ಬಾರ್ಡರ್ ಹಳ್ಳಿಗಳ ‘ರಸ್ತೆ ನರಕ’: ರಾಜಕಾರಣಿಗಳ ನಿರ್ಲಕ್ಷ್ಯದ ನಡುವೆ 3,000 ಜನರ ಹೋರಾಟದ ಕಥೆ..
ಬಾರ್ಡರ್ ಹಳ್ಳಿಗಳ ‘ರಸ್ತೆ ನರಕ’: ರಾಜಕಾರಣಿಗಳ ನಿರ್ಲಕ್ಷ್ಯದ ನಡುವೆ 3,000 ಜನರ ಹೋರಾಟದ ಕಥೆ.. ಅಭಿವೃದ್ಧಿಯ ದ್ವೀಪಗಳ ನಡುವೆ ಹೂತುಹೋದ ಗಡಿ ಗ್ರಾಮಗಳ ಬದುಕು… ನಾವು 21ನೇ ಶತಮಾನದ ‘ಡಿಜಿಟಲ್ ಇಂಡಿಯಾ’ ಮತ್ತು ಅಭಿವೃದ್ಧಿಯ ಪಥದಲ್ಲಿ ದೌಡಾಯಿಸುತ್ತಿರುವ ‘ನವ ಕರ್ನಾಟಕ’ದ ಬಗ್ಗೆ ಉದ್ದುದ್ದ ಭಾಷಣಗಳನ್ನು ಕೇಳುತ್ತೇವೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ ಕೂಗಳತೆ ದೂರದಲ್ಲೇ ಇರುವ ಹಳ್ಳಿಗಳ ಪರಿಸ್ಥಿತಿಯನ್ನು ನೋಡಿದರೆ, ಈ ಅಭಿವೃದ್ಧಿ ಎಂಬುದು ಕೇವಲ ನಗರದ ಗ್ಲಾಮರ್ ಲೇಪಿತ ರಸ್ತೆಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಸಂಶಯ ಕಾಡುತ್ತದೆ. ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳ ಗಡಿಭಾಗದ ಹಳ್ಳಿಗಳು ಇಂದು ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿ, ಕಗ್ಗತ್ತಲಲ್ಲಿರುವ ‘ದ್ವೀಪ’ಗಳಂತೆ ಮಾರ್ಪಟ್ಟಿವೆ. ಇದು ಕೇವಲ ರಸ್ತೆಯ ಸಮಸ್ಯೆಯಲ್ಲ; ಇದು ಆಳುವ ವರ್ಗದ ಸಂವೇದನಾಶೂನ್ಯತೆ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳ ಪತನದ ಕಥೆ. ‘ಗಡಿಭಾಗ’ ಎನ್ನುವುದೇ ಒಂದು ಶಾಪವಾಯಿತೇ? ನೆಲಮಂಗಲ, ದೊಡ್ಡಬಳ್ಳಾಪುರ…
ಮುಂದೆ ಓದಿ..
