ಸುರದೇನುಪುರ ಗೇಟ್ ಬಳಿ ಬೈಕ್ ದಾಳಿ: ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ದೋಚಿದ ದುಷ್ಕರ್ಮಿ ಪರಾರಿಯಾಗಿದ್ದಾನೆ
ಬೆಂಗಳೂರು, ಜುಲೈ 10 2025 ದೊಡ್ಡಬಳ್ಳಾಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸುರದೇನುಪುರ ಗೇಟ್ ಸಮೀಪ ಇಂದು ಮಧ್ಯಾಹ್ನ ಸಂಭವಿಸಿದ ಚೈನ್ ಸ್ನಾಚಿಂಗ್ ಪ್ರಕರಣದಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಬೈಕ್‌ನಲ್ಲಿ ಪತಿ ಹಾಗೂ ಮಗಳೊಂದಿಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಯೊಬ್ಬ ಬೈಕ್‌ನಿಂದ ಬಂದು ಬಲವಂತವಾಗಿ ಕಿತ್ತು ಪರಾರಿಯಾದ ಘಟನೆ ವರದಿಯಾಗಿದೆ. ಶ್ರೀಮತಿ ಹಸ ಅವರು ತಮ್ಮ ಗಂಡ ಕಿರಣ್ ಕುಮಾರ್ ಮತ್ತು ಮಗಳು ರೇಖಾ ಅವರೊಂದಿಗೆ ಹುಣಸಮಾರನಹಳ್ಳಿಯ ಶ್ರೀ ಕೃಷ್ಣದೇವರಾಯ ಡೆಂಟಲ್ ಆಸ್ಪತ್ರೆ ಕಡೆಗೆ ಹೊರಟಿದ್ದರು. ಇವರು KA-43-V-2508 ನಂಬರಿನ ಬೈಕ್‌ನಲ್ಲಿ ಸಾಗುತ್ತಿದ್ದಾಗ, ಮಧ್ಯಾಹ್ನ ಸುಮಾರು 1:45 ಗಂಟೆ ಸಮಯಕ್ಕೆ, ಹಿಂಬದಿಯಿಂದ ಅತಿವೇಗವಾಗಿ ಬಂದ ಬೈಕ್ ಸವಾರನು ಅವರ ಕತ್ತಿಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೆಂಗಳೂರು ಕಡೆಗೆ ಓಡಿದನು. ಕದ್ದ ಚಿನ್ನದ ಸರದಲ್ಲಿ – ಮಾಂಗಲ್ಯ, ಎರಡು…
ಮುಂದೆ ಓದಿ..
