ಸುದ್ದಿ 

ನಕಲಿ ‘ಮಫ್ತಿ’ ಬ್ರಾಂಡ್ ಬಟ್ಟೆಯ ಮಾರಾಟ: ಕಂಪನಿಯ ಪ್ರತಿನಿಧಿಯಿಂದ ಪೊಲೀಸರಿಗೆ ದೂರು.

ನಗರದ ಬಿ.ಎಸ್.ಕೆ-1ನೇ ಹಂತದ 22ನೇ ಮುಖ್ಯರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ, ಪ್ರಸಿದ್ಧ ಮಫ್ತಿ (Muffthi) ಬ್ರಾಂಡ್ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕಂಪನಿಯ ಪ್ರತಿನಿಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೆ/ಎಸ್ ಬ್ರಾಂಡ್ ಪ್ರೋಡಕ್ಟೋರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೀ ಸ್ಟೀಫನ್ ರಾಜ್ ಅವರು ದಿನಾಂಕ 20.06.2025 ರಂದು ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದಾರೆ. ಅವರ ಪ್ರಕಾರ, ಅಲ್ವೇಸ್ ಎಂಬ ಬಟ್ಟೆ ಅಂಗಡಿಯಲ್ಲಿ ಮಫ್ತಿ ಬ್ರಾಂಡ್ ಹೆಸರಿನಲ್ಲಿ ನಕಲಿ ಗಾರ್ಮೆಂಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದ್ದು, ಈ ಮೂಲಕ ಕಂಪನಿಯ ಬ್ರಾಂಡ್ ಮೌಲ್ಯವನ್ನು ಹಾನಿಗೊಳಿಸುತ್ತಿರುವುದರ ಜೊತೆಗೆ ಗ್ರಾಹಕರನ್ನೂ ಮೋಸಗೊಳಿಸಲಾಗುತ್ತಿದೆ. ಈ ನಕಲಿ ಉತ್ಪನ್ನಗಳ ಮಾರಾಟದಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆ, ಸರಿಯಾದ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ…

ಮುಂದೆ ಓದಿ..
ಸುದ್ದಿ 

ಮಧ್ಯರಾತ್ರಿ ಯುವತಿಯ ಮನೆ ಮೇಲೆ ದಾಳಿ: ಮಾಜಿ ಪ್ರೇಮಿಯಿಂದ ಕಿರುಕುಳ, ಹಲ್ಲೆ ಯತ್ನ..

ಒಂದು ಕಾಲದ ಪ್ರೇಮಿ ಮಧ್ಯರಾತ್ರಿ ಯುವತಿಯ ಮನೆಗೆ ನುಗ್ಗಿ ಕಿರುಕುಳ ನೀಡಿದ ಹಾಗೂ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ಯುವತಿ ವೈಷ್ಣವಿ ಅವರು ಹನುಮಂತನಗರದ ಪೊಲೀಸರಿಗೆ ದೂರು ನೀಡಿದ್ದು, ಯೋಗೇಶ್ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವೈಷ್ಣವಿಯವರ ಮಾಹಿತಿ ಪ್ರಕಾರ, ವೈಷ್ಣವಿ ಮತ್ತು ಯೋಗೇಶ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯೋಗೇಶ್ ನಡತೆ ಸರಿ ಇಲ್ಲದ ಕಾರಣ ಸಂಬಂಧ ಮುರಿದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಯೋಗೇಶ್ ನಿರಂತರವಾಗಿ ವಿವಿಧ ಅಪರಿಚಿತ ನಂಬರ್‌ಗಳಿಂದ ಕರೆಮಾಡಿ ಅವಳಿಗೆ ಕಿರುಕುಳ ನೀಡುತ್ತಿದ್ದನು. ದಿನಾಂಕ 20ರಂದು ರಾತ್ರಿ ಸುಮಾರು 12:30ರ ಸುಮಾರಿಗೆ, ಯೋಗೇಶ್ ವೈಷ್ಣವಿಯ ಮನೆಯ ಬಳಿಗೆ ಬಂದು ಜೋರಾಗಿ ಕೂಗಾಡುತ್ತಿದ್ದನು. ಈ ವಿಷಯವನ್ನು ತಾಯಿ ಗಮನಿಸಿದಾಗ, ಯಾಕೆ ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಿದಕ್ಕೆ ಅವನು ಅವಾಚ್ಯ ಶಬ್ದಗಳಿಂದ ಬೈದು, ಸಮೀಪದಲ್ಲಿದ್ದ ಕಲ್ಲಿನಿಂದ ವೈಷ್ಣವಿಯ…

ಮುಂದೆ ಓದಿ..
ಸುದ್ದಿ 

ಗೋಡಾನ್ ಮೇಲೆ ನಾಲ್ವರು ಅಪರಿಚಿತರ ದಾಳಿ: ಕಾರ್ಮಿಕನಿಗೆ ಹಲ್ಲೆ, ಚಾಕುವಿನಿಂದ ಬೆದರಿಕೆ…

ಬೆಂಗಳೂರು, ಜೂನ್ 22: ನಗರದ ಮಾರುತಿ ಟೈಲ್ಸ್ ಗೋಡಾನ್ ನಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ, ಕಾರ್ಮಿಕನಿಗೆ ಹಲ್ಲೆ ನಡೆಸಿದ ಹಾಗೂ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಶ್ರೀ ಸದಾನಂದ ಅವರು ಕೊಟ್ಟಿರುವ ದೂರಿನ ಪ್ರಕಾರ, ಅವರು ಕಳೆದ ಐದು ವರ್ಷಗಳಿಂದ ಗೋಡಾನ್ ನಲ್ಲಿ ವಾಸವಿದ್ದು ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಗೋಡಾನ್ ನಲ್ಲಿ ಆಸ್ಸಾಂ ಮೂಲದ ಆರು ಕಾರ್ಮಿಕರು ಸಹ ವಾಸವಿದ್ದು, ಕೆಲಸ ಮಾಡುತ್ತಿದ್ದಾರೆ. ದಿನಾಂಕ 18-06-2025 ರಂದು ಸಂಜೆ 6.45ರ ಸುಮಾರಿಗೆ, ಗೋಡಾನ್ ಮುಂದೆ ನಾಲ್ವರು ಅಪರಿಚಿತರು ನಿಂತು ಶಂಕಿಸಬಹುದಾದ ಚಲನವಲನಗಳಲ್ಲಿ ತೊಡಗಿದ್ದರು. ಈ ವೇಳೆ ಸದಾನಂದ ಹಾಗೂ ಕಾರ್ಮಿಕ ರಾಜು ಚೌಹಾಣ್ ಅವರು ಗೋಡಾನ್ ಗೇಟ್ ಬಳಿ ಹೋದಾಗ, ಆ ವ್ಯಕ್ತಿಗಳಲ್ಲಿ ಒಬ್ಬರು “ಏ ಬಾರೋಲೇ” ಎಂದು ಕೂಗಿದ್ದು, ಪ್ರತಿಕ್ರಿಯೆ ನೀಡಿದ ತಕ್ಷಣ ನಾಲ್ವರೂ ಏಕಾಏಕಿ ದೌಡಾಯಿಸಿ ಬಲವಂತವಾಗಿ…

ಮುಂದೆ ಓದಿ..
ಸುದ್ದಿ 

ಮಹಿಳೆಯೊಬ್ಬರಿಗೆ ಅಸಭ್ಯ ವರ್ತನೆ ಹಾಗೂ ಜೀವ ಬೆದರಿಕೆ: ಇಬ್ಬರ ವಿರುದ್ಧ ಪೊಲೀಸ್ ದೂರು..

ಸಾರ್ವಜನಿಕ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿ ಮಹಿಳೆಯೊಬ್ಬರ ಮಾನಕ್ಕೆ ಧಕ್ಕೆಯುಂಟುಮಾಡಿದ ಆರೋಪ ಮತ್ತು ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯೊಬ್ಬರು ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಅಶೋಕ್ ಹಾಗೂ ಆಶಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶ್ರೀಮತಿ ರಾಜೇಶ್ವರಿ ಅವರು ನೀಡಿದ ದೂರಿನ ಪ್ರಕಾರ, 18 ಜೂನ್ 2025 ರಂದು ಬೆಳಿಗ್ಗೆ ಸುಮಾರು 6:00 ಗಂಟೆಗೆ, ಅವರ ತಂಗಿ ವನಜಾಕ್ಷಿ ಅವರು ಅಂಜನಾಪುರದ 80 ಅಡಿ ರಸ್ತೆಯ ಡಿಪೋದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಅಶೋಕ್ ಎಂಬಾತನು ತನ್ನ ಡಿಯೋ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಂಗಿಯನ್ನು ತಡೆದು “ಎಲ್ಲಿ ಹೋಗುತ್ತಿದ್ದೀಯಾ?” ಎಂದು ಕೇಳಿದ್ದನು. ತದನಂತರ, ಆಕೆಯ ಕೈ ಹಿಡಿದು ಎಳೆದಾಡಿ, “ನನ್ನ ಜೊತೆಗೆ ಬಾ” ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ವನಜಾಕ್ಷಿ ಶಬ್ದ ಮಾಡಿದಾಗ, ಅಶೋಕ್ ಸ್ಥಳದಿಂದ ಪರಾರಿಯಾದನು.…

ಮುಂದೆ ಓದಿ..
ಸುದ್ದಿ 

ಜಾಮೀನಿನ ನಿಯಮ ಉಲ್ಲಂಘಿಸಿದ ಆರೋಪಿಗೆ ಮತ್ತೆ ದಸ್ತಗಿರಿ – ಬಿಡದಿ ಪೊಲೀಸರು ತಕ್ಷಣದ ಕ್ರಮ

392 ಐಪಿಸಿ ಕಾಲಂ ಅಡಿಯಲ್ಲಿ ದೂರು ದಾಖಲಾಗಿದ್ದ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಜಯ್ ಕುಮಾರ್ (28), ನ್ಯಾಯಾಲಯದ ಜಾಮೀನಿನ ನಿಯಮಗಳನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ, ಬಿಡದಿ ಠಾಣಾ ಪೊಲೀಸರು ಆತನನ್ನು ಮರುದಸ್ತಗಿರಿ ಮಾಡಿದ್ದಾರೆ. ಅಜಯ್ ಕುಮಾರ್, ಮಡಿವಾಳ ಜನಾಂಗದವನು, ಕೆಂಗೇರಿ ಉಪನಗರದ ಬಂಡೆಮಠದ ಬಳಿಯ 1ನೇ ಅಡ್ಡರಸ್ತೆಯ ನಿವಾಸಿಯಾಗಿದ್ದು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುತ್ತಿದ್ದ. ಆತನ ವಿರುದ್ಧದ ಪ್ರಕರಣಗಳು ಬಿಡದಿ ಪೊಲೀಸ್ ಠಾಣೆಯಲ್ಲಿ ಮೊ.ನಂ-57/2021 ಹಾಗೂ ಮೊ.ನಂ-323/2021 ರಂತೆ ದಾಖಲಾಗಿದ್ದು, ಸುತ್ತೋಲೆ ಪ್ರಕರಣಗಳು ಕ್ರಮವಾಗಿ ಸಿ.ಸಿ ನಂ-09/2022 ಮತ್ತು ಸಿ.ಸಿ ನಂ-20/2022 ರಂತೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಆರೋಪಿ ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿರುವುದರಿಂದ, ನ್ಯಾಯಾಲಯವು ಈಗಾಗಲೇ ಎರಡು ಉದ್ಘೋಷಣೆಗಳನ್ನು ಹೊರಡಿಸಿದ್ದರ ಬಗ್ಗೆ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಮೊ.ನಂ-57/2021 ಪ್ರಕರಣದಲ್ಲಿ 2024ರ ಫೆಬ್ರವರಿ 8ರಂದು ಹಾಗೂ ಮೊ.ನಂ-323/2021 ಪ್ರಕರಣದಲ್ಲಿ 2023ರ ಆಗಸ್ಟ್ 24ರಂದು ಉದ್ಘೋಷಣೆಯನ್ನು ಜಾರಿಗೆ ತಂದಿರುವುದಾಗಿ ವರದಿಯಿದೆ.…

ಮುಂದೆ ಓದಿ..
ಕ್ರೈಂ ಸುದ್ದಿ ಸುದ್ದಿ 

ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನ: ಯುವಕನಿಂದ ಪೊಲೀಸರಿಗೆ ದೂರು

ನಗರದ ನಿವಾಸಿಯಾದ 23 ವರ್ಷದ ಎಲೆಕ್ಟ್ರಿಷಿಯನ್ ವರುಣ್ ಕುಮಾರ್ ಅವರು ತಮ್ಮ ತಾಯಿ ಹೆಸರಿನಲ್ಲಿ ನೋಂದಾಯಿತ ಹೊಂಡಾ ಡಿಯೋ (ನಂ: KA-41-EP-9216) ದ್ವಿಚಕ್ರ ವಾಹನ ಕಳ್ಳತನವಾಗಿದ್ದು, ಈ ಕುರಿತು ಕೆಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ವರುಣ್ ಕುಮಾರ್ ಅವರು ದಿನಾಂಕ 10 ಜೂನ್ 2025 ರಂದು ರಾತ್ರಿ 8:30ರ ಸುಮಾರಿಗೆ ತಮ್ಮ ಮನೆ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿದ್ದರು. ಆದರೆ, ಮರುದಿನ ಬೆಳಗ್ಗೆ ಸುಮಾರು 6:30ರ ವೇಳೆಗೆ ಅವರು ವಾಹನವನ್ನು ನೋಡಲು ಬಂದಾಗ ಅದು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿತ್ತು. ತಕ್ಷಣವೇ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದೆ ಹೋದ ಹಿನ್ನೆಲೆಯಲ್ಲಿ, ಯಾರೋ ಅಪರಿಚಿತರು ವಾಹನವನ್ನು ಕಳ್ಳತನ ಮಾಡಿರಬಹುದು ಎಂಬ ಅನುಮಾನದಿಂದ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನವಾದ ಹೊಂಡಾ ಡಿಯೋ2019ರ ಮಾದರಿಯದುವಾಗಿದ್ದು,ಆರೆಂಜ್-ಗ್ರೇ ಬಣ್ಣದಲ್ಲಿ ಇತ್ತು.ಚ್ಯಾಸಿಸ್ ನಂಬರ್ ME4JF39HDKG003253…

ಮುಂದೆ ಓದಿ..
ಕ್ರೈಂ ಸುದ್ದಿ ಸುದ್ದಿ 

ಬೃಹತ್ ಉದ್ಯಮ ವಂಚನೆ: ಇಬ್ಬರು ಆರೋಪಿಗಳಿಂದ ಕೋಟ್ಯಂತರ ಮೊತ್ತ, ಮೋಸ….

ಉದ್ಯಮದ ಹೆಸರಿನಲ್ಲಿ ನಂಬಿಕೆ ಮೂಡಿಸಿ ಹೂಡಿಕೆದಾರರಿಂದ ಕೋಟ್ಯಾಂತರ ಹಣ ಪಡೆದು ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗೌತಮ್ ಪಿ.ಕೆ. ಅವರು ನೀಡಿದ ಮಾಹಿತಿಯಂತೆ, 2019ರ ಡಿಸೆಂಬರ್‌ನಲ್ಲಿ ಎಂ.ಜಿ. ರಸ್ತೆಯಲ್ಲಿನ ತಮ್ಮ ಅಣ್ಣನ ಆಫೀಸ್‌ನಲ್ಲಿ ಜಯರಾಮ್ ಹಾಗೂ ರೋಷನ್ ಎಂಬುವವರನ್ನು ಭೇಟಿಯಾಗಿದ್ದರು. ಜಯರಾಮ್ ತನ್ನನ್ನು “ಮಾಜಿ ಗವರ್ನರ್ ಸೆಕ್ರೇಟರಿ” ಎಂದು ಪರಿಚಯಿಸಿ, “ಆಲ್ ಇಂಡಿಯಾ ರೋಬೋಟಿಕ್ ಎಜ್ಯುಕೇಶನ್” ಎಂಬ ಹೆಸರಿನಲ್ಲಿ ಬೃಹತ್ ಕೇಂದ್ರ ಸರ್ಕಾರಿ ಟೆಂಡರ್‌ ಬಗ್ಗೆ ಭರವಸೆ ನೀಡಿದ್ದಾರೆ. ಹೀಗೆಯೇ ₹3 ಕೋಟಿ ಮೊತ್ತದ ಬಂಡವಾಳ ಬೇಕೆಂದು ಹೇಳಿ, ಆರೋಪಿಗಳು ಗೌತಮ್ ಹಾಗೂ ಆತನ ಸಹ ಹೂಡಿಕೆದಾರರಿಂದ ಹಂತ ಹಂತವಾಗಿ ₹2,50,53,400/- ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಈ ಹಣವನ್ನು ಹೂಡಿಕೆ ಮಾಡಿ ಲಾಭ ಹಂಚಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಹೆಚ್ಚಿನ ಲಾಭದ ನಂಬಿಕೆಯಿಂದ ‘SKILLSCULPT LLP’ ಎಂಬ ಕಂಪನಿಯನ್ನು ಸ್ಥಾಪನೆಗೊಳಿಸಿ, ಖಾತೆ ಮೂಲಕ…

ಮುಂದೆ ಓದಿ..
ಕ್ರೈಂ ಸುದ್ದಿ ಸುದ್ದಿ 

ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಿಂದ ದ್ವಿಚಕ್ರ ವಾಹನ ಕಳ್ಳತನ..

ಅರುಲ್ ಆನಂದನ್ ಅವರು ದೊಡ್ಡತೋಗೂರಿನ ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ತಮ್ಮ ಸುಜಿಕಿ ಆಕ್ಸಿಸ್ 125 (ವಾಹನ ಸಂಖ್ಯೆ KA-05-LQ-4304) ದ್ವಿಚಕ್ರ ವಾಹನವನ್ನು ದಿನಾಂಕ 27-05-2025ರಂದು ರಾತ್ರಿ 8:45 ಗಂಟೆಗೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಪರಿವಾರಿಕ ಕಾರಣಗಳಿಂದ ಊರಿಗೆ ತೆರಳಿದ್ದ ದೂರುದಾರರು 10-06-2025ರಂದು ಬೆಳಿಗ್ಗೆ 7:30 ಗಂಟೆಗೆ ವಾಪಸ್ ಬಂದು ನೋಡಿದಾಗ ತಮ್ಮ ವಾಹನವು ಪಾರ್ಕಿಂಗ್‌ನಲ್ಲಿ ಕಾಣಿಸದ ಹಿನ್ನೆಲೆ ತಡವಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಿದರು. ಯಾರೋ ಅಪರಿಚಿತ ವ್ಯಕ್ತಿಗಳು ಪಾರ್ಕಿಂಗ್‌ನಲ್ಲಿದ್ದ ವಾಹನವನ್ನು ಕಳ್ಳತನ ಮಾಡಿದ ಅನುಮಾನ ವ್ಯಕ್ತವಾಗಿದೆ. ಕಳ್ಳತನವಾದ ವಾಹನದ ವಿವರಗಳು: ವಾಹನದ ಬ್ರ್ಯಾಂಡ್: ಸುಜಿಕಿ ಆಕ್ಸಿಸ್ 125 ಮಾದರಿ: 2022 ಬಣ್ಣ: ಮ್ಯಾಟ್ ಬ್ಲ್ಯಾಕ್ ವಾಹನ ಸಂಖ್ಯೆ: KA-05-LQ-4304 ಎಂಜಿನ್ ನಂ.: AF217288981 ಚೆಸ್ಸಿಸ್ ನಂ.: MB8DP12DLN8E31421 ಅಂದಾಜು ಮೌಲ್ಯ: ₹75,000 ಪೊಲೀಸರು IPC ಸೆಕ್ಷನ್ 379 ಅಡಿಯಲ್ಲಿ ಕೇಸು ದಾಖಲಿಸಿಕೊಂಡು…

ಮುಂದೆ ಓದಿ..
ಸುದ್ದಿ 

ಸ್ನ್ಯಾಕ್ಸ್ ತರಲು ಹೋಗಿ ನಾಪತ್ತೆಯಾದ ಯುವಕ : ಕುಟುಂಬಸ್ಥರು ಚಿಂತಾಗ್ರಸ್ತರಾಗಿದ್ದಾರೆ.

ಬೆಂಗಳೂರು, ಜೂನ್ 22: ನಗರದ ನಿವಾಸಿ 26 ವರ್ಷದ ಯುವಕ ವರುಣ್ ಕುಮಾರ್ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ವರುಣ್ ಅವರ ಅಕ್ಕ ನಾದ ನಯನರವರ ಪ್ರಕಾರ, ವರುಣ್ ಕುಮಾರ್ ಅವರು ದಿನಾಂಕ 17-06-2025 ರಂದು ಮದ್ಯಾಹ್ನ ಸುಮಾರು 2:30 ಗಂಟೆಗೆ “ಸ್ನ್ಯಾಕ್ಸ್ ತೆಗೆದುಕೊಂಡು 5 ನಿಮಿಷದಲ್ಲಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೋದ ವರುಣ್ ಅವರು ಇದುವರೆಗೆ ಮನೆಗೆ ವಾಪಸ್ ಬಂದಿಲ್ಲ.ಅನೇಕ ಬಾರಿ ನಯನ ಅವರು ವರುಣ್ ಮೊಬೈಲ್ ನಂಬರ್‌ಗೆ ಸಂಪರ್ಕಿಸಲು ಯತ್ನಿಸಿದರೂ, ಅವರು ಕರೆ ಸ್ವೀಕರಿಸುತ್ತಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ವಿಚಾರಣೆ ಮಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ವರುಣ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ನಯನ ಠಾಣೆಗೆ ದೂರು ದಾಖಲಿಸಿದ್ದಾರೆ. ಮೈಕೊ ಬಡಾವಣೆಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಕ್ರಮ ಆರಂಭಿಸಿದೆ.ವರುಣ್ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಾರ್ವಜನಿಕರು ಹತ್ತಿರದ ಪೊಲೀಸ್…

ಮುಂದೆ ಓದಿ..
ಸುದ್ದಿ 

ಬಿಟಿಎಂ ಲೇಔಟ್‌ನಲ್ಲಿ ಅಕ್ರಮ ಎಲ್‌ಪಿ‌ಜಿ ಸಿಲಿಂಡರ್‌ ದಾಸ್ತಾನು: ಶಾಲಾ ಮಕ್ಕಳಿಗೆ ಅಪಾಯದ ನೆರಳು..

ಬೆಂಗಳೂರು, ಜೂನ್ 22 – ನಗರದ ಬಿಟಿಎಂ ಲೇಔಟ್ 2ನೇ ಹಂತದ ಎಸ್.ಎನ್.ಎನ್ ಅಪಾರ್ಟ್‌ಮೆಂಟ್ ಹಾಗೂ ಏಕ್ಯ ಶಾಲೆಯ ಸಮೀಪ ಅಕ್ರಮವಾಗಿ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ, ಕಮರ್ಶಿಯಲ್ ಸಿಲಿಂಡರ್‌ಗಳಿಗೆ ಪುನಃ ಭರ್ತಿ (ರೀ-ಫಿಲ್ಲಿಂಗ್) ಮಾಡುತ್ತಿರುವ ಶಂಕೆಯ ಕುರಿತಂತೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭಿಸಿದ್ದು, ತನಿಖೆಗಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿನಾಂಕ 18/06/2025 ರಂದು ಬೆಳಿಗ್ಗೆ 11:50ರ ವೇಳೆಗೆ ಸಿಸಿಬಿ ಕಛೇರಿಗೆ ಈ ಕುರಿತು ಭಾತ್ಮೀ ಮಾಹಿತಿ ಲಭಿಸಿದೆ. ಆಧಾರದ ಮೇಲೆ ಸಿಸಿಬಿಯ ಎಎಸ್‌ಐ ಮೊಹಮ್ಮದ್ ಜಬೀವುಲ್ಲಾ ಮತ್ತು ಎಎಸ್‌ಐ ಶ್ರೀನಿವಾಸ.ಟಿ ಅವರು ಮಧ್ಯಾಹ್ನ 12:40ರ ಸುಮಾರಿಗೆ ಬಿಟಿಎಂ ಲೇಔಟ್ 2ನೇ ಹಂತದ ಎಸ್.ಎನ್.ಎನ್ ಅಪಾರ್ಟ್‌ಮೆಂಟ್ ಹಾಗೂ ಏಕ್ಯ ಶಾಲೆಯ ಸಮೀಪದ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಸಾವಿರಾರು ಜನರು ವಾಸವಿರುವ ಅಪಾರ್ಟ್‌ಮೆಂಟ್ ಹಾಗೂ ಶಾಲೆಯಲ್ಲಿ ಮಕ್ಕಳು ಹಾಜರಿರುವ ಪರಿಸರದಲ್ಲಿಯೇ,…

ಮುಂದೆ ಓದಿ..