ರಾಯಚೀನಹಳ್ಳಿ ಎಂ.ಡಿ.ಎಂ.ಎ ಮಾದಕ ವಸ್ತು ಮಾರಾಟ ದಂಧೆ ಪತ್ತೆ – ಒಬ್ಬ ಆರೋಪಿಯ ಬಂಧನ
Taluknewsmedia.com ಬೆಂಗಳೂರು ಜುಲೈ 5 2025ಸ್ಥಳ: ರಾಯಚೀನಹಳ್ಳಿ ಮುಖ್ಯ ರಸ್ತೆ, ಸಿಲ್ವರ್ ಡೋಮಿನ್ಸಿಲ್ ಅಪಾರ್ಟ್‌ಮೆಂಟ್ ಬಳಿ, ಬೆಂಗಳೂರು ಬೆಂಗಳೂರು: ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕ ವಸ್ತುವಿನ ದಂಧೆ ಪತ್ತೆ ಹಚ್ಚಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗಿದ್ದ ಆನಂದ್ ಮನೋಜ್ ಎಂಬಾತನನ್ನು ಬಂಧಿಸಲಾಗಿದೆ. ದಿನಾಂಕ 27/06/2025 ರಂದು ಬೆಳಿಗ್ಗೆ 08:00ರಿಂದ ರಾತ್ರಿ 09:45ರವರೆಗೆ ನಡೆದ ಕಾರ್ಯಾಚರಣೆಯಲ್ಲಿ, ಸಂಪಿಗೆಹಳ್ಳಿ ಪೋಲೀಸರು ಗುಪ್ತ ಮಾಹಿತಿಯನ್ನು ಆಧರಿಸಿ ಸ್ಥಳೀಯವಾಗಿ ದಾಳಿ ನಡೆಸಿದರು. ಆರೋಪಿ ಆನಂದ್ ತನ್ನ ಬಳಿಯಲ್ಲಿ 13.80 ಗ್ರಾಂ ತೂಕದ ಎಂ.ಡಿ.ಎಂ.ಎ ಅನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟುಕೊಂಡಿದ್ದು, ಅದನ್ನು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ ಉದ್ಯೋಗಿಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸಂಪಿಗೆಹಳ್ಳಿ ಪೊಲೀಸರು ಆರೋಪಿಯಿಂದ ಮಾಹಿತಿ ಪಡೆದು ಸ್ಥಳವನ್ನು ಪರಿಶೀಲಿಸಿದಾಗ, ಪಕ್ಕದ…
ಮುಂದೆ ಓದಿ..
