ಮಗ ಪಾಲನೆ ಮಾಡದ ಕಾರಣ ವೃದ್ಧ ತಂದೆಗೆ ಆಸ್ತಿ ಹಿಂತಿರುಗಿಸಿದ ತುಮಕೂರು ನ್ಯಾಯಾಲಯ
Taluknewsmedia.comಮಗ ಪಾಲನೆ ಮಾಡದ ಕಾರಣ ವೃದ್ಧ ತಂದೆಗೆ ಆಸ್ತಿ ಹಿಂತಿರುಗಿಸಿದ ತುಮಕೂರು ನ್ಯಾಯಾಲಯ ತುಮಕೂರು: ವೃದ್ಧ ತಂದೆಯನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ತೋರಿದ ಮಗನಿಗೆ ದೊಡ್ಡ ಹೊಡೆತ ನೀಡಿರುವಂತಾಗಿ, ತುಮಕೂರು ಉಪ ವಿಭಾಗಾಧಿಕಾರಿ ನ್ಯಾಯಾಲಯವು 2020ರಲ್ಲಿ ನಡೆದ ದಾನಪತ್ರವನ್ನು ರದ್ದುಪಡಿಸಿ, ಆಸ್ತಿಯನ್ನು ಮರಳಿ ತಂದೆಯ ಹೆಸರಿಗೆ ವರ್ಗಾಯಿಸಲು ಮಹತ್ವದ ಆದೇಶ ಹೊರಡಿಸಿದೆ. ತಂದೆಯ ಆರೈಕೆಯ ಭರವಸೆ ಪಾಲಿಸದ ಮಗ.. ಗಾಂಧಿನಗರದ ಟಿಕೆ ಶಿವಪ್ರಸಾದ್ ಅವರು ತಮ್ಮ ಮನೆ ಮತ್ತು ಎರಡು ನಿವೇಶನಗಳನ್ನು 2020ರಲ್ಲಿ ತಮ್ಮ ಚಿಕ್ಕ ಮಗ ಟಿ.ಎಸ್. ಪೃಥ್ವಿಪ್ರಸಾದ್ ಅವರಿಗೆ ದಾನಪತ್ರದ ಮೂಲಕ ಹಸ್ತಾಂತರಿಸಿದ್ದರು.ಮಗನು “ಪಾಲನೆ–ಪೋಷಣೆ, ವೈದ್ಯಕೀಯ ವೆಚ್ಚ ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದರಿಂದ ತಂದೆ ದಾನಪತ್ರಕ್ಕೆ ಒಪ್ಪಿದ್ದರು. ಆದರೆ ಆಸ್ತಿ ಸಿಕ್ಕ ನಂತರ ಮಗನ ನಡವಳಿಕೆಯಲ್ಲಿ ಬದಲಾವಣೆಯಾಗಿ ನಿಂದನೆ, ಹಿಂಸೆ ಹಾಗೂ ಸಂಪೂರ್ಣ ನಿರ್ಲಕ್ಷ್ಯ ಎದುರಿಸಬೇಕಾಯಿತು. ಇದರಿಂದ ಬೇಸತ್ತ ಶಿವಪ್ರಸಾದ್ ಅವರು ‘ಪಾಲಕರ ಪೋಷಣೆ…
ಮುಂದೆ ಓದಿ..
