ಬೆಂಗಳೂರು ಕ್ವಾರಿ ದುರಂತ: ಆ 10 ನಿಮಿಷಗಳು ಮತ್ತು ನಿಯಮ ಮೀರಿ ಕಸಿದ ಏಳು ಜೀವಗಳ ಕರುಣಾಜನಕ ಕಥೆ..
Taluknewsmedia.comಬೆಂಗಳೂರು ಕ್ವಾರಿ ದುರಂತ: ಆ 10 ನಿಮಿಷಗಳು ಮತ್ತು ನಿಯಮ ಮೀರಿ ಕಸಿದ ಏಳು ಜೀವಗಳ ಕರುಣಾಜನಕ ಕಥೆ.. ಬೆಂಗಳೂರಿನ ಮಾಗಡಿ ರಸ್ತೆಯ ತಾವರೆಕೆರೆ ಸಮೀಪದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಆ ದುರಂತ ಕೇವಲ ಆಕಸ್ಮಿಕವಲ್ಲ; ಅದು ವ್ಯವಸ್ಥಿತ ಹತ್ಯೆ. ಬುಧವಾರ ಸಂಜೆ 4 ಗಂಟೆಗೆ ಪಾಳಿಗೆ ಹಾಜರಾಗಿದ್ದ ಆ 20 ಮಂದಿ ಕಾರ್ಮಿಕರು ಇಡೀ ರಾತ್ರಿ ಬೆವರು ಸುರಿಸಿ ಕೆಲಸ ಮಾಡಿದ್ದರು. ಗುರುವಾರ ಬೆಳಿಗ್ಗೆ 7 ಗಂಟೆಗೆ ಅವರ ಕೆಲಸ ಮುಗಿಯಬೇಕಿತ್ತು. ಇನ್ನೇನು 10 ನಿಮಿಷ ಕಳೆದಿದ್ದರೆ ಅವರು ಸಾವಿನ ದವಡೆಯಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಆದರೆ ವಿಧಿಯಾಟ ಮತ್ತು ಮಾಲೀಕರ ಲಾಭಬೋಕಿತನ ಬೆಳಿಗ್ಗೆ 6.50ಕ್ಕೆ ಬಂಡೆಯ ರೂಪದಲ್ಲಿ ಅಪ್ಪಳಿಸಿತು. ಕೇವಲ 10 ನಿಮಿಷಗಳ ಅಂತರದಲ್ಲಿ ಏಳು ಜೀವಗಳು ಮಣ್ಣಿನ ಪಾಲಾದವು. ಇಡೀ ರಾತ್ರಿ ದುಡಿದು ದಣಿದಿದ್ದ ದೇಹಗಳು ಮನೆಗೆ ಮರಳುವ ಬದಲು ಶವಾಗಾರಕ್ಕೆ…
ಮುಂದೆ ಓದಿ..
