ಗುರುಮುಖದಲ್ಲಿ ಪಡೆದ ಶಿಕ್ಷಣೇ ಶ್ರೇಷ್ಠ: ಮಹಾಲಕ್ಷ್ಮೀ ನಟರಾಜನ್ ಅಭಿಮತ
Taluknewsmedia.comಗುರುಮುಖದಲ್ಲಿ ಪಡೆದ ಶಿಕ್ಷಣೇ ಶ್ರೇಷ್ಠ: ಮಹಾಲಕ್ಷ್ಮೀ ನಟರಾಜನ್ ಅಭಿಮತ ಬೆಂಗಳೂರು: ವ್ಯಕ್ತಿಯ ಜೀವನಯಾತ್ರೆಯಲ್ಲಿ ಗುರುಗಳು ನಿರ್ವಹಿಸುವ ಪಾತ್ರ ಅಪ್ರತಿಮ. ಗುರುಮುಖದಲ್ಲಿ ಕಲಿತದ್ದೇ ನಿಜವಾದ ವಿದ್ಯೆ ಎನ್ನುವ ವಿಚಾರವನ್ನು ಪ್ರತಿಪಾದಿಸುತ್ತಾ, ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಕಲಾವಿದೆ ಮಹಾಲಕ್ಷ್ಮೀ ನಟರಾಜನ್ ಅವರು, “ಸಾಧನೆಯ ಮಾರ್ಗದಲ್ಲಿ ಗುರುಗಳ ಮಾರ್ಗದರ್ಶನವೇ ಶಾಶ್ವತ ಬೆಳಕು” ಎಂದು ಅಭಿಪ್ರಾಯ ಪಟ್ಟರು. ಮಲ್ಲೇಶ್ವರಂನ ಸೇವಾ ಸದನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ‘ಆರಾಧನಾ’ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಇಂದಿನ ಕಾಲದಲ್ಲಿ ಹೆಚ್ಚಾಗುತ್ತಿರುವ ಆನ್‌ಲೈನ್ ಕಲಿಕೆಯ ಬಗ್ಗೆ ಚರ್ಚಿಸಿ, “ಆನ್‌ಲೈನ್ ಮೂಲಕ ಕಲಿಕೆಯಾದರೂ, ಅದು ಗುರುಸಾನ್ನಿಧ್ಯಕ್ಕೆ ಸಮಾನವಾಗಲಾರದು” ಎಂದು ಹೇಳಿದರು. ಗುರುಭಕ್ತಿಗೆ ನಿದರ್ಶನವಾಗಿ ದಿಗ್ಗಜರಾದ ರಾಜಂ ಮತ್ತು ಕಲಾನಿಧಿ ನಾರಾಯಣನ್ ಅವರಿಗೆ ಈ ಉತ್ಸವವನ್ನು ಸಮರ್ಪಿಸಿರುವುದನ್ನು ಅವರು ಮೆಚ್ಚಿದರು. ಈ ಉತ್ಸವವನ್ನು ಖ್ಯಾತ ಸಂಗೀತ ವಿದ್ವಾಂಸ ಡಾ. ಟಿ.ವಿ. ರಾಮಪ್ರಸಾದ್…
ಮುಂದೆ ಓದಿ..
