ವ್ಯವಸ್ಥೆಯ ಬಲಿಪಶು: ಜಿಲ್ಲಾಸ್ಪತ್ರೆಯಲ್ಲೇ ವೈದ್ಯರಿಲ್ಲದಿದ್ದರೆ ಜನಸಾಮಾನ್ಯರ ಗತಿಯೇನು?…
Taluknewsmedia.comವ್ಯವಸ್ಥೆಯ ಬಲಿಪಶು: ಜಿಲ್ಲಾಸ್ಪತ್ರೆಯಲ್ಲೇ ವೈದ್ಯರಿಲ್ಲದಿದ್ದರೆ ಜನಸಾಮಾನ್ಯರ ಗತಿಯೇನು?… ಚಿಕ್ಕಮಗಳೂರಿನ ಮಲೆನಾಡಿನ ಮಡಿಲಲ್ಲಿ, ಕಾಫಿ ತೋಟದ ನಡುವೆ ಸುರಿಯುವ ಮಳೆ-ಬಿಸಿಲನ್ನು ಲೆಕ್ಕಿಸದೆ ದುಡಿಯುವ ಬಡ ಜೀವಗಳಿಗೆ ಇರುವ ಏಕೈಕ ಆಸರೆ ಸರ್ಕಾರಿ ಆಸ್ಪತ್ರೆ. 21 ವರ್ಷದ ಯುವತಿ ಕವಿತಾ ಕೂಡ ಇಂತಹದ್ದೇ ನಂಬಿಕೆಯನ್ನು ಹೊತ್ತು ಜಿಲ್ಲಾಸ್ಪತ್ರೆಗೆ ಬಂದಿದ್ದಳು. ಹೊಸಪೇಟೆ ಗ್ರಾಮದ ಈ ಕಾಯಕಜೀವಿ ಮರದ ಕೊಂಬೆ ಬಿದ್ದು ಅರೆಜೀವವಾದಾಗ, ಆಕೆಯ ಕುಟುಂಬ ‘ಜಿಲ್ಲಾಸ್ಪತ್ರೆ ನಮ್ಮನ್ನು ಕೈಬಿಡುವುದಿಲ್ಲ’ ಎಂದು ನಂಬಿತ್ತು. ಆದರೆ ಆ ನಂಬಿಕೆ ಇಂದು ಚಿತೆಯೇರಿದೆ. ಒಬ್ಬ ಶ್ರಮಜೀವಿಯ ಪ್ರಾಣಕ್ಕಿಂತ ಇಲ್ಲಿ ವ್ಯವಸ್ಥೆಯ ಪ್ರತಿಷ್ಠೆಯೇ ದೊಡ್ಡದಾಯಿತೇ? ಒಂದು ಜಿಲ್ಲೆಯ ಅತ್ಯುನ್ನತ ಚಿಕಿತ್ಸಾ ಕೇಂದ್ರವೆಂದು ಕರೆಸಿಕೊಳ್ಳುವ ಜಿಲ್ಲಾಸ್ಪತ್ರೆಯೊಳಗೆ ಕಾಲಿಟ್ಟರೆ ಅಲ್ಲಿ ಎದುರಾದ ದೃಶ್ಯ ಯಾವುದೇ ಭೀಕರ ಸಿನಿಮಾಗೂ ಕಡಿಮೆಯಿಲ್ಲ. ಎಂತಾ ವಿಪರ್ಯಾಸ ನೋಡಿ:ದೇವರಿಲ್ಲದ ಗುಡಿಯಂತಾದ ಆಸ್ಪತ್ರೆ: ತುರ್ತು ಚಿಕಿತ್ಸಾ ಘಟಕವಿದೆ, ಆದರೆ ಚಿಕಿತ್ಸೆ ನೀಡಲು ಒಬ್ಬನೇ ಒಬ್ಬ ವೈದ್ಯನಿಲ್ಲ! ಜಿಲ್ಲಾ…
ಮುಂದೆ ಓದಿ..
