ಸುದ್ದಿ 

ರಸ್ತೆ ಅಪಘಾತ: ಶಿಕ್ಷಕಿ ಮತ್ತು ಸಹೋದ್ಯೋಗಿಗೆ ತೀವ್ರ ಗಾಯ – ಲಾರಿ ಚಾಲಕರ ವಿರುದ್ಧ ಪ್ರಕರಣ ದಾಖಲು

Taluknewsmedia.com

Taluknewsmedia.comಚಿಕ್ಕಬಿದಿರುಕಲ್ಲು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಸ್‌.ಎನ್‌.ಎಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ಮತ್ತು ಸಹೋದ್ಯೋಗಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ರಾ.ಹೆ. 4ರ 8ನೇ ಮೈಲಿನ ಶೋಭಾ ಅಪಾರ್ಟ್ಮೆಂಟ್ ಎದುರು ಸಂಭವಿಸಿದೆ. ಶ್ರೀಮತಿ ಆಶಾರಾಣಿ ಎಚ್.ಸಿ (36), ನಂದಿನಿ ಲೇಔಟ್ 4ನೇ ಬ್ಲಾಕ್ ನಿವಾಸಿ ಹಾಗೂ ಶಾಲಾ ಶಿಕ್ಷಕಿ, ಅವರು ತಮ್ಮ ಯಮಹಾ ಸ್ಕೂಟರ್ (ನಂ. KA-03-HT-0464)ನಲ್ಲಿ ಸಹೋದ್ಯೋಗಿ ಆಯಾ ಶಾರಧಾ (45) ಅವರನ್ನು ಹಿಂಬದಿ ಸವಾರಳಾಗಿ ಕೂರಿಸಿಕೊಂಡು, ಸರ್ಕಾರಿ ಪಠ್ಯಪುಸ್ತಕ ತರಲೆಂದು ಚಿಕ್ಕಬಿದಿರುಕಲ್ಲು ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಶೋಭಾ ಅಪಾರ್ಟ್ಮೆಂಟ್ ಎದುರು ಸವಾರಿಯಲ್ಲಿದ್ದಾಗ, ಹಿಂದಿನಿಂದ ಅತೀ ವೇಗವಾಗಿ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ (ನಂ KA-01-AL-6959) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಝಟ್ಟಿನಿಂದ…

ಮುಂದೆ ಓದಿ..
ಸುದ್ದಿ 

ಮರಿಯಣ್ಯಪಾಳ್ಯದಲ್ಲಿ ಅಪಘಾತ: ಹಿರಿಯ ನಾಗರಿಕನಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲು

Taluknewsmedia.com

Taluknewsmedia.comಮರಿಯಣ್ಯಪಾಳ್ಯದ ಸೆಂಟ್ ಪೀಟರ್ ಚರ್ಚ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತರುಣ್ ಕುಮಾರ್ ಮಂಡಲ್ (63) ಎಂಬ ಹಿರಿಯ ನಾಗರಿಕ ಗಾಯಗೊಂಡ ಘಟನೆ ನಡೆದಿದೆ. ಶ್ರೀ ಶಾಂತನ್ ಮೋದಕ್ (32) ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 26.06.2025 ರಂದು ಸಂಜೆ 7.30 ಗಂಟೆ ಸುಮಾರಿಗೆ ತರುಣ್ ಕುಮಾರ್ ಮಂಡಲ್ ಅವರು ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಕೊನೆಯ ಸಂಖ್ಯೆಯು 5441 ಆಗಿರುವ ದ್ವಿಚಕ್ರ ವಾಹನದ ಸವಾರನು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತರುಣ್ ಕುಮಾರ್ ಮಂಡಲ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ನಂತರ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ತರುಣ್ ಕುಮಾರ್ ಅವರನ್ನು ಸಾರ್ವಜನಿಕರ ನೆರವಿನಿಂದ ತಕ್ಷಣ ಆಸ್ಟರ್ CMI ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ಪ್ರಕಾರ ಅವರಿಗೆ ಎಡಭಾಗದ ಸೊಂಟದ ಪೆಲ್ವಿಕ್ ಭಾಗದಲ್ಲಿ ಗಂಭೀರ ಪೆಟ್ಟುಬಿದ್ದು…

ಮುಂದೆ ಓದಿ..
ಸುದ್ದಿ 

ಅಜಾಗರೂಕ ಬೈಕ್ ಸವಾರನಿಂದ ನಾಕಾಬಂದಿ ವೇಳೆ ಅಪಘಾತ – ಎ.ಎಸ್.ಐ ಸೇರಿದಂತೆ ಮೂವರಿಗೆ ಗಾಯ

Taluknewsmedia.com

Taluknewsmedia.comನಗರದ ವೀರಣ್ಯನಪಾಳ್ಯ ಜಂಕ್ಷನ್ ಬಳಿ ನಾಕಾಬಂದಿ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಎ.ಎಸ್.ಐ, ಪಿ.ಸಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಬೆಳಗಿನ ಜಾವ 03:00 ಗಂಟೆ ವೇಳೆಗೆ, ಎ.ಎಸ್.ಐ ರಂಗೇಗೌಡ, ಪಿ.ಸಿ 20602 ಈರನಗೌಡ, ಮತ್ತು ಇನ್ನೋರ್ವ ಪೊಲೀಸ್ ಸಿಬ್ಬಂದಿ ನಾಕಾಬಂದಿ ಕರ್ತವ್ಯದಲ್ಲಿದ್ದರು. ಈ ವೇಳೆ, KL-55-D-5165 ಸಂಖ್ಯೆಯ ಮೋಟಾರ್ ಸೈಕಲ್ ಸವಾರನು ಹೆಲ್ಮೆಟ್ ಧರಿಸದೆ, ಇಬ್ಬರನ್ನು ಹಿಂಬದಿ ಕೂರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದನು. ಆ ಸವಾರ ಡಿಕ್ಕಿ ಹೊಡೆದ ಪರಿಣಾಮ, ಮೂರೂ ಜನರು ಕೆಳಗೆ ಬಿದ್ದು ಗಾಯಗೊಂಡರು.ಎ.ಎಸ್. ಐ ರಂಗೇಗೌಡ,ಪಿ.ಸಿ ಮತ್ತು ಈರಣ್ಣ ಗೌಡ ರವರಿಗೆ ಎಡಗೈ, ಕತ್ತು, ಬೆನ್ನು, ಕಾಲುಗಳು ಹಾಗೂ ಮುಖಕ್ಕೆ ಪೆಟ್ಟಾಗಿದ್ದರೆ, ಸವಾರ ಮತ್ತು ಹಿಂಬದಿ ಸವಾರರು ಸಹ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣವೇ ಈಶಾ ಆಸ್ಪತ್ರೆಗೆ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಕುರಿತಾಗಿ…

ಮುಂದೆ ಓದಿ..
ಸುದ್ದಿ 

ಬಿ.ಸಿ.ಎ ವಿದ್ಯಾರ್ಥಿನಿ ಕಾಣೆ – ತಾಯಿ ನೀಡಿದ ದೂರು

Taluknewsmedia.com

Taluknewsmedia.comನಗರದ ನಿವಾಸಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿರುವ ಮಹಿಳೆಯವರ ಮಗಳು, 19 ವರ್ಷದ ಅಕ್ಷಯ ಎಂ.ಎಸ್., ಕಳೆದ ಏಪ್ರಿಲ್ 9ರಂದು ಬೆಳಿಗ್ಗೆ 7:30ಕ್ಕೆ ಮನೆಯಿಂದ ಕಾಲೇಜಿಗೆ ಹೋಗಿದ್ದಾಗಿ ಹೇಳಿ ಹೊರಟ ಬಳಿಕ ಮರಳಿ ವಾಪಸ್ಸಾಗದೆ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ಷಯ, ಬೆಂಗಳೂರಿನ ಡಿಗ್ರಿ ಕಾಲೇಜೊಂದರಲ್ಲಿ ಬಿ.ಸಿ.ಎ (ಪ್ರಥಮ ವರ್ಷ) ವಿದ್ಯಾರ್ಥಿನಿಯಾಗಿದ್ದು, ತಾಯಿ ಬೆಳಿಗ್ಗೆ ಕೆಲಸಕ್ಕೆ ಹೋದ ಬಳಿಕ ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದು ನೋಡಿದಾಗ ಮಗಳು ಮನೆಯಲ್ಲಿರಲಿಲ್ಲ. ಕೂಡಲೇ ಫೋನ್ ಕರೆ ಮಾಡಿದಾಗ, ಆಕೆಯ ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಅಕ್ಷಯ ರವರ ತಾಯಿ ಪಕ್ಕದ ಅಂಗಡಿಗಳು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಗದೆ, ಆತಂಕಗೊಂಡು ಕೊನೆಗೆ ಪೊಲೀಸರ ಮೊರೆಹೋದರು. ತಾಯಿ ನೀಡಿದ ದೂರಿನಂತೆ, ಅಕ್ಷಯ ಆಗಾಗ ಸ್ನೇಹಿತೆಯ ಮನೆಯಲ್ಲಿ ಉಳಿದುಮರಳಿ ಮನೆಗೆ ಬರುವ ಪ್ರವೃತ್ತಿ…

ಮುಂದೆ ಓದಿ..
ಸುದ್ದಿ 

ನ್ಯಾಯಾಲಯದ ಆದೇಶ ಪಾಲನೆಗೆ ತೆರಳಿದ ತಂಡದ ಮೇಲೆ ಪ್ರತಿರೋಧ: ದೇವರಾಜ್ ಹಾಗೂ ತಾಯಿಗೆ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು ನಗರದ ಹೆಬ್ಬಾಳ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮೈಲಾರಿ ಸುಣಗಾರ ರವರ ನೇತೃತ್ವದಲ್ಲಿ, ನ್ಯಾಯಾಲಯದ ಆದೇಶವನ್ನು ಜಾರಿಗೆ ತರಲು ತೆರಳಿದ ಪೊಲೀಸ್ ಮತ್ತು ಮಕ್ಕಳ ರಕ್ಷಣಾಧಿಕಾರಿಗಳ ತಂಡಕ್ಕೆ ಎದುರಾಳಿ ದೇವರಾಜ್ ಪಿ ಮತ್ತು ಅವರ ತಾಯಿ ಶ್ರೀಮತಿ ಮರಿಯಮ್ಮ ಪ್ರತಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಘಟನೆಯ ಪ್ರಕಾರ, ಶ್ರೀಮತಿ ನಂದಿನಿ ಎಲ್.ಎಂ ಅವರು ನ್ಯಾಯಾಲಯದ ಆದೇಶದಂತೆ (ಕ್ರಿಮಿನಲ್ ಅಪೀಲ್ ನಂ: 1014/2023 ಮತ್ತು 1015/2023) ತಮ್ಮ ಪತಿ ದೇವರಾಜ್ ಪಿ ವಾಸಿಸುವ ಮನೆಯಲ್ಲಿ ವಾಸಿಸಲು ತೆರಳಲು ಅರ್ಥಪೂರ್ಣ ಹಕ್ಕು ಹೊಂದಿದ್ದರು. ಈ ಆದೇಶವನ್ನು ಜಾರಿಗೆ ತರಲು ನಂದಿನಿ ಅವರೊಂದಿಗೆ ಪೊಲೀಸ್ ಸಿಬ್ಬಂದಿ ಹಾಗೂ ಸಿಡಿಪಿಒ ಕಚೇರಿ ಸಿಬ್ಬಂದಿ ಕೂಡಿದ್ದರು. ದಿನಾಂಕ 27.06.2025 ರಂದು ಸಂಜೆ 4:30ಕ್ಕೆ, ನ್ಯಾಯಾಲಯದ ಆದೇಶದ ಪ್ರತಿಯನ್ನು ನೀಡಿದರೂ ಸಹ ದೇವರಾಜ್ ಮತ್ತು ಅವರ ತಾಯಿ ಮನೆಯೊಳಗೆ ನಂದಿನಿ ಪ್ರವೇಶಿಸುವುದನ್ನು ತಡೆಯಲು ಪ್ರಯತ್ನಿಸಿದರು. ಮನವೊಲಿಸುವ…

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ಬಳಿ 19 ವರ್ಷದ ಯುವತಿ ಮನೆಮಂದಿ ಗಮನಕ್ಕೆ ಬಾರದ ರೀತಿಯಲ್ಲಿ ಕಾಣೆಯಾಗಿದ್ದಾರೆ.

Taluknewsmedia.com

Taluknewsmedia.comಹೆಬ್ಬಾಳ, ನಾಗೇನಹಳ್ಳಿ ಸಮೀಪದಲ್ಲಿ 19 ವರ್ಷದ ಯುವತಿ ಕುಮಾರಿ ಆರೋಗ್ಯು ಮೇರಿ ಎಂಬವರು ಮನೆಗೆ ಟಿಪಿಕಲ್ ಸಮಯದಲ್ಲಿ ಓಡೊಡುತ್ತಿದ್ದಾಗ ಆಕಸ್ಮಿಕವಾಗಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆಕೆಯ ತಂದೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಂತೋನಿ ಸ್ವಾಮಿ ಯವರ ದೂರಿನ ಪ್ರಕಾರ, ಅವರು ಹಾಗೂ ಅವರ ಪತ್ನಿ ಪ್ರತಿದಿನದಂತೆ 24-06-2025 ರಂದು ತಮ್ಮ ತರಕಾರಿ ಅಂಗಡಿಗೆ ಕೆಲಸಕ್ಕೆ ತೆರಳಿದ್ದರು. ಅವರ ಮಗಳು ಮೇರಿ ಮನೆಯಲ್ಲಿಯೇ ಇದ್ದಳು. ಅವರು ಸಂಜೆ 5 ಗಂಟೆಗೆ ತಾತ್ಕಾಲಿಕವಾಗಿ ಮನೆಗೆ ಬಂದು ಟೀ ಕುಡಿದು ಪುನಃ ಅಂಗಡಿಗೆ ಹಿಂತಿರುಗಿದರು. ಆಗ ಮಗಳು ಮನೆಯಲ್ಲಿಯೇ ಇದ್ದರು. ಆದರೆ ರಾತ್ರಿ 10:30ರ ಸಮಯದಲ್ಲಿ ಪತಿ-ಪತ್ನಿ ಮನೆಗೆ ಮರಳಿದಾಗ, ಮನೆಯ ಬಾಗಿಲು ಒಳಗಿನಿಂದಲೇ ಹಾಕಲಾಗಿದ್ದು, ಪಕ್ಕದ ಬಾತ್ ರೂಮ್ ಭಾಗದಲ್ಲಿ ಮನೆಯ ಚಾವಿ ಇಡಲಾಗಿತ್ತು. ಬಾಗಿಲು ತೆರದಾಗ ಮಗಳು ಮನೆಯಲ್ಲಿಲ್ಲದಿರುವುದು ಗಮನಕ್ಕೆ ಬಂತು.…

ಮುಂದೆ ಓದಿ..
ಸುದ್ದಿ 

ಪೆಟರ್‌ನಿಂದ ಜಗಳ ಹಾಗೂ ಹಲ್ಲೆ – ಜೀವ ಬೆದರಿಕೆ ಆರೋಪ

Taluknewsmedia.com

Taluknewsmedia.comನಗರದ ಕಸಘಟ್ಟ ಪುರ ಜನತಾ ಕಾಲನಿಯಲ್ಲಿ ತೀವ್ರ ಹಲ್ಲೆ ಮತ್ತು ಜಗಳದ ಘಟನೆ ನಡೆದಿದೆ. ಈ ಕುರಿತು ಸಂಬಂಧಿಕ ವ್ಯಕ್ತಿ ಪೇತ್ರ @ ಪೀಟರ್ ವಿರುದ್ಧ ಪಿರ್ಯಾದು ದಾಖಲಾಗಿದೆ. ಅರ್ಪಿತಾ ರವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ ಮನೆದಲ್ಲಿ ವಾಸವಿದ್ದು, ಗೃಹಿಣಿಯಾಗಿರುತ್ತಾರೆ. ಅವರ ಅಕ್ಕ ಹರ್ಷಿತಾರವರನ್ನು ಎರಡು ವರ್ಷಗಳ ಹಿಂದೆ ಪೇತ್ರ @ ಪೀಟರ್ ರವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಪೇತ್ರ ಮತ್ತು ಹರ್ಷಿತಾ ಅವರು ಕಸಘಟ್ಟ ಪುರ ಜನತಾ ಕಾಲನಿಯಲ್ಲಿ ವಾಸಿಸುತ್ತಿದ್ದಾರೆ. ದಿನಾಂಕ 28-06-2025 ರಂದು ರಾತ್ರಿ 09:00 ಗಂಟೆಯ ಸಮಯದಲ್ಲಿ ಪೇತ್ರ @ ಪೀಟರ್ ಅವರು ಅರ್ಪಿತಾ ರವರ ಮನೆಗೆ ಬಂದು, ಕ್ಷುಲಕ ಕಾರಣಕ್ಕಾಗಿ ಜಗಳವಾಡಿದ್ದು, ಅವಾಚ್ಯ ಶಬ್ದಗಳಿಂದ ಬೈದು ಮನೆಯ ಹೊರಗಿದ್ದ ಮರದ ರಿಪೀಲ್ (ಕಟ್ಟಿಗೆ) ಅನ್ನು ತೆಗೆದುಕೊಂಡು ಅರ್ಪಿತಾ ರವರ ತಂದೆ ಮೈಕಲ್ ಬಾಬುರವರ ತಲೆಗೆ ಹೊಡೆದಿದ್ದಾರೆ. ಇದರಿಂದ ರಕ್ತಗಾಯ ಸಂಭವಿಸಿದ್ದು,…

ಮುಂದೆ ಓದಿ..
ಸುದ್ದಿ 

ತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ..

Taluknewsmedia.com

Taluknewsmedia.comತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಡೇರಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆರಾಕೇಶ್ ಕುಮಾರ್ ಯಾದವ್ ಅವರು ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ರಾಕೇಶ್ ಕುಮಾರ್ ಯಾದವ್ (32) ಅವರು ತಮ್ಮ ಸ್ನೇಹಿತ ಅವದೇಶ್ ಜೊತೆಗೆ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ (MH-48 DA-4715) ನಲ್ಲಿ ಎಡೆಯೂರಿಗೆ ತೆರಳುತ್ತಿದ್ದಾಗ, ವಡೇರಹಳ್ಳಿ ಗೇಟ್ ಬಳಿ ಎದುರು ದಿಕ್ಕಿನಲ್ಲಿ ತಪ್ಪು ಮಾರ್ಗವಾಗಿ ಬಂದ ಬಜಾಜ್ ಡಿಸ್ಕವರ್ ಬೈಕ್ (KA-02 E-2491) ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಅವದೇಶ್ ಅವರಿಗೆ ತಲೆ, ಮುಖ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ರಾಕೇಶ್‌ ಅವರಿಗೆ, ಎಡಗೈ ಮೊಣಕೈ ಮತ್ತು ತಲೆಗೆ ಪೆಟ್ಟಾಗಿದೆ. ಡಿಕ್ಕಿಯಾದ ಬೈಕ್‌ನ…

ಮುಂದೆ ಓದಿ..
ಸುದ್ದಿ 

ಆದಿಚುಂಚನಗಿರಿ ಬೆಟ್ಟದ ಪಾದದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ದಾಳಿ: 15 ಮಂದಿ ಬಂಧನ, ₹43,000 ನಗದು ವಶ

Taluknewsmedia.com

Taluknewsmedia.comಮಂಡ್ಯ ಜಿಲ್ಲೆಯ ಬೆಳ್ಳೂರು ಹೋಬಳಿಯ ಆದಿಚುಂಚನಗಿರಿ ಬೆಟ್ಟದ ಕೆಳಭಾಗದಲ್ಲಿ ನಡೆದ ಅಕ್ರಮ ಇಸ್ಪೀಟ್ ಜೂಜಾಟ ದಾಳಿಯಲ್ಲಿ 15 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ಲಭಿಸಿದ ಖಚಿತ ಮಾಹಿತಿಯ ಮೇಲೆ ಬೆಳ್ಳೂರು ಟೌನ್ ಠಾಣೆಯ ಪಿಎಸ್‌ಐ ರವಿಕುಮಾರ್ ವೈ ಏನ್ ಅವರ ನೇತೃತ್ವದಲ್ಲಿ ತಂಡವೇ ಸ್ಥಳಕ್ಕೆ ದಾಳಿ ನಡೆಸಿತು. ದಾಳಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 15 ಮಂದಿ ಗಂಡಸರು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು.ದಾಳಿಯಲ್ಲಿ ಒಟ್ಟು ₹43,000 ನಗದು ಹಾಗೂ 52 ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ತಾಟು ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ ಕೆಲವರು ಆಟೋ ಚಾಲಕರು, ಕಾರು ಚಾಲಕರು, ವ್ಯಾಪಾರಸ್ಥರು ಹಾಗೂ ಕೃಷಿಕರು ಇದ್ದಾರೆ. ಬಂಧಿತರು ಚನ್ನಪಟ್ಟಣ, ರಾಮನಗರ ಮತ್ತು ಮಂಡ್ಯದಿಂದ ಬಂದಿದ್ದು, ಸ್ಥಳೀಯರಂತೆ “ನಾಮಕರಣ ಕಾರ್ಯಕ್ರಮಕ್ಕೆ ಆಗಮಿಸಿದ್ದೆವು” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.ಬಂಧಿತರ ಹೆಸರುಗಳು ಮತ್ತು ವಯಸ್ಸುಗಳು:1. ಉಮೇಶ್ (57),…

ಮುಂದೆ ಓದಿ..
ಸುದ್ದಿ 

ತಟ್ಟಹಳ್ಳಿ ಅರಣ್ಯದಲ್ಲಿ ಬೆಂಕಿಗೆ ಆಹುತಿಯಾದ ಶವ ಪತ್ತೆ: ಭೀಕರ ಕೊಲೆ ಶಂಕೆ

Taluknewsmedia.com

Taluknewsmedia.comನಾಗಮಂಗಲ ತಾಲೂಕಿನ ತಟ್ಟಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಗಸ್ತು ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದ ವೇಳೆ ಸುಟ್ಟು ಕರಕಲಾಗಿರುವ ಅನಾಮಧೇಯ ವ್ಯಕ್ತಿಯ ಶವವೊಂದು ಪತ್ತೆ ಹಚ್ಚಿದ್ದಾರೆ. ಘಟನೆಯು ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿಯಾಗಿರುವ ಶಿವರಾಜು ಕರಡಹಳ್ಳಿ ವ್ಯಾಪ್ತಿಗೆ ಸೇರಿದ ತಟ್ಟಹಳ್ಳಿ ಗ್ರಾಮದ ಸರ್ವೇ ನಂ.68 ರ ಅರಣ್ಯ ಪ್ರದೇಶದಲ್ಲಿ ತಮ್ಮ ನಿಯಮಿತ ಗಸ್ತು ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಅವರು ಹೇಮಾವತಿ ನದಿ ಹರಿಯುವ ರಸ್ತೆಯ ಮೂಲಕ ಗಸ್ತು ನಡೆಸುತ್ತಿದ್ದಾಗ, ಉಪನಾಲೆಯ ತೂಬಿನ ಹತ್ತಿರದಿಂದ ಕೆಟ್ಟ ದುರ್ವಾಸನೆ ಮೂಡಿದ ಹಿನ್ನೆಲೆಯಲ್ಲಿ ಅವರು ಸ್ಥಳ ಪರಿಶೀಲನೆ ನಡೆಸಿದರು.ಪರಿಶೀಲನೆಯ ವೇಳೆ, ಅವರು ಒಂದು ಮನುಷ್ಯನ ಶವವನ್ನು ನೋಡಿದ್ದು, ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮೃತದೇಹದ ಮೇಲೆ ಹುಳುಗಳು ಹುಲಿದಿದ್ದು, ಟೈರ್ ಹಾಗೂ ಇತರೆ ವಸ್ತುಗಳಿಂದ ಬೆಂಕಿಹಾಕಿ ಸುಟ್ಟಿರುವ ಪಾದವಿಲ್ಲದ ಸ್ಥಿತಿಯ ಶವ…

ಮುಂದೆ ಓದಿ..