ಸುದ್ದಿ 

ನೆಲಗದರನಹಳ್ಳಿಯಲ್ಲಿ ಸ್ಕೂಟರ್‌-ಕ್ಯಾಂಟರ್ ಅಪಘಾತ: ಬ್ಯಾಂಕ್ ಉದ್ಯೋಗಿಗೆ ಗಂಭೀರ ಗಾಯ

Taluknewsmedia.com

Taluknewsmedia.comನಗರದ ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಯೂನಿಯನ್ ಬ್ಯಾಂಕ್‌ನ ಉದ್ಯೋಗಿಯಾಗಿರುವ ಮಂಜ ಕೆ.ಎಚ್ (45) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಜುಲೈ 24 ರಂದು ಸಂಜೆ 8:30ರ ಸುಮಾರಿಗೆ ಸೈಂಟ್ ಪೌಲ್ ಕಾಲೇಜ್ ಸಮೀಪ ಸಂಭವಿಸಿದೆ. ಘಟನೆಯ ವಿವರಗಳ ಪ್ರಕಾರ, ಮಂಜ ಅವರು ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್ (ನಂ: KA-41-EZ-2167)‌ನಲ್ಲಿ ನೆಲಗದರನಹಳ್ಳಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-4 ಕಡೆಗೆ ಸಾಗುತ್ತಿದ್ದರು. ಈ ವೇಳೆ ತಮ್ಮ ಮುಂದೆ ಸಾಗುತ್ತಿರುವ ಕ್ಯಾಂಟರ್ ವಾಹನ (ನಂ: KA-51-AF-7407)ವನ್ನು ಬಲಭಾಗದಿಂದ ಓವರ್‌ಟೇಕ್ ಮಾಡುವ ಯತ್ನದಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು, ಕ್ಯಾಂಟರ್‌ನ ಹಿಂಭಾಗದ ಚಕ್ರಕ್ಕೆ ಢಿಕ್ಕಿಯಾದರು. ಘಟನೆಯಾಗುವ ವೇಳೆ ತುಂತುರು ಮಳೆ ಬೀಳುತ್ತಿದ್ದ ಕಾರಣ, ರಸ್ತೆಯ ಮೇಲ್ಮೈ ಜರಗುವಂತೆ ಆಗಿತ್ತು ಎನ್ನಲಾಗಿದೆ. ಅಪಘಾತದ ಪರಿಣಾಮವಾಗಿ ಮಂಜ ಅವರಿಗೆ ಎಡ ಕೈ, ಎಡ ಕಾಲು ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ.…

ಮುಂದೆ ಓದಿ..
ಸುದ್ದಿ 

ಪಾದಚಾರಿ ಮೇಲೆ ವೇಗದ ಆಟೋ ಡಿಕ್ಕಿ: ತಲೆಗೆ ಗಾಯಗೊಂಡ ವ್ಯಕ್ತಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದರು

Taluknewsmedia.com

Taluknewsmedia.comದಿನಾಂಕ 23-07-2025 ರಂದು ಸಂಜೆ ಸುಮಾರು 6:30 ಗಂಟೆಗೆ ರಾಜರಸ್ತೆ-4 (ತುಮಕೂರು ರಸ್ತೆ) ಯಲ್ಲಿರುವ ಪೀಣ್ಯ ಇಂಡಸ್ಟ್ರಿ ಮೆಟ್ರೋ ಸ್ಪೆಷಲ್ ಹತ್ತಿರ ಪಾದಚಾರಿ ಮಾರ್ಗದಲ್ಲಿ ನಡೆದ ಅಪಘಾತದಲ್ಲಿ ಹಿರಿಯ ವ್ಯಕ್ತಿಯೊಬ್ಬರಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದ ಘಟನೆ ವರದಿಯಾಗಿದೆ. ಪೀಣ್ಯದ ವೆಂಕಟೇಶ್ವರ ಬೇಕರಿಯಿಂದ ಮೆಟ್ರೋ ಸ್ಪೆಷಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಜಾಲಹಳ್ಳಿ ಕ್ರಾಸ್ ದಿಕ್ಕಿನಿಂದ ವೇಗವಾಗಿ ಬಂದ ಆಟೋ ರಿಕ್ಷಾ (ನಂ. KA-41-D-7014) ಚಾಲಕ ದರ್ಶನ್ (21 ವರ್ಷ) ಅವರು ನಿಯಂತ್ರಣ ತಪ್ಪಿಸಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಪಾದಚಾರಿ ಕೆಳಗೆ ಬಿದ್ದು ತಲೆಗೆ ಗಾಯಗೊಂಡಿದ್ದಾರೆ. ಸಾರ್ವಜನಿಕರ ನೆರವಿನಿಂದ ಗಾಯಾಳುವನ್ನು ಮೊದಲು ಕೆ.ಸಿ. ಜನರಲ್ ಆಸ್ಪತ್ರೆಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಶ್ರೀ ಶಂಕರ್ ವಿ ಅವರು ಆಸ್ಪತ್ರೆಗೆ ತಲುಪಿದಾಗ ತೀವ್ರ ಪೆಟ್ಟಿನಿಂದ ತಮ್ಮ ತಂದೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದನ್ನು…

ಮುಂದೆ ಓದಿ..
ಸುದ್ದಿ 

ಸ್ಕೂಟರ್ ಡಿಕ್ಕಿ: ವ್ಯಕ್ತಿಗೆ ಗಾಯ, ಚಾಲಕ ಪರಾರಿಯಾಗಿದ್ದಾನೆ

Taluknewsmedia.com

Taluknewsmedia.comನಗರದ ವೀರಣ್ಯನಪಾಳ್ಯ ಜಂಕ್ಷನ್ ಹತ್ತಿರ ಕಾರ್ಲೆ ಕಂಪನಿಯ ಬಳಿ ದಾಸರಹಳ್ಳಿ ಕಡೆಗೆ ಸಾಗುವ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿಗೆ ಗಾಯವಾಗಿರುವ ಘಟನೆ ವರದಿಯಾಗಿದೆ. ದಿನಾಂಕ 23.07.2025 ರಂದು ಸಂಜೆ ಸುಮಾರು 7.00 ಗಂಟೆಯ ವೇಳೆಗೆ ಕಾರ್ಲೆ ಕಟ್ಟಡದ ಕಡೆಗೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ದಾಸರಹಳ್ಳಿ ಕಡೆಯಿಂದ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ ಸ್ಕೂಟರ್ (ವಾಹನ ಸಂಖ್ಯೆ KA-04-KU-6801) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಸ್ತೆಗೆ ಬಿದ್ದು, ಎಡಕಾಲಿನ ಮೋಣಕಾಲಿನಲ್ಲಿ ತರಚಿದ ಗಾಯ, ಎಡ ಮುಂಗೈ, ತುಟಿ ಹಾಗೂ ಹಲಿಗೆ ಪೆಟ್ಟಾಗಿದೆ. ಘಟನೆಯ ನಂತರ ಅಪಘಾತ ಸೃಷ್ಟಿಸಿದ ಸ್ಕೂಟರ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುವನ್ನು ಸಾರ್ವಜನಿಕರು ತಕ್ಷಣವೇ ಬೈಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಸ್ಕೂಟರ್ ಚಾಲಕನ ಪತ್ತೆಗೆ ಕ್ರಮ…

ಮುಂದೆ ಓದಿ..
ಸುದ್ದಿ 

ಮರಿಯಣ್ಯನಪಾಳ್ಯದಲ್ಲಿ ಅಪಘಾತ: ತಾಯಿ-ಮಗ ಸವಾರಿಗೆ ಡಿಕ್ಕಿ ಹೊಡೆದ ಕಾರು ಚಾಲಕ ಪರಾರಿಯಾಗಿ ತಲೆಮರೆಸಿಕೊಂಡ ಘಟನೆ

Taluknewsmedia.com

Taluknewsmedia.comಬೆಂಗಳೂರುನಗರದ ಮರಿಯಣ್ಯನಪಾಳ್ಯ ಪ್ರದೇಶದಲ್ಲಿ ದಿನಾಂಕ 22.07.2025 ರಂದು ಮಧ್ಯಾಹ್ನ ಸುಮಾರು 03:40 ಗಂಟೆಯ ಸಮಯದಲ್ಲಿ ತಾಯಿ ಮತ್ತು ಮಗ ಸವಾರರಾಗಿದ್ದ ಸ್ಕೂಟರ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಇಫಾತ್ ಫಾತಿಮ್ ಕೊಂ ಮುಶೌದ್ ಉಲಾ ಶರೀಫ್ (44) ರವರು ತಮ್ಮ ಸ್ಕೂಟರ್ (ನಂ. KA-04-KT-3703) ನ ಹಿಂಭಾಗದಲ್ಲಿ ತಮ್ಮ ಮಗ ಫರಾಹ ಅಬ್ದುಲ್ ಶರೀಫ್ ರವರನ್ನು ಕೂರಿಸಿಕೊಂಡು ಕೆನಶ್ರೀ ಶಾಲೆ, ಮರಿಯಣ್ಯನಪಾಳ್ಯ ಹತ್ತಿರ ಸವಾರಿಯಾಗಿದ್ದರು. ಆ ಸಮಯದಲ್ಲಿ KA-01-MN-2752 ಸಂಖ್ಯೆಯ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ತಾಯಿ ಮತ್ತು ಮಗ ಇಬ್ಬರೂ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಭುಜ ಮತ್ತು ಮೊಣಕಾಲಿಗೆ ಪೆಟ್ಟಾಗಿದ್ದು, ಮಗನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಸಾರ್ವಜನಿಕರ ಸಹಾಯದಿಂದ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ತಕ್ಷಣವೇ ಮಹಾವೀರ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಅವಿನ್ಯೂ ರಸ್ತೆಯಲ್ಲಿ ಸ್ಕೂಟರ್ ಅಪಘಾತ – ಇಬ್ಬರು ಗಾಯಾಳು

Taluknewsmedia.com

Taluknewsmedia.comಬೆಂಗಳೂರುನಗರದ ಬಿಬಿ ರಸ್ತೆಯ ಐಸಿರಿ ಹೋಟೆಲ್ ಎದುರು ನಡೆದ ಸ್ಕೂಟರ್ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಅಪಘಾತಕ್ಕೆ ಕಾರಣರಾದ ಮಹಿಳಾ ಸವಾರಿಣಿಯ ವಿರುದ್ಧ ಕಾನೂನು ಕ್ರಮಕ್ಕೆ ಪಿರ್ಯಾದು ದಾಖಲಾಗಿದೆ. ತಮ್ಮ ಭಾವ ಆರ್.ಬಿ. ನಾಗಾರ್ಜುನ್ ರೆಡ್ಡಿ (36) ಜೊತೆ ಮದುವೆ ಸಂಬಂಧಿತ ವಸ್ತುಗಳಿಗಾಗಿ ಜಕ್ಕೂರುನಿಂದ ಅವಿನ್ಯೂ ರಸ್ತೆಯತ್ತ KA-50-EB-7191 ನಂ. ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಬೆಳಗ್ಗೆ 10:30ರ ಸುಮಾರಿಗೆ, ಐಸಿರಿ ಹೋಟೆಲ್ ಬಳಿ ಸಾಗುತ್ತಿದ್ದಾಗ, ಮುಂದೆ ಬಲಭಾಗದಲ್ಲಿ ಹೋಗುತ್ತಿದ್ದ KA-50-ES-0335 ನಂ. ಸ್ಕೂಟರ್‌ನ ಮಹಿಳಾ ಸವಾರಿಣಿ ಮುನ್ಸೂಚನೆ ನೀಡದೆ ಏಕಾಏಕಿ ಎಡಕ್ಕೆ ತಿರುಗಿದ್ದರಿಂದ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರೂ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮನೋಜ್ ಕುಮಾರ್ ರವರಿಗೆ ಬಲಗೈ ಮತ್ತು ಕಾಲಿಗೆ ಗಾಯವಾಗಿದ್ದು, ನಾಗಾರ್ಜುನ್ ರೆಡ್ಡಿ ಅವರಿಗೆ ಬಲಕಾಲಿಗೆ ಪೆಟ್ಟಾಗಿದೆ. ಸಾರ್ವಜನಿಕರು ಮತ್ತು ಟ್ರಾಫಿಕ್ ಪೊಲೀಸರ ನೆರವಿನಿಂದ ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಾರ್ಜುನ್ ರೆಡ್ಡಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು…

ಮುಂದೆ ಓದಿ..
ಸುದ್ದಿ 

ಯುವಕ ಶಾಂತಪ್ಪ ಕಾಣೆಯಾಗಿರುವ ಪ್ರಕರಣ – ತಾಯಿ ಪೊಲೀಸ್ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 25:ನಗರದ ಅಬ್ಬಿಗೆರೆ ಪಿಳ್ಳಪ್ಪ ಸರ್ಕಲ್ ಬಳಿ 21 ವರ್ಷದ ಯುವಕ ಕಾಣೆಯಾಗಿರುವ ಘಟನೆ ನಡೆದಿದ್ದು, ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರ ನೆರವು ಬೇಡುತ್ತಿದ್ದಾರೆ. ಶ್ರೀಮತಿ ಸುಂಕಮ್ಮ ಅವರು ಪೊಲೀಸ್ ಠಾಣೆಗೆ ನೀಡಿದ ಮಾಹಿತಿಯ ಪ್ರಕಾರ, ಅವರ ಮಗ ಶಾಂತಪ್ಪ (21) ಎಂಬವರು ಜುಲೈ 24, 2025 ರಂದು ಸಂಜೆ ಸುಮಾರು 6 ಗಂಟೆಗೆ ನೀರು ತರಲು ಹೋದ ಬಳಿಕ ಮನೆಗೆ ವಾಪಸಾಗಿ ಬಂದಿಲ್ಲ. ಸತತವಾಗಿ ಹಲವೆಡೆ ಹುಡುಕಿದರೂ ಶಾಂತಪ್ಪನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಅವರು ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾಯಿ ಸುಂಕಮ್ಮ ಅವರು ತಮ್ಮ ಮಗನನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಶಾಂತಪ್ಪನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

19 ವರ್ಷದ ವೈಷ್ಣವಿ ನಾಪತ್ತೆ: ತಲೆದೋರುವ ಮಾಹಿತಿ ಇಲ್ಲದೆ ಪೋಷಕರು ಆತಂಕ

Taluknewsmedia.com

Taluknewsmedia.comಬೆಂಗಳೂರು: ಜುಲೈ 23 2025ನಗರದಲ್ಲಿ 19 ವರ್ಷದ ಯುವತಿ ವೈಷ್ಣವಿ ಎಸ್.ಆರ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವೈಷ್ಣವಿ ತನ್ನ ಪಿಯುಸಿ 2ನೇ ವರ್ಷದ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಳು. ದಿನಾಂಕ 21-05-2025ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಮನೆ ಬಳಿ ಇರುವ ಅಂಗಡಿಗೆ ಪುಸ್ತಕ ತರುವುದಾಗಿ ಹೇಳಿ ಹೋಗಿದ್ದಳು. ಆದರೆ ನಂತರ ಮನೆಗೆ ವಾಪಸ್ ಬಂದಿಲ್ಲ. ಪೋಷಕರು ಸ್ನೇಹಿತರು, ಓಡಲುಗಳು ಹಾಗೂ ಸಂಬಂಧಿಕರನ್ನು ಸಂಪರ್ಕಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಎಲ್ಲೆಡೆ ಹುಡುಕಿದರೂ ಹುಡುಗಿ ಪತ್ತೆಯಾಗದ ಕಾರಣದಿಂದಾಗಿ ಕುಟುಂಬಸ್ಥರು ಯಲಹಂಕ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳೀಯ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಗೊತ್ತಿರುವವರು ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಭಾರಿ ರಸ್ತೆ ಅಪಘಾತ – ಬೆಸ್ಕಾಂ ಆಸ್ತಿಗೆ ಲಕ್ಷಾಂತರ ರೂಪಾಯಿ ನಷ್ಟ

Taluknewsmedia.com

Taluknewsmedia.comಯಲಹಂಕ: ದಿನಾಂಕ 21-07-2025, ರಾತ್ರಿ ಸುಮಾರು 10:45ರ ಸುಮಾರಿಗೆ ಯಲಹಂಕದಲ್ಲೊಂದು ಭಾರೀ ರಸ್ತೆ ಅಪಘಾತ ಸಂಭವಿಸಿದ್ದು, ಬೆಸ್ಕಾಂನ ಆಸ್ತಿಗೆ ಸುಮಾರು ₹5.75 ಲಕ್ಷ ಮೊತ್ತದಷ್ಟು ನಷ್ಟವಾಗಿದೆಆನಂದ್ ಎ ಎಂಬ ಚಾಲಕನು ತನ್ನ ಕಾರು (ನಂ. KA-01-25-8569) ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಬೆಸ್ಕಾಂ ನಂ ಡಿ.ಟಿ.ಸಿ-884 1*250 6.ವಿ.ಎ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಟ್ರಾನ್ಸ್‌ಫಾರ್ಮರ್ ಮುರಿದು ರಸ್ತೆಗೆ ಬಿದ್ದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ಕುರಿತು ಸ್ಥಳೀಯ ಇಂಜಿನಿಯರ್ ಶ್ರೀ ಆನಂದ್ ರವರು ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಹಾನಿಯ ಅಂದಾಜು ಪಟ್ಟಿಯೊಂದಿಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಜನರ ಸುರಕ್ಷತೆಗಾಗಿ ವಾಹನ ಚಾಲಕರು ರಸ್ತೆ ನಿಯಮ ಪಾಲಿಸುವುದು ಅತ್ಯಾವಶ್ಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರಿನಲ್ಲಿ ಟೆಂಪೋ ಕಳ್ಳತನ – ಪ್ರಕರಣ ದಾಖಲಾತಿ

Taluknewsmedia.com

Taluknewsmedia.comಬೆಂಗಳೂರು:23. 2025ನಗರದ ಯಲಹಂಕ ಉಪನಗರದ ‘ಬಿ’ ಸೆಕ್ಟರ್‌ನ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ 8ನೇ ‘ಬಿ’ ಕ್ರಾಸ್‌ನಲ್ಲಿ ಪಾರ್ಕ್ ಮಾಡಿದ್ದ ಟೆಂಪೋವನ್ನು ಕಳ್ಳತನ ಮಾಡಲಾಗಿದೆ. ಪಿರ್ಯಾದಿದಾರರು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಸುತ್ತಿದ್ದ ಟಾಟಾ ಎಸ್ ವಾಹನ (ನಂ. KA 50 3579) ಅನ್ನು ದಿನಾಂಕ 08/07/2025 ರಂದು ಸಂಜೆ 6 ಗಂಟೆಯ ಸುಮಾರಿಗೆ ಅಲ್ಲಿಗೆ ತಂದಿದ್ದರು. ದಿನಾಂಕ 13/07/2025 ರ ಬೆಳಗ್ಗೆ 6.30ರ ವೇಳೆಗೆ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಸ್ಥಳದ ಸಿಸಿ ಕ್ಯಾಮರಾದ ದೃಶ್ಯಾವಳಿಯಲ್ಲಿ ದಿನಾಂಕ 12/07/2025, ಮಧ್ಯಾಹ್ನ 12.30 ಕ್ಕೆ ಟ್ಯಾಂಪೋವನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿರುವುದು ದೃಢಪಟ್ಟಿದೆ. ಕಳೆದ ದಿನಗಳಲ್ಲಿ ವಾಹನ ಪತ್ತೆಯಾಗದ ಕಾರಣ ದೂರು ನೀಡಲು ತಡವಾಗಿದೆ ಎಂದು ಪಿರ್ಯಾದಿದಾರರು ತಿಳಿಸಿದ್ದಾರೆ. ಕಳ್ಳತನ ಮಾಡಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಯಲಹಂಕ ಉಪನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ. ವಾಹನದ…

ಮುಂದೆ ಓದಿ..
ಸುದ್ದಿ 

ಚಿಕ್ಕಬೊಮ್ಮಸಂದ್ರದಲ್ಲಿ ಗಲಾಟೆ: ವ್ಯಕ್ತಿಗೆ ಜೀವ ಬೆದರಿಕೆ

Taluknewsmedia.com

Taluknewsmedia.comಬೆಂಗಳೂರು: 23 2025ಚಿಕ್ಕಬೊಮ್ಮಸಂದ್ರದ ಸಂಜೀವಪ್ಪ ಬಡಾವಣೆಯ ಮನೆಯೊಂದರಲ್ಲಿ 20 ಜುಲೈ 2025 ರಂದು ರಾತ್ರಿ ಗಲಾಟೆ ನಡೆದಿದೆ. ಪೈಪ್ ಅಳವಡಿಸುವ ವೇಳೆ ಸಂಜೀವ ಗೌಡ ಮತ್ತು ಪುನಿತ್ ಎಂಬುವವರು ಬಂದಿದ್ದು, ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆಲಸ ನಿಲ್ಲಿಸಲು life threat ನೀಡಿದರೆಂದು ತಿಳಿದುಬಂದಿದೆ. ಆರೋಪಿಗಳು ಕೈಯಿಂದ ಥಳಿಸಿ, ಕೊರಳನ್ನು ಹಿಡಿದು ಎಳೆದಿದ್ದಾರೆ ಎಂದು ಪಿರ್ಯಾದಿದಾರರು ಹೇಳಿದ್ದಾರೆ. ಈ ಘಟನೆಯಿಂದ ಆತಂಕಗೊಂಡಿರುವ ಪಿರ್ಯಾದಿದಾರರು, ತಮ್ಮ ಮತ್ತು ಕುಟುಂಬದ ರಕ್ಷಣೆಗೆ ಕಾನೂನು ಕ್ರಮ ಕೈಗೊಳ್ಳುವಂತೆ ಯಲಹಂಕನಗರಪೊಲೀಸರಿಗೆ ದೂರು ನೀಡಿದ್ದಾರೆ. ಯಲಹಂಕ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..