ಡಿಕೆ ಶಿವಕುಮಾರ್—ವಾಚ್ ವಿವಾದಕ್ಕೆ ಗಟ್ಟಿಯಾದ ಪ್ರತಿಕ್ರಿಯೆ: “ನನ್ನ ದುಡ್ಡು, ನನ್ನ ಆಯ್ಕೆ”
Taluknewsmedia.comಡಿಕೆ ಶಿವಕುಮಾರ್—ವಾಚ್ ವಿವಾದಕ್ಕೆ ಗಟ್ಟಿಯಾದ ಪ್ರತಿಕ್ರಿಯೆ: “ನನ್ನ ದುಡ್ಡು, ನನ್ನ ಆಯ್ಕೆ” ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ವೈಯಕ್ತಿಕ ಜೀವನಶೈಲಿ, ವಿಶೇಷವಾಗಿ ಅವರು ಧರಿಸುವ ವಾಚ್ ಕುರಿತು ವಿರೋಧ ಪಕ್ಷದ ನಾಯಕರು ಮಾಡಿರುವ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, “ನಾನು ನನ್ನ ಶ್ರಮದಿಂದ ಸಂಪಾದಿಸಿದ ಹಣದಲ್ಲಿ ಯಾವ ವಾಚ್ ಬೇಕಾದರೂ ತೊಡುತ್ತೇನೆ. ಸಾವಿರ ರೂಪಾಯಿಯನ್ನೂ ಹಾಕುತ್ತೇನೆ, ಹತ್ತು ಲಕ್ಷದ ವಾಚನ್ನೂ ಹಾಕುತ್ತೇನೆ—ಅದು ಸಂಪೂರ್ಣ ನನ್ನ ವಿಷಯ” ಎಂದು ಸ್ಪಷ್ಟಪಡಿಸಿದರು. ವಿರೋಧ ಪಕ್ಷದ ನಾಯಕರು ತಮ್ಮ ಬಗ್ಗೆ ಟೀಕೆ ಮಾಡಿರುವುದಕ್ಕೆ ಕಾರಣ, ಅವರಿಗೆ ಸಾರ್ವಜನಿಕ ಜೀವನದ, ವಿಶೇಷವಾಗಿ ಚುನಾವಣಾ ರಾಜಕೀಯದ ಅನುಭವ ಕಡಿಮೆಯಿದೆ ಎಂದು ಡಿಕೆಶಿ ಚಾಟಿ ಹಾಯಿಸಿದರು. “ಅವರಿಗೆ ಅನುಭವದ ಕೊರತೆ. ಏನು ಮಾತನಾಡಬೇಕು ಎಂಬುದೇ ಗೊತ್ತಿಲ್ಲ. ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವುದರಿಂದ ಮಾತ್ರ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಬೇರೆಯವರು ಇದ್ದರೆ…
ಮುಂದೆ ಓದಿ..
