ಕಲಬುರಗಿ ಪತ್ರಕರ್ತ ಪ್ರಭುಲಿಂಗ ನೀಲೂರೆ ಸಾವು: ಡೆತ್ ನೋಟ್ ಬಿಚ್ಚಿಟ್ಟ ಆಘಾತಕಾರಿ ಸತ್ಯಗಳು
ಕಲಬುರಗಿ ಪತ್ರಕರ್ತ ಪ್ರಭುಲಿಂಗ ನೀಲೂರೆ ಸಾವು: ಡೆತ್ ನೋಟ್ ಬಿಚ್ಚಿಟ್ಟ ಆಘಾತಕಾರಿ ಸತ್ಯಗಳು ಕಲಬುರಗಿಯ ಹಿರಿಯ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರ ಅಕಾಲಿಕ ನಿಧನವು ಕೇವಲ ಒಂದು ಆತ್ಮಹತ್ಯೆ ಪ್ರಕರಣವಾಗಿ ಉಳಿಯದೆ, ಇಡೀ ಪತ್ರಿಕೋದ್ಯಮದ ವ್ಯವಸ್ಥೆಯ ಕ್ರೂರ ಮುಖವನ್ನು ಅನಾವರಣಗೊಳಿಸಿದೆ. ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾದಾಗ ಅದು ಕೇವಲ ಆರ್ಥಿಕ ಸಂಕಷ್ಟದ ಅಂತ್ಯವೆಂದು ತೋರಿತ್ತು. ಆದರೆ, ನಂತರ ಸಿಕ್ಕ ಎರಡು ಪುಟಗಳ ಡೆತ್ ನೋಟ್ ಈ ಪ್ರಕರಣಕ್ಕೆ ‘ಕೊಲೆಗಿಂತಲೂ ಭೀಕರ’ ಎನ್ನಿಸುವಂತಹ ಆಘಾತಕಾರಿ ತಿರುವು ನೀಡಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕಾದ ಲೇಖನಿ, ವ್ಯವಸ್ಥಿತ ಸಂಚಿನ ಸುಳಿಗೆ ಸಿಲುಕಿ ಮೌನವಾದ ಈ ಘಟನೆ ಈಗ ತನಿಖೆಯ ಗಂಭೀರ ಹಾದಿಯಲ್ಲಿದೆ. ಬಲಿಪಶು ಮಾಡಿದರೇ ವೃತ್ತಿಬಾಂಧವರು? 11 ಜನರ ಕರಾಳ ಪಟ್ಟಿ.. ಪ್ರಭುಲಿಂಗ ನೀಲೂರೆ ಅವರು ಬರೆದಿದ್ದಾರೆನ್ನಲಾದ ಡೆತ್ ನೋಟ್…
ಮುಂದೆ ಓದಿ..
