ಲೋಕಾಯುಕ್ತ ಭ್ರಷ್ಟಾಚಾರ……
ತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ,ರಕ್ಷಕರೇ ಭಕ್ಷಕರಾದರೇ,ಕಾಯುವವರೇ ಕೊಲ್ಲುವವರಾದರೇ,ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ…….. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ ನಾಡಿಗಳಲ್ಲೂ ಭ್ರಷ್ಟಾಚಾರದ ವಿಷ ತುಂಬಿಕೊಂಡಿರುವಂತಿದೆ. ಅಂದರೆ ಕೆಟ್ಟ, ಭ್ರಷ್ಟ ಹಣದ ಪ್ರಭಾವ ಇಡೀ ಸಮಾಜವನ್ನು ಆವರಿಸಿಕೊಂಡಿದೆ. ಹಣ ಹೇಗಾದರೂ ಇರಲಿ, ಹೇಗಾದರೂ ಬರಲಿ ಹಣದಿಂದ ಎಲ್ಲವನ್ನೂ ಪಡೆಯಬಹುದು ಎನ್ನುವ ಮನೋಭಾವನೆಯ ವಾತಾವರಣ ಎಲ್ಲರಲ್ಲೂ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುವುದು ಮೂರ್ಖತನವಾಗುತ್ತದೆ. ಬಹುತೇಕ ಪ್ರತಿಯೊಬ್ಬರು ಹಣದ ಹಿಂದೆಯೇ ಬಿದ್ದಿದ್ದಾರೆ. ಶಿಕ್ಷಣಕ್ಕೆ ಹಣ, ಆರೋಗ್ಯಕ್ಕೆ ಹಣ, ಊಟಕ್ಕೆ ಹಣ, ಪ್ರವಾಸಕ್ಕೆ ಹಣ, ಬಟ್ಟೆಗೆ ಹಣ, ವಸತಿಗೆ ಹಣ, ಮನೆಯ ಗೃಹೋಪಯೋಗಿ ವಸ್ತುಗಳಿಗೆ ಹಣ, ಸಂಪರ್ಕ ಸಾಧನಗಳಿಗೆ ಹಣ, ಮದುವೆಗೆ ಹಣ, ನಾಮಕರಣಕ್ಕೆ ಹಣ, ಹುಟ್ಟುಹಬ್ಬಕ್ಕೆ ಹಣ, ವಾರ್ಷಿಕೋತ್ಸವಕ್ಕೆ ಹಣ, ಜೀವ ವಿಮೆಗೆ ಹಣ, ವಿದ್ಯುತ್ ಬಿಲ್ಲಿಗೆ…
ಮುಂದೆ ಓದಿ..
