ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಬಲಿ: ನಡು ರಸ್ತೆಯಲ್ಲಿ ಕತ್ತಿಯಿಂದ ಕೊಲೆ
ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಬಲಿ: ನಡು ರಸ್ತೆಯಲ್ಲಿ ಕತ್ತಿಯಿಂದ ಕೊಲೆ ದೊಡ್ಡಬಳ್ಳಾಪುರ, ಯುವತಿಯೊಬ್ಬಳೊಂದಿಗೆ ಪ್ರೀತಿಯಲ್ಲಿ ತೊಡಗಿದ್ದ ವಿಚಾರವೇ ವೈಷಮ್ಯಕ್ಕೆ ತಿರುಗಿ, ಯುವಕನ ಜೀವ ಬಲಿಯಾದ ದಾರುಣ ಘಟನೆ ದೊಡ್ಡಬಳ್ಳಾಪುರದಲ್ಲಿ ಗುರುವಾರ ರಾತ್ರಿ ನಡೆದಿದೆ. ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲೇ ನಡೆದ ಹಲ್ಲೆಯಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆಯಾದ ಯುವಕನನ್ನು ಪವನ್ ಕುಮಾರ್ (30) ಎಂದು ಗುರುತಿಸಲಾಗಿದೆ. ಜಾಲಪ್ಪ ಕಾಲೇಜಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪವನ್ ಕಾಲೇಜಿನ ವಸತಿಗೃಹದಲ್ಲಿ ತಾಯಿಯೊಂದಿಗೆ ವಾಸವಿದ್ದರು. ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಬಂದ ಫೋನ್ ಕರೆ ನಂತರ ಪವನ್ ಹೊರಗೆ ನಡೆದುಕೊಂಡು ಹೋಗಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅವನ ವಾಹನವನ್ನು ಯಲಹಂಕ–ಹಿಂದೂಪುರ ರಸ್ತೆ ಚರ್ಚ್ ಬಳಿ ಕಾರಿನಲ್ಲಿ ಬಂದ ದಾಳಿ ಗುಂಪು ಅಡ್ಡಗಟ್ಟಿದೆ. ತಕ್ಷಣವೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ಜಖಂಗೆ ಒಳಗಾದ ಪವನ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.…
ಮುಂದೆ ಓದಿ..
