ಉಡುಪಿಗೆ ಭೇಟಿ ನೀಡಿದ ಪವನ್ ಕಲ್ಯಾಣ್‌ಗೆ ‘ಅಭಿನವ ಕೃಷ್ಣದೇವರಾಯ’ ಬಿರುದು..
ಉಡುಪಿಗೆ ಭೇಟಿ ನೀಡಿದ ಪವನ್ ಕಲ್ಯಾಣ್‌ಗೆ ‘ಅಭಿನವ ಕೃಷ್ಣದೇವರಾಯ’ ಬಿರುದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಉಡುಪಿಗೆ ಭಾನುವಾರ ವಿಶೇಷ ಭೇಟಿಯನ್ನು ನೀಡಿದರು. ಗೀತೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಅವರು, ಮೊದಲೇ ಪರ್ಯಾಯ ಪುತ್ತಿಗೆ ಮಠದ ಶ್ರೀಗಳಿಂದ ಅದ್ಧೂರಿ ಸ್ವಾಗತ ಪಡೆದರು. ಬಳಿಕ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿ ಭಕ್ತಿ ಭಾವ ವ್ಯಕ್ತಪಡಿಸಿದರು. ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದ ಪವನ್ ಕಲ್ಯಾಣ್, ಅಲ್ಲಿಿಂದ ರಸ್ತೆ ಮಾರ್ಗವಾಗಿ ಉಡುಪಿ ಸೇರಿದರು. ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚೆಯೇ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನದ ಊಟ ಸೇವಿಸಿ ನಂತರ ಕೃಷ್ಣ ಮಠದತ್ತ ಹೊರಟರು. ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಧ್ವ ಸರೋವರದ ತೀರ್ಥ ಪ್ರೋಕ್ಷಣೆಗೆ ಹಾಜರಾಗಿದ್ದ ಅವರು, ನಂತರ ಅನಂತೇಶ್ವರ ದೇವಾಲಯಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪರ್ಯಾಯ ಶ್ರೀ ಸುಗುಣೇಂದ್ರ…
ಮುಂದೆ ಓದಿ..
