ಮಾರುತಿ ಲೇಔಟ್‌ನಲ್ಲಿ ಅಂದರ್-ಬಾಹರ್ ಜೂಜಾಟ: ನಾಲ್ವರು ಬಂಧನ, ಇಸ್ಪೀಟ್ ಎಲೆಗಳು ಹಾಗೂ ನಗದು ವಶ
Taluknewsmedia.comಬೆಂಗಳೂರು, ಜುಲೈ 7— ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ಧನುಷ್ ಚಂದ್ ರವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿ, ದಿನಾಂಕ 02.07.2025 ರಂದು ಮಧ್ಯಾಹ್ನ 4:30ರ ಸುಮಾರಿಗೆ ನಡೆಯಿತು. ಇದಕ್ಕೂ ಮೊದಲು, ಪೊಲೀಸ್ ಅಧಿಕಾರಿ ಸಿದ್ದು ಶೇಗುಣಸಿ ರವರಿಗೆ ಕೊಡಗಿತಿರುಮಲಾಪುರದಿಂದ ಹುರಳಿಚಿಕ್ಕನಹಳ್ಳಿಗೆ ಹೋಗುವ ರಸ್ತೆಯ ಮಾರುತಿ ಲೇಔಟ್‌ನಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮರದ ಕೆಳಗೆ ವೃತ್ತಾಕಾರವಾಗಿ ಕುಳಿತುಕೊಂಡು ಅಂದರ್-ಬಾಹರ್ ಆಟವಾಡುತ್ತಿದ್ದ ನಾಲ್ವರನ್ನು ನೆರೆದು ಬಂಧಿಸಿದರು. ಜೂಜಾಟದಲ್ಲಿ ಬಳಸಲಾಗುತ್ತಿದ್ದ 52 ಇಸ್ಪೀಟ್ ಎಲೆಗಳು, ಒಂದು ಹಳೆಯ ಪೇಪರ್ ಹಾಗೂ ₹3,140 ನಗದು…
ಮುಂದೆ ಓದಿ..
