯ್ಯರನ್ನು ಜೋಡೆ ಬ್ರದರ್ ಎಂದಿದ್ದಾರೆ.

Taluknewsmedia.com

Taluknewsmedia.comಡಿಕೆ ಶಿವಕುಮಾರ್ ಅವರು 2018ರಲ್ಲಿ ಕುಮಾರಸ್ವಾಮಿ ಅವರನ್ನು ಕೈತ್ತಿ ಬ್ರದರ್ ಅಂತ ಕರೆಯುತ್ತಿದ್ದರೆ, ಈಗ ಮತ್ತೆ ಸಿದ್ದರಾಮಯ್ಯರನ್ನು ಜೋಡೆ ಬ್ರದರ್ ಎಂದಿದ್ದಾರೆ. ಅಣ್ಣ, ಯಾರು ಯಾವಾಗ ಬ್ರದರ್ ಆಗ್ತಾರೋ, ಯಾವಾಗ ಬ್ರದರ್ ಪಟ್ಟಿಯಿಂದ ಕ್ಯಾನ್ಸಲ್ ಆಗ್ತಾರೋ ನಮಗೆ ಗೊತ್ತಿಲ್ಲ. ಅವರ ಪಕ್ಷದ ಒಳಗಂಗೆಯ ವಿಚಾರಗಳಿಗೆ ಸಂಬಂಧಪಟ್ಟಂತೆ ನಾವು ಚರ್ಚೆ ಮಾಡಬೇಕಾದ ವಿಷಯವೇ ಅಲ್ಲ. ನೀವು ನಮ್ಮನ್ನು ಅದಕ್ಕೆ ಕೇಳಬಾರದು. ಒಳಗಡೆ ಶಾಸಕರು ಯಾರಿಗೆ ಸಿಗ್ನೇಚರ್ ಹಾಕಿ ಕೂರಿದ್ದಾರೆ, ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರನ್ನು ಮಾಡಬಾರದು, ಎ–ಬಿ–ಸಿ ತಂಡ ಯಾವ ರೀತಿ ರಚನೆ ಮಾಡಿಕೊಂಡಿದೆ — ಈ ಎಲ್ಲಕ್ಕೂ ಉತ್ತರಿಸೋದು ಎಐಸಿಸಿ ಅಧ್ಯಕ್ಷರು ಅಥವಾ ಹೈಕಮಾಂಡ್. ಕಾಂಗ್ರೆಸ್‌ನಲ್ಲಿ ಏನಾದರೂ ಉಳಿದಿದ್ದರೆ, ಅದಕ್ಕೆ ಅವರು ಉತ್ತರಿಸಬೇಕು. ‘ಕಾಂಗ್ರೆಸ್‌ನಲ್ಲೇ ಸಿಗ್ನೇಚರ್ ಕ್ಯಾಂಪೇನ್ ನಡೀತಿದೆ’ ಅಂತ ಕೇಳ್ತೀರ. ನಮಗೆ ದಿನಕ್ಕೆ ಒಂದೊಂದು ಮಾಹಿತಿ ಬರುತ್ತೆ. ಮಾಧ್ಯಮದ ಸ್ನೇಹಿತರಿಗೆ ಗಂಟೆಗೆ ಒಂದೊಂದು ಮಾಹಿತಿ ಬರುತ್ತಿರಬಹುದು.…

ಮುಂದೆ ಓದಿ..