ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪುನರ್ಜೀವ: ವಾಷಿಂಗ್ ಯುನಿಟ್‌ಗಳ ಬಂದ್ ಆದೇಶ ಹಿಂಪಡೆಯಲು ಸಿಎಂ ಸೂಚನೆ
ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪುನರ್ಜೀವ: ವಾಷಿಂಗ್ ಯುನಿಟ್‌ಗಳ ಬಂದ್ ಆದೇಶ ಹಿಂಪಡೆಯಲು ಸಿಎಂ ಸೂಚನೆ ಬಳ್ಳಾರಿ ಜೀನ್ಸ್ ಉದ್ಯಮ ಎದುರಿಸುತ್ತಿದ್ದ ಮಹತ್ತರ ಸಂಕಷ್ಟಕ್ಕೆ ರಾಜ್ಯ ಸರ್ಕಾರದಿಂದ ದೊಡ್ಡ ಪರಿಹಾರ ದೊರಕಿದೆ. ಪರಿಸರ ಮಾಲಿನ್ಯಕ್ಕೆ ಕಾರಣವೆಂದು 36 ವಾಷಿಂಗ್ ಯುನಿಟ್‌ಗಳಿಗೆ ನೀಡಿದ್ದ ಬಂದ್ ನೋಟಿಸ್ ಉದ್ಯಮಿಗಳನ್ನು ಆತಂಕಕ್ಕೀಡಾಗಿಸುತ್ತಿದ್ದ ಸಂದರ್ಭದಲ್ಲಿ, ರಾಜ್ಯ ಸರ್ಕಾರದಿಂದ ಕಾಮನ್ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್ (CETP) ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಇದರಿಂದ ವಾಷಿಂಗ್ ಯುನಿಟ್‌ಗಳ ಬಂದ್ ಭೀತಿ ನಿವಾರಣೆಯಾಗಿದ್ದು, ಉದ್ಯಮದ ಭವಿಷ್ಯಕ್ಕೆ ಹೊಸ ದಾರಿಯು ತೆರೆದಿದೆ. 22 ಕೋಟಿ ರೂ. ವೆಚ್ಚದಲ್ಲಿ CETP ನಿರ್ಮಾಣಕ್ಕೆ ಅನುಮೋದನೆ. ನಾಲ್ಕು ಎಕರೆ ಜಾಗದಲ್ಲಿ ಪ್ಲಾಂಟ್ ಸ್ಥಾಪನೆ. 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ಭದ್ರತೆ. ಜೀನ್ಸ್ ಉದ್ಯಮಿಗಳ ಹಲವು ವರ್ಷಗಳ ಬೇಡಿಕೆ ಈಡೇರಿಕೆ. ಬಳ್ಳಾರಿಯಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಸಿದ್ಧ ಉಡುಪು ತಯಾರಿಕಾ ಘಟಕಗಳಿದ್ದು, 10 ಸಾವಿರಕ್ಕೂ…
ಮುಂದೆ ಓದಿ..
