ಶಿಕ್ಷಣ ಸಂಸ್ಥೆ ಮಾಲೀಕರ ಮನೆಯಲ್ಲೇ ಸೊಸೆಗೆ ವರದಕ್ಷಿಣೆ ನರಕ: ಪ್ರಕರಣದ ಆಘಾತಕಾರಿ ಅಂಶಗಳು..
ಶಿಕ್ಷಣ ಸಂಸ್ಥೆ ಮಾಲೀಕರ ಮನೆಯಲ್ಲೇ ಸೊಸೆಗೆ ವರದಕ್ಷಿಣೆ ನರಕ: ಪ್ರಕರಣದ ಆಘಾತಕಾರಿ ಅಂಶಗಳು.. ವಿದ್ಯಾದಾನ ಮಾಡುವ ಕೈಗಳಿಂದಲೇ ವರದಕ್ಷಿಣೆಯಂತಹ ಪಿಡುಗಿಗೆ ಕುಮ್ಮಕ್ಕು ಸಿಕ್ಕಿರುವುದು ನಮ್ಮ ಸಮಾಜದ ದುರಂತ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆದ ಈ ಘಟನೆಯು, ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ನಮ್ಮ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಸಂತ್ರಸ್ತೆ ಪ್ರೀತಿ ಇದೀಗ ನ್ಯಾಯಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಸಾಮಾನ್ಯ ವ್ಯಕ್ತಿಗಳಲ್ಲ. ಮಾಗಡಿಯಲ್ಲಿ ಹೆಸರುವಾಸಿಯಾಗಿರುವ ‘ಮಾರುತಿ ಶಿಕ್ಷಣ ಸಂಸ್ಥೆ’ಯ ಮಾಲೀಕರಾದ ಗಂಗರಾಜು ಅವರ ಕುಟುಂಬದವರೇ ಆಗಿದ್ದಾರೆ. ಸಂತ್ರಸ್ತೆ ಪ್ರೀತಿ ಅವರು ತಮ್ಮ ಪತಿ ರೂಪೇಶ್, ಮಾವ ಗಂಗರಾಜು, ಮತ್ತು ಅತ್ತೆ ವರಲಕ್ಷ್ಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಜ್ಞಾನವನ್ನು ಹಂಚಬೇಕಾದವರ ಮನೆಯಲ್ಲೇ ಇಂತಹ ಅಮಾನವೀಯ ಘಟನೆ ನಡೆದಾಗ, ಅವರು ಸಮಾಜಕ್ಕೆ ನೀಡುವ ಶಿಕ್ಷಣದ ನೈಜ ಮೌಲ್ಯದ ಬಗ್ಗೆಯೇ ಪ್ರಶ್ನೆಗಳು…
ಮುಂದೆ ಓದಿ..
