ಸುದ್ದಿ 

ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ. ಮೇಟಿ ನಿಧನ

Taluknewsmedia.com

Taluknewsmedia.comಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ. ಮೇಟಿ ನಿಧನ ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ. ಮೇಟಿ (79) ಇಂದು ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರು ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಹುಲ್ಲಪ್ಪ ಯಮನಪ್ಪ ಮೇಟಿ ಎಂದೇ ಪರಿಚಿತರಾದ ಹೆಚ್.ವೈ. ಮೇಟಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಬಿಜೆಪಿಯ ವೀರಣ್ಣ ಚರಂತಿಮಠರನ್ನು ಸೋಲಿಸಿದ್ದರು. 2018ರಲ್ಲಿ ಸೋಲು ಕಂಡಿದ್ದರೂ, ರಾಜಕೀಯ ಹೋರಾಟ ಮುಂದುವರಿಸಿಕೊಂಡು ಮತ್ತೆ ಜನರ ವಿಶ್ವಾಸ ಗೆದ್ದಿದ್ದರು. 2013ರಿಂದ 2016ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಬಕಾರಿ ಖಾತೆ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮೇಟಿ, ನಂತರ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ…

ಮುಂದೆ ಓದಿ..
ಸುದ್ದಿ 

ಹಾಸನ: ಬುದ್ದಿ ಹೇಳಿದವನನ್ನೇ ಕಲ್ಲಿನಿಂದ ಕೊಂದ ಕ್ರೂರ ಘಟನೆ!

Taluknewsmedia.com

Taluknewsmedia.comಹಾಸನ: ಬುದ್ದಿ ಹೇಳಿದವನನ್ನೇ ಕಲ್ಲಿನಿಂದ ಕೊಂದ ಕ್ರೂರ ಘಟನೆ! ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಮಾನವೀಯತೆಯ ಮರೆತ ಕ್ರೂರ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿದ್ದ ವ್ಯಕ್ತಿಗೆ ಬುದ್ದಿ ಹೇಳಿದ ಸ್ನೇಹಿತನನ್ನೇ ಕಲ್ಲಿನಿಂದ ಹೊಡೆದು ಕೊಂದ ಘಟನೆ ಸ್ಥಳೀಯರಲ್ಲಿ ಶೋಕ ಮೂಡಿಸಿದೆ. ಮೃತರನ್ನು ರಾಂಪುರ ಗ್ರಾಮದ ಗಿರೀಶ್ (44) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ರಮೇಶ್ (23), ಅವನೇ ಗಿರೀಶ್ ಅವರ ಸ್ನೇಹಿತನಾಗಿದ್ದಾನೆ. ಮಾಹಿತಿಯ ಪ್ರಕಾರ, ಗಿರೀಶ್ ಮತ್ತು ರಮೇಶ್ ಇಬ್ಬರೂ ಒಂದೇ ಊರಿನವರಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದರು. ನೆನ್ನೆ ಸಂಜೆ ಕೆಲಸ ಮುಗಿಸಿ ಗಿರೀಶ್ ಅಂಗಡಿ ಬಳಿ ಕುಳಿತಿದ್ದಾಗ, ಕುಡಿದ ಅಮಲಿನಲ್ಲಿ ಬಂದ ರಮೇಶ್ ಅಸಭ್ಯವಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸಿದ ಗಿರೀಶ್, ಅವನಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಬುದ್ದಿ ಕೇಳಬೇಕಾದ ರಮೇಶ್ ಸಿಟ್ಟಿನಿಂದ ಉಗ್ರನಾಗಿ, ಹತ್ತಿರದ ಕಲ್ಲನ್ನು ತೆಗೆದು ಗಿರೀಶ್ ಅವರ…

ಮುಂದೆ ಓದಿ..
ಸುದ್ದಿ 

ರಾಜ್ಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಿಗೆ ನಿಷೇಧ — ಪರಿಸರ ಸ್ನೇಹಿ ನೀರಿನ ವ್ಯವಸ್ಥೆಗೆ ಮುಖ್ಯಮಂತ್ರಿ ಆದೇಶ

Taluknewsmedia.com

Taluknewsmedia.comರಾಜ್ಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಿಗೆ ನಿಷೇಧ — ಪರಿಸರ ಸ್ನೇಹಿ ನೀರಿನ ವ್ಯವಸ್ಥೆಗೆ ಮುಖ್ಯಮಂತ್ರಿ ಆದೇಶ ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಸಭೆ–ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಸುವಂತಿಲ್ಲ. ಈ ಕುರಿತಂತೆ ಮುಖ್ಯಮಂತ್ರಿ ಅವರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಹಿಂದೆಯೇ ಸರ್ಕಾರದಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಲು ಸೂಚನೆ ನೀಡಲಾಗಿತ್ತು. ಈಗ ಆ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಂಬಂಧಿತ ಇಲಾಖೆಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಸಭೆಗಳಲ್ಲಿ ಸ್ಟೀಲ್ ಅಥವಾ ಗಾಜಿನ ಪಾತ್ರೆಗಳಲ್ಲಿ ನೀರಿನ ವ್ಯವಸ್ಥೆ ಮಾಡುವಂತೆಯೂ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಅದರ ಜೊತೆಗೆ, ಮುಖ್ಯಮಂತ್ರಿ ಹಾಗೂ ಸಚಿವರ ಸಭೆಗಳಲ್ಲಿ, ಸಚಿವಾಲಯದಲ್ಲಿ ಹಾಗೂ ರಾಜ್ಯದ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ (ಕೆಎಂಎಫ್)ಯ ‘ನಂದಿನಿ’ ಉತ್ಪನ್ನಗಳನ್ನು…

ಮುಂದೆ ಓದಿ..
ಸುದ್ದಿ 

ಮರ ಮತ್ತು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕಠಿಣ ಕ್ರಮ: ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಎಚ್ಚರಿಕೆ

Taluknewsmedia.com

Taluknewsmedia.comಮರ ಮತ್ತು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕಠಿಣ ಕ್ರಮ: ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಎಚ್ಚರಿಕೆ ಬೆಂಗಳೂರು: ನಗರದ ಸೌಂದರ್ಯ ಹಾಳುಮಾಡುವ ರೀತಿಯಲ್ಲಿ ಮರಗಳು ಮತ್ತು ಸಾರ್ವಜನಿಕ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಅವರು ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ದೇವರಬೀಸನಹಳ್ಳಿ ಪ್ರದೇಶದಲ್ಲಿ ಮರಗಳ ಮೇಲಿನ ಪೋಸ್ಟರ್‌ಗಳನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಈ ಸಂಬಂಧ ಅಧಿಕಾರಿಗಳಿಗೆ ತಕ್ಷಣವೇ ಅಸ್ತಿತ್ವದಲ್ಲಿರುವ ಎಲ್ಲಾ ಪೋಸ್ಟರ್‌ಗಳನ್ನು ತೆರವುಗೊಳಿಸಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳು ಮರುಕಳಿಸಿದರೆ ಸಂಬಂಧಿಸಿದವರಿಗೆ ದಂಡ ವಿಧಿಸಲು ಸೂಚನೆ ನೀಡಿದರು. ಪರಿಶೀಲನೆಯ…

ಮುಂದೆ ಓದಿ..
ಸುದ್ದಿ 

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ವಿಚಾರಣೆ ನವೆಂಬರ್‌ 10ಕ್ಕೆ ಮುಂದೂಡಿಕೆ

Taluknewsmedia.com

Taluknewsmedia.comರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ವಿಚಾರಣೆ ನವೆಂಬರ್‌ 10ಕ್ಕೆ ಮುಂದೂಡಿಕೆ ಬೆಂಗಳೂರು, ನ.3: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಆರೋಪಿಗಳ ವಿಚಾರಣೆಯನ್ನು ಬೆಂಗಳೂರಿನ 57ನೇ ಸೆಷನ್ ಕೋರ್ಟ್ ನವೆಂಬರ್‌ 10ಕ್ಕೆ ಮುಂದೂಡಿದೆ. ಜಾಮೀನು ರದ್ದುಪಟ್ಟು ಮತ್ತೆ ಜೈಲಿನಲ್ಲಿರುವ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳು ನವೆಂಬರ್‌ 3ರಂದು ಭಾರೀ ಭದ್ರತೆಯ ಮಧ್ಯೆ ಖುದ್ದು ಕೋರ್ಟ್‌ಗೆ ಹಾಜರಾದರು. ಈ ಸಂಬಂಧ ಕೋರ್ಟ್ ಖುದ್ದು ಹಾಜರಾತಿ ನೀಡಲು ಸೂಚನೆ ನೀಡಿತ್ತು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯ ವಿರುದ್ಧದ ವಿಚಾರಣೆಯು ಇಂದು ನಡೆಯಬೇಕಿದ್ದರೂ, ಕೋರ್ಟ್ ಮುಂದಿನ ದಿನಾಂಕ ನವೆಂಬರ್‌ 10ಕ್ಕೆ ಮುಂದೂಡಿದೆ. ಸುಪ್ರೀಂ ಕೋರ್ಟ್ ದರ್ಶನ್‌ಗೆ ನೀಡಿದ್ದ ಜಾಮೀನು ರದ್ದುಪಡಿಸಿದ ನಂತರ, ಅವರು ಆಗಸ್ಟ್‌ 14ರಂದು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೇರಿದ್ದರು. ಆ ನಂತರದಿಂದ ಕೋರ್ಟ್…

ಮುಂದೆ ಓದಿ..
ಸುದ್ದಿ 

ಟಿಪ್ಪರ್‌ನಿಂದ ಬಿದ್ದ ಕಲ್ಲು ಮಹಿಳಾ ಪೇದೆಗೆ ಗಂಭೀರ ಗಾಯ

Taluknewsmedia.com

Taluknewsmedia.comಟಿಪ್ಪರ್‌ನಿಂದ ಬಿದ್ದ ಕಲ್ಲು ಮಹಿಳಾ ಪೇದೆಗೆ ಗಂಭೀರ ಗಾಯ ಗುಡಿಬಂಡೆ: ಬೋಮ್ಮಗಾನಹಳ್ಳಿ ಕೆರೆಯ ಕಟ್ಟೆಯ ಮೇಲಿನ ರಸ್ತೆ ಮೇಲೆ ನಡೆದ ದುರ್ಘಟನೆಯಲ್ಲಿ ಮಹಿಳಾ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬತ್ತಲಹಳ್ಳಿ ಗ್ರಾಮದ ಸಮೀಪದ ಜಲ್ಲಿ ಕ್ರಷರ್‌ನಿಂದ ಚಿಕ್ಕಬಳ್ಳಾಪುರದ ದಿಕ್ಕಿಗೆ ತೆರಳುತ್ತಿದ್ದ ಟಿಪ್ಪರ್ ವಾಹನದಿಂದ ಆಕಸ್ಮಿಕವಾಗಿ ಬಿದ್ದ ದೊಡ್ಡ ಕಲ್ಲು, ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರಳ ಕಾಲಿಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಹಸೀನಾ (27) ಎಂದು ಗುರುತಿಸಲಾಗಿದ್ದು, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿದ್ದಾರೆ. ಸ್ಥಳೀಯರು ಹಾಗೂ ಸಹೋದ್ಯೋಗಿಗಳು ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆಯಿಂದ ಅವರ ಬೈಕ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಟಿಪ್ಪರ್ ವಾಹನದಿಂದ ಕಲ್ಲು ಹೇಗೆ ಬಿದ್ದಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟಿಪ್ಪರ್ ವಾಹನಗಳ ವೇಗದ ಓಟ ಹಾಗೂ…

ಮುಂದೆ ಓದಿ..
ಸುದ್ದಿ 

ಗ್ಯಾಸ್ ಸಬ್ಸಿಡಿ ಬಂದ್ ಆಗುತ್ತೆ ಎಚ್ಚರ! ತಕ್ಷಣ ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ

Taluknewsmedia.com

Taluknewsmedia.comಗ್ಯಾಸ್ ಸಬ್ಸಿಡಿ ಬಂದ್ ಆಗುತ್ತೆ ಎಚ್ಚರ! ತಕ್ಷಣ ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಕೇಂದ್ರ ಸರ್ಕಾರದ ಹೊಸ ಎಚ್ಚರಿಕೆ.. ದೇಶದಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಹೊಸ ಎಚ್ಚರಿಕೆ ನೀಡಲಾಗಿದೆ. ಸರ್ಕಾರದಿಂದ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ನೇರವಾಗಿ ಜಮೆಯಾಗುತ್ತಿದ್ದರೆ, ಈಗ ನೀವು ಒಂದು ಅಗತ್ಯ ಕಾರ್ಯವನ್ನು ತಕ್ಷಣ ಪೂರ್ಣಗೊಳಿಸಲೇಬೇಕು. ಇಲ್ಲದಿದ್ದರೆ ನಿಮ್ಮ ಸಬ್ಸಿಡಿ ಸೌಲಭ್ಯ ಸಂಪೂರ್ಣವಾಗಿ ನಿಂತು ಹೋಗಲಿದೆ. ಹೊಸ ನಿಯಮ ಏನು?.. ಭಾರತದ ಮೂರು ಪ್ರಮುಖ ತೈಲ ಕಂಪನಿಗಳಾದ.. ಇಂಡಿಯನ್ ಆಯಿಲ್ (IOC) ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಭಾರತ್ ಪೆಟ್ರೋಲಿಯಂ (BPCL) ಇವುಗಳು ಪೆಟ್ರೋಲಿಯಂ ಸಚಿವಾಲಯದ ನಿರ್ದೇಶನದಂತೆ ಎಲ್ಲ ಎಲ್‌ಪಿಜಿ ಗ್ರಾಹಕರಿಗೂ ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಿವೆ. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಸೇರಿದಂತೆ ಸಬ್ಸಿಡಿ ಪಡೆಯುವ ಪ್ರತಿಯೊಬ್ಬರೂ ಈ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ!

Taluknewsmedia.com

Taluknewsmedia.comಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ! ಬೆಂಗಳೂರು ನಗರದ ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ಮಂಗಳಮುಖಿಯರ ಗ್ಯಾಂಗ್ ನಡುವೆ ನಡೆದ ಘಟನೆ ಈಗ ಸಂಚಲನ ಸೃಷ್ಟಿಸಿದೆ. ಕೆಆರ್‌ಪುರದ ಗ್ಯಾಂಗ್‌ಗೆ ಸೇರಿದ್ದ ಸುಕನ್ಯಾ ಎಂಬ ಮಂಗಳಮುಖಿ ಮೇಲೆ, ಬೊಮ್ಮನಹಳ್ಳಿಯ ಪ್ರೀತಿ ಮತ್ತು ಚಿನ್ನಿ ನೇತೃತ್ವದ ಮಂಗಳಮುಖಿಯರ ತಂಡ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ಮಂಗಳಮುಖಿ ಸುಕನ್ಯಾ ತಮ್ಮ ಹಳೆಯ ತಂಡ ಬಿಟ್ಟು ಹೊಸ ತಂಡ ಸೇರಿದ್ದಕ್ಕೆ ಕೋಪಗೊಂಡ ಪ್ರೀತಿ ಹಾಗೂ ಸಹಚರರು ಸುಕನ್ಯಾಳನ್ನು ಕೆಆರ್‌ಪುರದಿಂದ ಕಿಡ್ನ್ಯಾಪ್ ಮಾಡಿ ಬೊಮ್ಮನಹಳ್ಳಿಗೆ ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಹಿಟ್ಟಿನ ದೊಣ್ಣೆ, ಸೌಟು ಹಾಗೂ ಕೈಗೆ ಸಿಕ್ಕ ವಸ್ತುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ತಲೆಯನ್ನು ಬೋಳಿಸಿ, ಕಾಲಿನಿಂದ ತಳ್ಳಿ, ಮನಸೋ ಇಚ್ಚೆ ಹೊಡೆದಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಹಲ್ಲೆಯ ವೇಳೆ ಮತ್ತೊಬ್ಬ ಮಂಗಳಮುಖಿಗೆ…

ಮುಂದೆ ಓದಿ..
ಸುದ್ದಿ 

ಇವರೆಂತಹ ಸ್ವಾಮಿಗಳು,

Taluknewsmedia.com

Taluknewsmedia.comಇವರೆಂತಹ ಸ್ವಾಮಿಗಳು, ಪರಿವರ್ತನೆಯ ಅಗತ್ಯವಿದೆ……. ಹಿಂದೂ ಧರ್ಮದ ಅಥವಾ ಮತದ ಅಥವಾ ಜೀವನ ವಿಧಾನದ ಅಥವಾ ಭಾರತೀಯ ಧಾರ್ಮಿಕ – ಆಧ್ಯಾತ್ಮಿಕ ಜೀವನದ ,ಸ್ವಾಮೀಜಿ – ಮಹರ್ಷಿ – ಗುರೂಜಿ – ಮಠಾಧಿಪತಿ – ಪೀಠಾಧಿಪತಿ – ಧರ್ಮಾಧಿಕಾರಿ ಎಂಬ ಪರಿಕಲ್ಪನೆಯನ್ನು ಬದಲಾಯಿಸೋಣವೇ ?ಅಥವಾಆ ರೀತಿಯ ವ್ಯಕ್ತಿಗಳ ವ್ಯಕ್ತಿತ್ವಗಳನ್ನು ಪುನರ್ ರೂಪಿಸೋಣವೇ ? ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ಕಾವಿಧಾರಿ ಸ್ವಾಮಿಗಳು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ತುಂಬಾ ಗಾಬರಿ ಮೂಡಿಸಿದೆ……… ಕೆಲವೊಮ್ಮೆ ಅತಿಯಾದ ಕುಡುಕರು, ಅರೆ ಹುಚ್ಚರು, ತೀರಾ ಅಂಧಾಭಿಮಾನಿಗಳು, ಉಡಾಫೆ ವ್ಯಕ್ತಿತ್ವದವರು, ಭಟ್ಟಂಗಿಗಳು ಮಾತನಾಡುವುದನ್ನು ಕೇಳಿದ್ದೇವೆ. ಅವರು ಹಿಂದೆ ಮುಂದೆ ನೋಡದೆ ಬಾಯಿಗೆ ಬಂದಂತೆ ಯಾರನ್ನೋ ಇಂದ್ರ ಚಂದ್ರ ಎನ್ನುತ್ತಾರೆ ಇಲ್ಲವೇ ಕೆಟ್ಟ ಕೊಳಕು ಮಾತುಗಳಲ್ಲಿ ನಿಂದಿಸುತ್ತಾರೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರನ್ನು ಸಹಜ ಮನಸ್ಥಿತಿಯ ಆರೋಗ್ಯವಂತ ವ್ಯಕ್ತಿಗಳು ಎಂದು…

ಮುಂದೆ ಓದಿ..
ಸಿನೆಮಾ ಸುದ್ದಿ 

ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ

Taluknewsmedia.com

Taluknewsmedia.comವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಭಜರಂಗ ಸಿನೆಮಾ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ಅವರ ನಿರ್ಮಾಣದಲ್ಲಿ, ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಧಾರವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿತು. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವಿರೇನ್ ಸಾಗರ್ ಬಗಾಡೆ, “ಇದು ಮಕ್ಕಳ ಚಿತ್ರವಾದರೂ ಎಲ್ಲ ವಯಸ್ಸಿನವರಿಗೂ ಹತ್ತಿರವಾಗುವಂತಹ ಸಾಮಾಜಿಕ ಸಂದೇಶ ಹೊಂದಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಷ್ಟೇ ಅಲ್ಲ, ಆ ಶಾಲೆಗಳಲ್ಲಿ ಕಲಿತವರೂ ಮುಂದಾಗಿ ನೆರವಾಗಬೇಕು ಎಂಬ ಆಶಯವನ್ನು ಕಥೆಯಲ್ಲಿ ತೋರಿಸಿದ್ದೇವೆ” ಎಂದರು. ಕಥೆಯ ಹಿನ್ನಲೆ ಕುರಿತು ವಿವರಿಸುತ್ತಾ, “ರೈಟ್ ಬ್ರದರ್ಸ್ ಫ್ಲೈಟ್ ಇಂಜಿನಿಯರಿಂಗ್‌ನಲ್ಲಿ ಸಾಧನೆ ಮಾಡಿದಂತೆ, ನಮ್ಮ ಕಥೆಯ…

ಮುಂದೆ ಓದಿ..