ಅಂಕಣ 

ಫೀಚರ್: ಡಿಜಿಟಲ್ ಯುಗದಲ್ಲಿ ಯುವಕರ ಜೀವನ – ಅವಕಾಶಗಳೂ, ಆತಂಕಗಳೂ

ಫೀಚರ್: ಡಿಜಿಟಲ್ ಯುಗದಲ್ಲಿ ಯುವಕರ ಜೀವನ – ಅವಕಾಶಗಳೂ, ಆತಂಕಗಳೂ ಇಂದಿನ ಪೀಳಿಗೆಯನ್ನು “ಡಿಜಿಟಲ್ ಪೀಳಿಗೆ” ಎಂದು ಕರೆಯುತ್ತಾರೆ. ಸ್ಮಾರ್ಟ್‌ಫೋನ್, ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ಬದುಕಿನ ಪ್ರತಿಯೊಂದು ಹಂತವೂ ಬದಲಾಗುತ್ತಿದೆ. ವಿಶೇಷವಾಗಿ ಯುವಕರ ಜೀವನದಲ್ಲಿ ತಂತ್ರಜ್ಞಾನವು ಅವಕಾಶಗಳನ್ನೂ, ಆತಂಕಗಳನ್ನೂ ಒಟ್ಟಿಗೆ ತಂದಿದೆ. ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ ಆನ್‌ಲೈನ್ ಪಠ್ಯಕ್ರಮ, ಯೂಟ್ಯೂಬ್ ಕ್ಲಾಸ್‌ಗಳು, ಇ-ಲೈಬ್ರರಿ – ಇವು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ನೀಡಿವೆ. ಬೆಂಗಳೂರು ಮೂಲದ ಶಿಕ್ಷಣ ತಜ್ಞೆ ಡಾ. ಶಿಲ್ಪಾ ಅವರು ಹೇಳುವಂತೆ, “ಗ್ರಾಮಾಂತರದ ವಿದ್ಯಾರ್ಥಿಗೂ ಇಂದಿಗೆ ವಿಶ್ವ ಮಟ್ಟದ ಪಾಠ ತಲುಪುತ್ತಿದೆ. ಆದರೆ ತಂತ್ರಜ್ಞಾನವನ್ನು ಸರಿಯಾಗಿ ಬಳಸಲು ಮಾರ್ಗದರ್ಶನ ಅಗತ್ಯವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಉದ್ಯೋಗದ ಹೊಸ ದಾರಿಗಳು ಡಿಜಿಟಲ್ ಯುಗವು ಉದ್ಯೋಗದಲ್ಲಿ ಹೊಸ ಹಾದಿಗಳನ್ನು ತೆರೆದಿದೆ. ಫ್ರೀಲಾನ್ಸ್ ಬರಹಗಾರರು, ಡಿಜಿಟಲ್ ಮಾರ್ಕೆಟಿಂಗ್ ತಜ್ಞರು, ಆಪ್ ಡೆವಲಪರ್‌ಗಳು – ಇವು ಇಂದಿನ…

ಮುಂದೆ ಓದಿ..
ಅಂಕಣ 

ಮಹಿಳಾ ಸಬಲೀಕರಣ – ಸಮಾಜದ ನಿಜವಾದ ಶಕ್ತಿ

ಮಹಿಳಾ ಸಬಲೀಕರಣ – ಸಮಾಜದ ನಿಜವಾದ ಶಕ್ತಿ ಮಹಿಳಾ ಸಬಲೀಕರಣವೆಂಬ ಪದದನ್ನು ಇಂದು ಎಲ್ಲೆಡೆ ಕೇಳಬಹುದು. ಆದರೆ ಇದು ಕೇವಲ ಘೋಷಣೆಯಲ್ಲ. ಸಮಾಜದ ಪ್ರಗತಿಯ ಮೂಲ ಸತ್ಯ ಕುಟುಂಬ, ಆರ್ಥಿಕತೆ, ರಾಜಕೀಯ, ವಿಜ್ಞಾನ – ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಕೊಡುಗೆ ಅತ್ಯಂತ ಪ್ರಮುಖ ಅದರೂ, ಇತಿಹಾಸದಲ್ಲಿ ಅವರ ಶ್ರಮವನ್ನು ಆನೇಕ ಬಾರಿ ಕಡೆಗಣಿಸಲಾಗಿದೆ. ಪತ್ರಕರ್ತನಾಗಿ, ಈ ವಿಚಾರವನ್ನು ಅನ್ವೇಷಿಸುವುದು ಕೇವಲ ಲೇಖನ ಬರೆಯುವುದಲ್ಲ -ಸಮಾಜದ ಮುಂದೆ ನಿಜವನ್ನು ತೆರೆದಿಡುವುದಾಗಿದೆ ಶಿಕ್ಷಣವೇ ಮೊದಲ ಹೆಜ್ಜೆ ಶಿಕ್ಷಣ ಪಡೆದ ಹುಡುಗಿ ತನ್ನ ಜೀವನವನ್ನೇ ಬದಲಾಯಿಸಬಲ್ಲಳು. ಗ್ರಾಮೀಣ ಭಾರತದಲ್ಲಿ ಇನ್ನೂ ಅನೇಕ ಹೆಣ್ಣುಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ತಳ್ಳಲ್ಪಡುತ್ತಿದ್ದಾರೆ. ಬೆಟ್ಟಿ ಬಚಾವೋ, ಬೆಟ್ಟಿ ಪದಾವೋ ತರಹದ ಸರ್ಕಾರದ ಯೋಜನೆಗಳು ಶಿಕ್ಷಣದ ಹಕ್ಕನ್ನು ಬಲಪಡಿಸುತ್ತಿದ್ದರೂ, ಸಾಮಾಜಿಕ ಅಡೆತಡೆಗಳು ಇನ್ನೂ ಅಸ್ತಿತ್ವದಲ್ಲಿವೆ. ಆರ್ಥಿಕ ಸ್ವಾವಲಂಬನೆ ಮಹಿಳೆಯರು ಸ್ವಂತ ಆದಾಯ ಗಳಿಸಿದಾಗ, ಕುಟುಂಬದಲ್ಲಿಯೂ ಸಮಾಜದಲ್ಲಿಯೂ ನಿರ್ಧಾರ…

ಮುಂದೆ ಓದಿ..
ಸುದ್ದಿ 

ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನೊಮ್ಮೆ ಗಮನಿಸಿ……..

ಕರ್ನಾಟಕ ರತ್ನ…….. ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನೊಮ್ಮೆ ಗಮನಿಸಿ…….. ರಾಷ್ಟ್ರಕವಿ ಕುವೆಂಪು, ( ಸಾಹಿತ್ಯ)ಡಾಕ್ಟರ್ ರಾಜ್ ಕುಮಾರ್, ( ಸಿನಿಮಾ )ಶ್ರೀ ಎಸ್. ನಿಜಲಿಂಗಪ್ಪ,( ರಾಜಕೀಯ)ಡಾಕ್ಟರ್ ಸಿಎನ್ಆರ್ ರಾವ್,( ವಿಜ್ಞಾನ )ಡಾಕ್ಟರ್ ದೇವಿ ಶೆಟ್ಟಿ,( ವೈದ್ಯಕೀಯ)ಶ್ರೀ ಭೀಮ್ ಸೇನ್ ಜೋಶಿ,( ಸಂಗೀತ )ಸಿದ್ದಗಂಗೆಯ ಶ್ರೀಗಳಾದ ಶಿವಕುಮಾರ ಸ್ವಾಮಿ,( ಧಾರ್ಮಿಕ – ಸಮಾಜ ಸೇವೆ )ಶ್ರೀ ದೇ. ಜವರೇಗೌಡ,( ಸಾಹಿತ್ಯ }ಶ್ರೀ ವೀರೇಂದ್ರ ಹೆಗ್ಗಡೆ,( ಧಾರ್ಮಿಕ – ಸಮಾಜ ಸೇವೆ )ಶ್ರೀ ಪುನೀತ್ ರಾಜಕುಮಾರ್,( ಸಿನಿಮಾ )ಶ್ರೀ ವಿಷ್ಣುವರ್ಧನ್,( ಸಿನಿಮಾ )ಶ್ರೀಮತಿ ಬಿ. ಸರೋಜಾ ದೇವಿ,( ಸಿನಿಮಾ )………… ಇದರಲ್ಲಿ ಸಿನಿಮಾ ಕ್ಷೇತ್ರಕ್ಕೆ ಸೇರಿದ ನಾಲ್ಕು ಜನ, ಧಾರ್ಮಿಕ, ಸಮಾಜ ಸೇವಾ ಕ್ಷೇತ್ರಕ್ಕೆ ಸೇರಿದ ಇಬ್ಬರು, ಸಾಹಿತ್ಯ ಕ್ಷೇತ್ರದ ಇಬ್ಬರು, ರಾಜಕೀಯ, ಸಂಗೀತ, ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ತಲಾ ಒಬ್ಬರು ಸೇರಿ ಒಟ್ಟು 12 ಜನರಿಗೆ…

ಮುಂದೆ ಓದಿ..
ಸುದ್ದಿ 

ಶಿಗ್ಗಾಂವ ತಾಲೂಕು ಹುನಗುಂದ ವ್ಯಕ್ತಿ ಕಾಣೆ

ಶಿಗ್ಗಾಂವ ತಾಲೂಕು ಹುನಗುಂದ ವ್ಯಕ್ತಿ ಕಾಣೆ:ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಹುನಗುಂದ ಗ್ರಾಮದಲ್ಲಿ ವಯಸ್ಕ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ದಾಖಲಾಗಿದೆಇದರಲ್ಲಿ ಕಂಪ್ಲೇಂಟ್ ನೀಡಿದವರ ತಮ್ಮ ಮಲ್ಲಿಕಜಾನ ಕರೀಮಸಾಬ ಮುಲಾನವರ ವಯಾ: 25 ವರ್ಷ ಜಾತಿ: ಮುಸ್ಲಿಂ ಉದ್ಯೋಗ: ಟೈಲ್ಸ್ ಕೆಲಸ ಸಾ: ಹುನಗುಂದ ತಾ: ಶಿಗ್ಗಾಂವ ಜಿ: ಹಾವೇರಿ ಇವನು ದಿನಾಂಕ: 20-08-2025 ರಂದು ಸಾಯಂಕಾಲ 04-15 ಗಂಟೆಯ ಸುಮಾರಿಗೆ ಹುನಗುಂದ ಗ್ರಾಮದ ತಮ್ಮ ಮನೆಯಿಂದ ಜಗಳ ಮಾಡಿ ಹೊರಗೆ ಹೋದವನು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವನಿಗೆ ಪತ್ತೆ ಮಾಡಿಕೊಡಲು ವಿನಂತಿ ಎಂದು ಇವರ ಸ್ವಂತ ಅಣ್ಣನಾದ ದಾದಾಪಿರ್ ಕರಿಂಸಾಬ್ ಮಲ್ಲನವರ್ ಇವರು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಪೊಲೀಸರು ಹುಡುಕಿ ಕೊಡುವುದಾಗಿ ಭರವಸೆ ನೀಡಿ ತನಿಖೆ ನಡೆಸುತ್ತಿದ್ದಾರೆ.: ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

ಮುಂದೆ ಓದಿ..
ಅಂಕಣ 

ನೇಪಾಳದ ಪರಿಸ್ಥಿತಿ – ಸರ್ಕಾರ, ಯುವಜನತೆ ಮತ್ತು ಭವಿಷ್ಯದ ದಾರಿ

ನೇಪಾಳದ ಪರಿಸ್ಥಿತಿ – ಸರ್ಕಾರ, ಯುವಜನತೆ ಮತ್ತು ಭವಿಷ್ಯದ ದಾರಿ ಪರಿಚಯ ನೇಪಾಳವು ಹಿಮಾಲಯದ ಮಧ್ಯದಲ್ಲಿರುವ ಒಂದು ಸಣ್ಣ ದೇಶವಾದರೂ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳ ಹಾದಿಯಲ್ಲಿ ನಿರಂತರವಾಗಿ ಸಾಗುತ್ತಿದೆ. 2008ರಲ್ಲಿ ರಾಜತಂತ್ರ ಅಂತ್ಯಗೊಂಡು ಗಣರಾಜ್ಯ ಸ್ಥಾಪನೆಯಾದ ನಂತರ, ದೇಶವು ಸ್ಥಿರತೆಯತ್ತ ಸಾಗಬೇಕಿತ್ತು. ಆದರೆ ಇಂದಿಗೂ ರಾಜಕೀಯ ಅಸ್ಥಿರತೆ, ಆರ್ಥಿಕ ಕುಸಿತ, ಉದ್ಯೋಗಾವಕಾಶಗಳ ಕೊರತೆ ಮತ್ತು ಯುವಜನರ ವಲಸೆ ಎಂಬ ಸಮಸ್ಯೆಗಳು ನೇಪಾಳವನ್ನು ಕಾಡುತ್ತಿವೆ. ರಾಜಕೀಯ ಪರಿಸ್ಥಿತಿ ನೇಪಾಳದಲ್ಲಿ ಕಳೆದ 15 ವರ್ಷಗಳಲ್ಲಿ ಅನೇಕ ಸರ್ಕಾರಗಳು ಬಂದು ಹೋಗಿವೆ. ಪಾರ್ಟಿಗಳ ಒಳಹೊಸಾಟ, ಮೈತ್ರಿ ರಾಜಕೀಯದ ಒತ್ತಡ ಹಾಗೂ ಭ್ರಷ್ಟಾಚಾರದ ಆರೋಪಗಳು ಸರ್ಕಾರವನ್ನು ದುರ್ಬಲಗೊಳಿಸುತ್ತಿವೆ. 2015ರಲ್ಲಿ ಜಾರಿಗೆ ಬಂದ ಸಂವಿಧಾನವು ಜನರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಸಿತು. ಆದರೆ ಕೇಂದ್ರ ಮತ್ತು ಪ್ರಾದೇಶಿಕ ಸರ್ಕಾರಗಳ ನಡುವೆ ಅಧಿಕಾರ ಹಂಚಿಕೆ, ಆಡಳಿತದ ಜವಾಬ್ದಾರಿಗಳು ಇನ್ನೂ ಗೊಂದಲದಲ್ಲಿವೆ. ಚೀನಾ ಮತ್ತು ಭಾರತ…

ಮುಂದೆ ಓದಿ..
ಸುದ್ದಿ 

ನೇಪಾಳದ ದಂಗೆ……

ನೇಪಾಳದ ದಂಗೆ…… ಕೋವಿಡ್ ನಂತರದ ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಬದಲಾವಣೆಯ ಹಾದಿಯಲ್ಲಿರುವಂತೆ ಕಾಣುತ್ತಿದೆ. ಕೆಲವು ಆಕ್ರಮಣಕಾರಿ ಯುದ್ಧಗಳು, ಮುಂದುವರಿದ ಭಯೋತ್ಪಾದನಾ ಚಟುವಟಿಕೆಗಳು, ಹೆಚ್ಚುತ್ತಿರುವ ಪ್ರಾಕೃತಿಕ ವೈಪರೀತ್ಯಗಳು ಮತ್ತು ಮುಖ್ಯವಾಗಿ ಸಣ್ಣ ದೇಶಗಳಲ್ಲಿ ಜನ ಅಸಮಾಧಾನಗೊಂಡು ದಂಗೆಯ ಸ್ವರೂಪದ ಗಲಭೆಗಳಾಗುತ್ತಿರುವುದನ್ನು ಗಮನಿಸಬಹುದು. ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ.ಪುರಾತನ ಕಾಲದಲ್ಲಿ ಮನುಷ್ಯ ಅನಾಗರಿಕನಾಗಿದ್ದು ನಾಗರೀಕ ಪ್ರಪಂಚಕ್ಕೆ ಮರಳಿದ ಮೇಲೆ ಬಹುತೇಕ ಎಲ್ಲ ನಾಗರಿಕತೆಗಳು ಒಂದಷ್ಟು ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಂಡಿದ್ದವು. ಹಲವು ಯುದ್ಧಗಳು, ಅಕ್ರಮಣಗಳು ನಡೆಯುತ್ತಿದ್ದವು. ಆದರೆ ಇತಿಹಾಸದ ದಾಖಲೆಗಳ ಪ್ರಕಾರ ಅವುಗಳ ಪ್ರಮಾಣ ಕಡಿಮೆ ಇತ್ತು. ತಾನು ತನ್ನ ಸುರಕ್ಷತೆಗಾಗಿ ಮಾತ್ರ ರಕ್ಷಣಾತ್ಮಕವಾಗಿ ಹೋರಾಡುತ್ತಿದ್ದ….. ಆದರೆ ಮಧ್ಯಕಾಲೀನ ಯುಗದಲ್ಲಿ ವಿಶ್ವದ ಬಹುತೇಕ ನಾಗರಿಕತೆಗಳಲ್ಲಿ ಹಿಂಸೆ ತಾಂಡವವಾಡುತ್ತಿತ್ತು. ಮನುಷ್ಯನ ವಿಸ್ತರಣಾ ಸ್ವಭಾವ ಮತ್ತು ತನ್ನ ಅಹಂ ಎಲ್ಲೆ ಮೀರಿತ್ತು. ಎಲ್ಲೆಲ್ಲಿಯೂ ರಕ್ತದ ಕೋಡಿಗಳು ಹರಿದವು. ಹತ್ತೊಂಬತ್ತನೆಯ ಶತಮಾನದ…

ಮುಂದೆ ಓದಿ..
ಸುದ್ದಿ 

ಹಾನಗಲ್ ನ ಜಾನಗುಂಡಿಕೊಪ್ಪದಲ್ಲಿ ಯುವಕ ಕಾಣೆ

ಹಾನಗಲ್ ನ ಜಾನಗುಂಡಿಕೊಪ್ಪದಲ್ಲಿ ಯುವಕ ಕಾಣೆ:ಹಾವೇರಿ ಜಿಲ್ಲೆ ಹಾನಗಲ್ ತಾಲುಕು ಜಾನಗುಂಡಿಕೊಪ್ಪ ಗ್ರಾಮದಲ್ಲಿ 17 ವರ್ಷದ ಯುವಕ ದಿಢೀರ್ ಕಾಣೆಯಾಗಿರುವ ಘಟನೆ ನಡೆದಿದೆದಿನಾಂಕ:-01/09/2025 ರಂದು ಮುಂಜಾನೆ 09-00 ಗಂಟೆ ಸುಮಾರಿಗೆ ಹಾನಗಲ್ಲ ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದ ಗುಡ್ಡಪ್ಪ ಮಾಲತೇಶ ಅಕ್ಕಿ ವಯಾ:-17 ವರ್ಷ ಜಾತಿ:-ಹಿಂದೂ ಲಿಂಗಾವಾತ ಈತ ವಿದ್ಯಾರ್ಥಿಯಾಗಿದ್ದುಸಾ||ಜಾನಗುಂಡಿಕೊಪ್ಪ ತಾ||ಹಾನಗಲ್ಲ ಜಿ||ಹಾವೇರಿ ಈತನು ತನ್ನ ಮನೆಯಲ್ಲಿ ಕಾಲೇಜಿಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದವನು ಮನೆಗೆ ವಾಪಸ ಬಂದಿರುವುದಿಲ್ಲಾ, ಸದರಿಯವನು ಎಲ್ಲಿಯಾದರೂ ಕಾಣೆಯಾಗಿರಬಹುದು ಅಥವಾ ಸದರಿಯವನನ್ನು ಯಾರಾದರೂ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರಬಹದು ಅಂತಾ ಅವರ ಆಪ್ತರಾದ ರವಿ ನಿಂಗಪ್ಪ ಅಕ್ಕಿ ಎನ್ನುವವರು ಹಾನಗಲ್ ನಗರದ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ.: ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಹೆಚ್ಚಿದ ಅಂದರ್ ಬಾಹರ್ ಜೂಜಾಟ

ಸವಣೂರಿನಲ್ಲಿ ಹೆಚ್ಚಿದ ಅಂದರ್ ಬಾಹರ್ ಜೂಜಾಟ: ಹಾವೇರಿ ಜಿಲ್ಲೆ ಸವಣೂರು ತಾಲುಕು ಸಿದ್ದಾಪುರ ಗ್ರಾಮದಲ್ಲಿ ಸಾರ್ವಜನಿಕ ಜೂಜಾಟ ಕಂಡುಬಂದಿದೆ ಸಾರ್ವಜನಿಕರಿಗೆ ಕುಟುಂಬಸ್ಥರಿಗೆ ಬಿತಿ ಹೆಚ್ಚಾಗಿದೆ ದಿನಾಂಕ: 09-09-2025 ರಂದು ಬೆಳಗಿನ ಜಾವ 07-15 ಗಂಟೆಯ ಸುಮಾರಿಗೆ ಸವಣೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸರು ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಒಬ್ಬರು ಮಾಹಿತಿ ನೀಡಿದ್ದು ಅದರಲ್ಲಿ ಸವಣೂರ ತಾಲ್ಲೂಕ ಸಿದ್ದಾಪೂರ ಗ್ರಾಮದ ಬಸ್ಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 3-4 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೀಟು ಎಲೆ ಹಚ್ಚಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಮತ್ತು ನೀವು ಬಂದು ರೇಡ ಮಾಡಿದರೆ ಸಿಗುತ್ತಾರೆ ಅಂತಾ ಮಾಹಿತಿ ಬಂದಿದ್ದು ಕಾರಣ ಪೊಲೀಸರು ಸ್ಥಳದಲ್ಲಿ ಇಸ್ಪೀಟು ಎಲೆ ಆಡುತ್ತಿದ್ದವರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ ಸದರಿ ವ್ಯಕ್ತಿಗಳ ಮೇಲೆ ಸರಕಾರಿ ತರಪಿಯಾಗಿ ಸವಣೂರು ಪೊಲೀಸರೇದೂರನ್ನು ಸ್ವೀಕರಿಸಿಕೊಂಡು ಸವಣೂರ…

ಮುಂದೆ ಓದಿ..
ಸುದ್ದಿ 

ಶಿಗ್ಗಾಂವ ತಾಲೂಕು ತಡಸ್ ರಸ್ತೆ ಬಳಿ ಕಾರ್ ಬ್ಯಾರಿಕೇಡ್ ಗೆ ಡಿಕ್ಕಿ ಬಿಕರ ಗಾಯ:

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಬ್ಬಳ್ಳಿ ಸಮೀಪದ ತಡಸ್ ರಸ್ತೆ ಬಳಿ ಬಿಕರ ಕಾರು ಅಪಘಾತ ಘಟನೆ ನಡೆದಿದೆ ದಿನಾಂಕ:06/09/2025 ರಂದು ಮುಂಜಾನೆ 04-30 ಗಂಟೆಯಿಂದ 04-45 ಗಂಟೆಯ ನಡುವಿನ ಅವಧಿಯಲ್ಲಿ ಮುತ್ತಳ್ಳಿ ಗ್ರಾಮದ ಲೇ ಬೈ ಹತ್ತಿರ ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋದ ಎನ್ ಹೆಚ್-48 ರಸ್ತೆಯಲ್ಲಿ ಕೆಎ-22/ಪಿ-7687 ನೇದ್ದರ ಚಾಲಕನಾದ ವೇದಾಂತ ಅಮೃತರಾವ ಜನ್ಮಣ್ಣವರ ಈತನು ತಾನು ಚಲಾಯಿಸುತ್ತಿದ್ದ ಕಾರನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಾರಿನ ವೇಗವನ್ನು ನಿಯಂತ್ರಿಸದೇ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಬ್ಯಾರಿಕೇಡ್ ಗೆ ಡಿಕ್ಕಿ ಪಡಿಸಿ ಇದರಲ್ಲಿಯ ಗಾಯಾಳುವಿಗೆ ತೀವ್ರ ಸ್ವರೂಪದ ಗಾಯನೋವು ಪಡಿಸಿ ಕಾರನ್ನು ಜಖಂಗೊಳಿಸಿದ್ದಲ್ಲದೇ ತಾನು ಸಹ ತೀವ್ರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದಾನೆ ಇವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ಮಾಹಿತಿ ತಿಳಿದ ತಡಸ್ ಪೊಲೀಸರು ತಕ್ಷಣ ಆಕ್ಸಿಡೆಂಟ್ ಆದ ಸ್ಥಳಕ್ಕೆ ಬಂದು…

ಮುಂದೆ ಓದಿ..
ಅಂಕಣ 

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ…… ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ, ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಪಾಡಿಗೆ ನಾವಿದ್ದರೆ ಖಂಡಿತವಾಗಲೂ ಮುಂದಿನ ದಿನಗಳು ನಮ್ಮ ಬುಡಕ್ಕೆ ಈ ಸಮಸ್ಯೆ ಬರಬಹುದು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಗಲಭೆಗಳು ಸಾಮಾನ್ಯವಾಗುತ್ತಿದೆ. ಅದರ ಅರ್ಥ ಮನಸ್ಸುಗಳು ಧರ್ಮದ ಆಧಾರದ ಮೇಲೆ ಒಡೆದು ಹೋಗುತ್ತಿದೆ. ಇದಕ್ಕೆ ಆ ಕ್ಷಣದ ಆ ಘಟನೆಯಾ ಮೇಲೆ ಚರ್ಚೆ ಮಾಡಿಕೊಂಡು ಒಂದು ನಿರ್ಧಾರಕ್ಕೆ ಬರುವುದು ತೀರ ಬಾಲಿಶವಾದದ್ದು. ವ್ಯವಸ್ಥೆ ಮತ್ತು ಅದು ಸಾಗುತ್ತಿರುವ ದಿಕ್ಕನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ನಮ್ಮನ್ನು ಕಾಪಾಡಬೇಕಾಗಿದ್ದ ದೇವರು, ನಮ್ಮನ್ನು ರಕ್ಷಿಸಿ ಕ್ರಮಬದ್ಧ ಜೀವನಶೈಲಿ ರೂಪಿಸಬೇಕಾಗಿದ್ದ ಧರ್ಮಗಳು ಇಂದು ನಮ್ಮನ್ನು ವಿಭಜಿಸಿರುವುದು ಮಾತ್ರವಲ್ಲದೆ ದೇವರು ಧರ್ಮವನ್ನು ಉಳಿಸಬೇಕಾದ ಪರಿಸ್ಥಿತಿ…

ಮುಂದೆ ಓದಿ..