ದಶಕಗಳ ಅನ್ಯಾಯಕ್ಕೆ ʼಅಭಿಯಾನʼದ ಮುಖವಾಡ: ಸರ್ಕಾರದ ವೈಫಲ್ಯಕ್ಕೆ ಹಕ್ಕುಪತ್ರವೇ ಮುಸುಕು?
Taluknewsmedia.comದಶಕಗಳ ಅನ್ಯಾಯಕ್ಕೆ ʼಅಭಿಯಾನʼದ ಮುಖವಾಡ: ಸರ್ಕಾರದ ವೈಫಲ್ಯಕ್ಕೆ ಹಕ್ಕುಪತ್ರವೇ ಮುಸುಕು? ತಾಂಡ, ಹಟ್ಟಿ ಮತ್ತು ಗೊಲ್ಲರಹಟ್ಟಿಗಳಲ್ಲಿ ವಾಸಿಸುತ್ತಿದ್ದ ಲಕ್ಷಾಂತರ ಬಡ ಕುಟುಂಬಗಳು ದಶಕಗಳಿಂದ “ಕಾನೂನಿನ ದೃಷ್ಟಿಗೆ ಅಸ್ತಿತ್ವವಿಲ್ಲದ ಜನ” ಆಗಿ ಬದುಕಬೇಕಾಯಿತು. ನೆಲವಿದ್ದರೂ ಹಕ್ಕಿಲ್ಲ, ಮನೆ ಇದ್ದರೂ ದಾಖಲೆ ಇಲ್ಲ, ಮತದಾರರಾಗಿದ್ದರೂ ನಾಗರಿಕ ಹಕ್ಕುಗಳಿಲ್ಲ : ಈ ಅಮಾನವೀಯ ಸ್ಥಿತಿಗೆ ಕಾರಣ ಯಾರು? ಇದೀಗ ಅದೇ ಸರ್ಕಾರ, 2017ರ ಕಾನೂನು ತಿದ್ದುಪಡಿಯ ಹೆಸರಿನಲ್ಲಿ ಹಕ್ಕುಪತ್ರ ವಿತರಣೆ ಮಾಡಿ, ತಮ್ಮದೇ ವೈಫಲ್ಯವನ್ನು ಸಾಧನೆಯಂತೆ ಮಾರಾಟ ಮಾಡುವ ಧೈರ್ಯ ತೋರಿಸುತ್ತಿದೆ. 70 ವರ್ಷಗಳ ನಿರ್ಲಕ್ಷ್ಯಕ್ಕೆ 7 ವರ್ಷಗಳ ತಡವಾದ ಪರಿಹಾರ?… ರಾಜ್ಯದಲ್ಲಿ ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ, 2017ರಲ್ಲಿ ಮಾತ್ರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ ಅಗತ್ಯ ಬಂತೆಂದರೆ : ಇದುವರೆಗೂ ಆಡಳಿತ ಏನು ಮಾಡುತ್ತಿತ್ತು? ಈ ಜನರು ಹೊಸದಾಗಿ ಹುಟ್ಟಿಕೊಂಡವರೇ? ಅಥವಾ ಚುನಾವಣೆ ಸಮಯದಲ್ಲಿ ಮಾತ್ರ…
ಮುಂದೆ ಓದಿ..
