ಬಳ್ಳಾರಿ: ಸದ್ದಿಲ್ಲದೆ ನಡೆದ ಒಂದು ವ್ಯವಸ್ಥಿತ ಕೊಲೆ? ಗುತ್ತಿಗೆ ನೌಕರನ ಸಾವಿನ ಹಿಂದಿನ ಅಸಲಿ ಸತ್ಯಗಳು..
ಬಳ್ಳಾರಿ: ಸದ್ದಿಲ್ಲದೆ ನಡೆದ ಒಂದು ವ್ಯವಸ್ಥಿತ ಕೊಲೆ? ಗುತ್ತಿಗೆ ನೌಕರನ ಸಾವಿನ ಹಿಂದಿನ ಅಸಲಿ ಸತ್ಯಗಳು.. ಸರ್ಕಾರಿ ಕಚೇರಿಗಳೆಂದರೆ ಅಲ್ಲಿ ಜನಸಾಮಾನ್ಯರ ಸೇವೆ ನಡೆಯಬೇಕು ಎಂಬುದು ಸಿದ್ಧಾಂತ. ಆದರೆ ವಾಸ್ತವದಲ್ಲಿ, ಇವು ಇಂದು ಪ್ರಾಮಾಣಿಕ ನೌಕರರ ಪಾಲಿಗೆ ನರಕಸದೃಶ ಅಖಾಡಗಳಾಗಿ ಮಾರ್ಪಡುತ್ತಿವೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಗೌರಿಪುರದಲ್ಲಿ ಇತ್ತೀಚೆಗೆ ನಡೆದ ಜಿ.ಎನ್. ರಾಜು ಎಂಬ ಗುತ್ತಿಗೆ ನೌಕರನ ಆತ್ಮಹತ್ಯೆ ಪ್ರಕರಣವು ಕೇವಲ ಒಂದು ಸಾವಿನ ಸುದ್ದಿಯಲ್ಲ; ಇದು ಅಧಿಕಾರಶಾಹಿಯ ಅಂಧದರ್ಬಾರ್ ಮತ್ತು ಆಡಳಿತ ವ್ಯವಸ್ಥೆಯ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಒಬ್ಬ ಸಾಮಾನ್ಯ ನೌಕರನನ್ನು ಸಾವಿನ ದವಡೆಗೆ ತಳ್ಳುವಲ್ಲಿ ವ್ಯವಸ್ಥೆಯು ಹೇಗೆ ಹಂತ ಹಂತವಾಗಿ ಕ್ರೌರ್ಯವನ್ನು ಮೆರೆಯುತ್ತದೆ ಎಂಬುದನ್ನು ಈ ಘಟನೆಯು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಮೂರು ಪುಟಗಳ ಮೃತ್ಯು ಪತ್ರ: ಇದು ಕೇವಲ ನೋವಲ್ಲ, ವ್ಯವಸ್ಥಿತ ಕೊಲೆಯ ಸಾಕ್ಷಿ… ಜಿ.ಎನ್. ರಾಜು ಅವರು ಸಾವಿಗೂ ಮುನ್ನ ಬರೆದಿರುವ…
ಮುಂದೆ ಓದಿ..
