ಪ್ರೇಮ ಜೋಡಿಗೆ ನೆರವು ನೀಡಿದ ಆರೋಪ: ಚಾಕು ದಾಳಿ; ಇಬ್ಬರು ಮೃತ್ಯು
ಪ್ರೇಮ ಜೋಡಿಗೆ ನೆರವು ನೀಡಿದ ಆರೋಪ: ಚಾಕು ದಾಳಿ; ಇಬ್ಬರು ಮೃತ್ಯು ಶಿವಮೊಗ್ಗ: ಪ್ರೇಮ ಸಂಬಂಧಕ್ಕೆ ಸಹಾಯ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಚಾಕುವಿನಿಂದ ದಾಳಿ ನಡೆಸಿ ಇಬ್ಬರನ್ನು ಕೊಲೆ ಮಾಡಿರುವ ದುರ್ಘಟನೆ ಭದ್ರಾವತಿ ಪಟ್ಟಣದ ಜೈಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕಿರಣ್ (25) ಹಾಗೂ ಮಂಜುನಾಥ್ (65) ಮೃತಪಟ್ಟಿದ್ದಾರೆ. ಜೈಭೀಮ್ ನಗರದ ಶೃತಿ ಮತ್ತು ನಂದೀಶ್ ಪರಸ್ಪರ ಪ್ರೀತಿಸುತ್ತಿದ್ದು, ಎರಡು ದಿನಗಳ ಹಿಂದೆ ಇಬ್ಬರೂ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಶುಕ್ರವಾರ ಭದ್ರಾವತಿಗೆ ಮರಳಿದ ಜೋಡಿ ನೇರವಾಗಿ ಹಳೇನಗರ ಪೊಲೀಸ್ ಠಾಣೆಗೆ ತೆರಳಿದ್ದು, ಈ ವೇಳೆ ಯುವತಿ ನಂದೀಶ್ ಜೊತೆಗೆ ಹೋಗುವುದಾಗಿ ಹೇಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಜೋಡಿಗೆ ಮನೆ ಬಿಟ್ಟು ಹೋಗಲು ನೆರವು ನೀಡಿದ್ದಾರೆಂದು ಆರೋಪಿಸಿ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ನಂದೀಶ್‌ನ ಸ್ನೇಹಿತ ಕಿರಣ್ ಜೊತೆ ವಾಗ್ವಾದ…
ಮುಂದೆ ಓದಿ..
