ಕೊಪ್ಪಳದ ಕೆರೆಯಲ್ಲಿ ನಂದಿದ ಯುವ ಕಿಡಿ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತೇ ಒಂದು ಜೀವ?…
ಕೊಪ್ಪಳದ ಕೆರೆಯಲ್ಲಿ ನಂದಿದ ಯುವ ಕಿಡಿ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತೇ ಒಂದು ಜೀವ?… ಭಾನುವಾರ ಎಂದರೆ ಸಾಧಾರಣವಾಗಿ ಶ್ರಮಜೀವಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ವಾರದ ದಣಿವನ್ನಾರಿಸಿಕೊಳ್ಳುವ, ವಿಶ್ರಾಂತಿ ಮತ್ತು ವಿರಾಮದ ಸುಂದರ ಸಮಯ. ಆದರೆ ಕೊಪ್ಪಳದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆ ಬಡ ವಿದ್ಯಾರ್ಥಿಯ ಪಾಲಿಗೆ ಈ ಭಾನುವಾರ ಬದುಕಿನ ಕಡೆಯ ದಿನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮೋಜು-ಮಸ್ತಿಗೆಂದು ಹೋದ ಕ್ಷಣವೊಂದು ಮಹಾದುರಂತದಲ್ಲಿ ಅಂತ್ಯಗೊಂಡಾಗ, ಅದು ಕೇವಲ ಒಂದು ಆಕಸ್ಮಿಕ ಅಪಘಾತವಾಗಿ ಉಳಿಯದೆ, ನಮ್ಮ ಆಡಳಿತ ವ್ಯವಸ್ಥೆಯ ಮೋಟುಬುದ್ಧಿ ಮತ್ತು ಸಂವೇದನಾಶೂನ್ಯತೆಯನ್ನು ಎತ್ತಿ ತೋರಿಸುವ ಕನ್ನಡಿಯಾಗುತ್ತದೆ. ನಗರದ ವಸತಿ ನಿಲಯದಲ್ಲಿ ಆಶ್ರಯ ಪಡೆದು ಓದುತ್ತಿದ್ದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ಕೇವಲ ಒಂದು ಅಂಕಿ-ಅಂಶವಲ್ಲ; ಬದಲಾಗಿ ಒಂದು ಬಡ ಕುಟುಂಬದ ಭವಿಷ್ಯದ ಆಧಾರಸ್ತಂಭವೇ ಕುಸಿದು ಬಿದ್ದ ಘೋರ ದುರಂತ. ಈ ಸಾವು ಸಂಭವಿಸಿದ ನಂತರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು…
ಮುಂದೆ ಓದಿ..
