ಸೂರ್ಯೋದಯದ ಹೆಸರಲ್ಲಿ ಅಂಧಕಾರ: ಮೈಕ್ರೋ ಫೈನಾನ್ಸ್ ಕಬಂಧಬಾಹುವಿಗೆ ಮತ್ತೊಂದು ಬಲಿ..
ಸೂರ್ಯೋದಯದ ಹೆಸರಲ್ಲಿ ಅಂಧಕಾರ: ಮೈಕ್ರೋ ಫೈನಾನ್ಸ್ ಕಬಂಧಬಾಹುವಿಗೆ ಮತ್ತೊಂದು ಬಲಿ.. ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಬೇಕಿದ್ದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಇಂದು ಹಳ್ಳಿಗಳ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸಿರುವುದು ನಮ್ಮ ವ್ಯವಸ್ಥೆಯ ಅತಿ ದೊಡ್ಡ ವಿಪರ್ಯಾಸ. ಬಡವರ ಕಣ್ಣೀರು ಒರೆಸುವ ಸೋಗಿನಲ್ಲಿ ಬರುವ ಈ ಸಂಸ್ಥೆಗಳು, ಅಂತಿಮವಾಗಿ ಶೋಷಣೆಯ ಮರೀಚಿಕೆಯಾಗಿ ಸಮಾನ್ಯ ಜನರನ್ನು ಸಾಲದ ಸುಳಿಗೆ ದೂಡುತ್ತಿವೆ. ಮಳವಳ್ಳಿಯ ಹದಿಹರೆಯದ ರೈತನೊಬ್ಬ ಹಣಕಾಸು ಸಂಸ್ಥೆಯ ಕಿರುಕುಳಕ್ಕೆ ಬಲಿಯಾದ ಘಟನೆ, ನಾವು ಪ್ರಗತಿಯತ್ತ ಸಾಗುತ್ತಿದ್ದೇವೆಯೇ ಅಥವಾ ಅಮಾನವೀಯತೆಯತ್ತ ಮುಖ ಮಾಡಿದ್ದೇವೆಯೇ ಎಂಬ ಕಟು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದೆ. ಮಳವಳ್ಳಿ ತಾಲೂಕಿನ ತಗಡಯ್ಯನದೊಡ್ಡಿ ಗ್ರಾಮದ ನಾಗರಾಜು ಎಂಬ 35 ವರ್ಷದ ಯುವಕನಿಗೆ ತನ್ನ ಅಲ್ಪ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಬೇಕೆಂಬ ದೊಡ್ಡ ಕನಸಿತ್ತು. ಆದರೆ, ಕೃಷಿ ಎಂಬುದು ಇಂದು ಜೂಜಾಟವಾಗಿರುವ ಈ ಕಾಲದಲ್ಲಿ, ಬಂಡವಾಳಕ್ಕಾಗಿ ಅವರು ಮೊರೆ ಹೋಗಿದ್ದು ಮಳವಳ್ಳಿ…
ಮುಂದೆ ಓದಿ..
