ಸುದ್ದಿ 

ಜೈಲಿನಲ್ಲಿ ಗಾಂಜಾ ಸಾಗಾಟ: ಶಿವಮೊಗ್ಗ ಘಟನೆಯ ಪ್ರಮುಖ ಅಂಶಗಳು…

Taluknewsmedia.com

Taluknewsmedia.comಜೈಲಿನಲ್ಲಿ ಗಾಂಜಾ ಸಾಗಾಟ: ಶಿವಮೊಗ್ಗ ಘಟನೆಯ ಪ್ರಮುಖ ಅಂಶಗಳು… ಜೈಲುಗಳೆಂದರೆ ಅಭೇದ್ಯ ಕೋಟೆಗಳೆಂದು ನಾವು ಭಾವಿಸುತ್ತೇವೆ, ಆದರೆ ಅಲ್ಲಿಯೂ ಭದ್ರತೆಯನ್ನು ಮೀರಿ ಅಪರಾಧ ಚಟುವಟಿಕೆಗಳು ನಡೆಯಲು ಯತ್ನಿಸುತ್ತವೆ. ಇತ್ತೀಚೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದ ಒಂದು ಘಟನೆಯು ಈ ಸವಾಲನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಘಟನೆಯಲ್ಲಿ, ಮದರಿ ಪಾಳ್ಯದ ನಿವಾಸಿಗಳಾದ ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22) ಮತ್ತು ಅಜ್ಗರ್ ಅಲಿ ಅಲಿಯಾಸ್ ಅಜ್ಜು (21) ಎಂಬ ಇಬ್ಬರು ವ್ಯಕ್ತಿಗಳು ಜೈಲಿನಲ್ಲಿರುವ ಕೈದಿಯೊಬ್ಬರನ್ನು ಭೇಟಿಯಾಗುವ ನೆಪದಲ್ಲಿ ಗಾಂಜಾ ಸಾಗಿಸಲು ಯತ್ನಿಸಿದ್ದಾರೆ. ತಮ್ಮ ಪ್ಯಾಂಟ್‌ನಲ್ಲಿ ಗಾಂಜಾವನ್ನು ಬಚ್ಚಿಟ್ಟುಕೊಂಡು ಬಂದಿದ್ದ ಇವರ ಕೃತ್ಯ, ಕೈದಿಗಳ ಭೇಟಿಯಂತಹ ಸಾಮಾನ್ಯ ಸಂದರ್ಭಗಳನ್ನು ಸಹ ಅಪರಾಧಿಗಳು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಇಂತಹ ಘಟನೆಗಳು ಭೇಟಿ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಅಲುಗಾಡಿಸುವುದಲ್ಲದೆ, ಪ್ರತಿಯೊಂದು ಸಂವಾದವನ್ನು ಅನುಮಾನದಿಂದ ನೋಡುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತವೆ, ಇದು ಪುನರ್ವಸತಿ ಪ್ರಕ್ರಿಯೆಯನ್ನು…

ಮುಂದೆ ಓದಿ..
ಸುದ್ದಿ 

ಓದಿಲ್ಲವೆಂದು 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳನೆ – ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಕೃತ್ಯ…

Taluknewsmedia.com

Taluknewsmedia.comಓದಿಲ್ಲವೆಂದು 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳನೆ – ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಕೃತ್ಯ… ಓದಿಲ್ಲ ಅಂತ 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ ಸರ್ಕಾರಿ ಶಾಲೆ ಶಿಕ್ಷಕಿರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ನಡೆದ ಘಟನೆ ಶಿಕ್ಷಣ ವ್ಯವಸ್ಥೆಯ ಮಾನವೀಯತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಓದಿಲ್ಲ ಎನ್ನುವ ಒಂದೇ ಕಾರಣಕ್ಕೆ ಮೂರನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಮನಸೋಇಚ್ಛೆ ಥಳಿಸಿರುವ ಅಮಾನವೀಯ ಘಟನೆ ಸರ್ಕಾರಿ ಉರ್ದು ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಹರ್ಷಿಯಾ ತಸ್ಕಿನ್, ಓದದೆ ಶಾಲೆಗೆ ಬಂದಿದ್ದಾನೆ ಎಂಬ ಕಾರಣಕ್ಕೆ 3ನೇ ತರಗತಿ ಬಾಲಕನ ಮೇಲೆ ಭಾರೀ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಾಲಕನ ದೇಹದ ಮೇಲೆ ಬಾಸುಂಡೆಗಳು ಕಾಣಿಸಿಕೊಂಡಿದ್ದು, ಥಳನೆಯ ತೀವ್ರತೆ ಎಷ್ಟು ಭೀಕರವಾಗಿತ್ತೆಂಬುದಕ್ಕೆ ಇದು ಸಾಕ್ಷಿಯಾಗಿದೆ.ಶಿಕ್ಷಕಿಯ ಕ್ರೂರ ವರ್ತನೆಯಿಂದ ಗಾಯಗೊಂಡ ಬಾಲಕನ ಸ್ಥಿತಿ ಗಂಭೀರವಾಗಿದ್ದು,…

ಮುಂದೆ ಓದಿ..
ಸುದ್ದಿ 

ಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ – ಅಪ್ರಾಪ್ತ ನೇಪಾಳಿ ಬಾಲಕ ಪೊಲೀಸ್ ವಶ..

Taluknewsmedia.com

Taluknewsmedia.comಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ – ಅಪ್ರಾಪ್ತ ನೇಪಾಳಿ ಬಾಲಕ ಪೊಲೀಸ್ ವಶ.. ಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ಕ್ಯಾಮರಾ ಬೆಂಗಳೂರು: ಚಿತ್ರಮಂದಿರವೊಂದರ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ನೇಪಾಳ ಮೂಲದ ಅಪ್ರಾಪ್ತನನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನೇಪಾಳಿ ಬಾಲಕ ಪೊಲೀಸರ ವಶಕ್ಕೆನೇಪಾಳ ಮೂಲದ 15 ವರ್ಷದ ಅಪ್ರಾಪ್ತನನ್ನು ಸಿನಿಮಾ ವೀಕ್ಷಕರೇ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ನೇಪಾಳ ಮೂಲದ ವ್ಯಕ್ತಿಯೊಬ್ಬ ಬಹಳ ದಿನಗಳಿಂದ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನ ಅಣ್ಣನ ಮಗ ಮನೆಗೆ ಬಂದಿದ್ದ, ಭಾನುವಾರ ಕೆಲಸಕ್ಕೆ ಹೋಗುವಾಗ ಅಣ್ಣನ ಮಗನನ್ನ ಚಿತ್ರಮಂದಿರಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆ ಬಾಲಕ ಮಹಿಳಾ ಶೌಚಗೃಹಕ್ಕೆ ತೆರಳಿ ರಹಸ್ಯ ಕ್ಯಾಮರಾ ಇಟ್ಟಿದ್ದ. ಮಹಿಳೆಯೊಬ್ಬರು ಶೌಚಕ್ಕೆ ತೆರಳಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಗಾಬರಿಗೊಂಡ ಮಹಿಳೆ ಕೂಡಲೇ ಚಿತ್ರಮಂದಿರದ…

ಮುಂದೆ ಓದಿ..
ಸುದ್ದಿ 

ಶೂನ್ಯ ಶಿಕ್ಷೆ, ಅಮಾನವೀಯ ಹೇಳಿಕೆ: ಅಂಕಿ-ಅಂಶಗಳು ತೆರೆದಿಟ್ಟ ಕರ್ನಾಟಕದ ಕರಾಳ ಸತ್ಯ…

Taluknewsmedia.com

Taluknewsmedia.comಶೂನ್ಯ ಶಿಕ್ಷೆ, ಅಮಾನವೀಯ ಹೇಳಿಕೆ: ಅಂಕಿ-ಅಂಶಗಳು ತೆರೆದಿಟ್ಟ ಕರ್ನಾಟಕದ ಕರಾಳ ಸತ್ಯ… “ಅತ್ಯಾಚಾರ ಅನಿವಾರ್ಯವಾದರೆ ಮಲಗಿ ಆನಂದಿಸಬೇಕು” –  ಈ ಮಾತುಗಳು 2021 ರ  ಬೆಳಗಾವಿ ವಿಧಾನ ಸಭೆ ಕಲಾಪದಲ್ಲಿ  ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಮಾಜಿ ಶಾಸಕ ರಮೇಶ್ ಕುಮಾರ್ ಅವರದ್ದು. ಸದನದಲ್ಲಿ  ಇಂತಹದೊಂದು ಅಮಾನವೀಯ ಹೇಳಿಕೆ ನೀಡಿದು ಕೇವಲ ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ತೋರಿಸುವುದಿಲ್ಲ, ಬದಲಿಗೆ ನಮ್ಮ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯ ಆಳದಲ್ಲಿ ಬೇರೂರಿರುವ ಒಂದು ಗಂಭೀರ ಸಮಸ್ಯೆಯ ಪ್ರತಿಬಿಂಬವಾಗಿದೆ. ಇದು ಒಬ್ಬ ಜನಪ್ರತಿನಿಧಿಯ ಬೇಜವಾಬ್ದಾರಿ ಹೇಳಿಕೆಗಿಂತ ಮಿಗಿಲಾದದ್ದು.ಈ ಹೇಳಿಕೆ ಕೇವಲ ನಾಲಿಗೆಯ ಪ್ರಮಾದವಲ್ಲ, ಬದಲಿಗೆ ಅಂಕಿ-ಅಂಶಗಳು ದೃಢಪಡಿಸುವ ವ್ಯವಸ್ಥಿತ ವೈಫಲ್ಯದ ಮುಖವಾಣಿ. ಈ ಲೇಖನದಲ್ಲಿ ನಾವು ಪೊಲೀಸ್ ಇಲಾಖೆಯದ್ದೇ ಡೇಟಾವನ್ನು ಬಳಸಿ, ಸಂತ್ರಸ್ತರಿಗೆ ನ್ಯಾಯ ಹೇಗೆ ಶೂನ್ಯವಾಗುತ್ತಿದೆ ಎಂಬುದನ್ನು ಅನಾವರಣ ಮಾಡುತ್ತೇವೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಗಂಭೀರ ಅಪರಾಧಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಕಟು ಸತ್ಯವನ್ನು…

ಮುಂದೆ ಓದಿ..
ಸುದ್ದಿ 

ಗೌರವಾನ್ವಿತ ವಕೀಲ ಸಹೋದರ – ಸಹೋದರಿಯರೇ ನಮಸ್ಕಾರ,

Taluknewsmedia.com

Taluknewsmedia.comಗೌರವಾನ್ವಿತ ವಕೀಲ ಸಹೋದರ – ಸಹೋದರಿಯರೇ ನಮಸ್ಕಾರ, ಸಮಾಜವನ್ನು ಕಟ್ಟುವ ತಿದ್ದುವ ಪ್ರಶ್ನಿಸುವ ನೊಂದವರಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನು ವಕೀಲರು ಮಾಡುವುದರಿಂದ ಅವರನ್ನು ಸಾಮಾಜಿಕ ಅಭಿಯಂತರರು Social Engineers ಎಂದು ಕರೆಯುತ್ತಾರೆಂಬ ಲಾ ಕಾಲೇಜು ಮೇಷ್ಟ್ರುಗಳ ಮಾತನ್ನು ನಂಬಿಕೊಂಡು, ಅವರು ನೀಡಿದ ಮಹಾತ್ಮ ಗಾಂಧೀಜಿ, ವಲ್ಲಭಭಾಯ್ ಪಟೇಲ್, ಡಾ ಬಾಬು ರಾಜೇಂದ್ರ ಪ್ರಸಾದ್, ಡಾ ಬಿ ಆರ್ ಅಂಬೇಡ್ಕರ್, ಕರ್ನಾಟಕದವರೇ ಆದ ಕೆ ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲ್, ಕೆ ವಿ ಶಂಕರೇಗೌಡರು, ಬಂಗಾರಪ್ಪ,ಮೊಯ್ಲಿ, ಎಸ್ ಆರ್ ಬೊಮ್ಮಯಿ, ವೈ ಕೆ ರಾಮಯ್ಯ ಮತ್ತು ತೀರಾ ಇತ್ತೀಚೆಗಿನ ಎ ಪಿ ರಂಗನಾಥ್ ಮುಂತಾದವರನ್ನು ಆದರ್ಶವಾಗಿಟ್ಟುಕೊಂಡು ಸಮಾಜವನ್ನು / ಸರ್ಕಾರವನ್ನು / ಭ್ರಷ್ಟರು ಮತ್ತು ದುಷ್ಟರನ್ನು ನೀವು ಪ್ರಶ್ನಿಸ ತೊಡಗಿದರೆ ನಿಮ್ಮ ಬಾಯಿಗೆ ಬೀಗ ಜಡಿಯಲು ಸಂವಿಧಾನ ಬದ್ಧ ಸಂಸ್ಥೆಯನ್ನು ಬಳಸಿಕೊಳ್ಳುತ್ತಾರೆ ! ಪ್ರತಿಯೊಂದು ಸಾರ್ವಜನಿಕ…

ಮುಂದೆ ಓದಿ..
ಸುದ್ದಿ 

‘ಬನ’ ಮೂಲಕ ಕೊಸ್ಟಲ್‌ವುಡ್‌ಗೆ ಜೆ.ಪಿ. ಶೆಟ್ಟಿ ಎಂಟ್ರಿ..

Taluknewsmedia.com

Taluknewsmedia.com‘ಬನ’ ಮೂಲಕ ಕೊಸ್ಟಲ್‌ವುಡ್‌ಗೆ ಜೆ.ಪಿ. ಶೆಟ್ಟಿ ಎಂಟ್ರಿ.. ಬೆಂಗಳೂರು ಸುದ್ದಿ ಮಾಧ್ಯಮದಲ್ಲಿ ನಿರೂಪಕರಾಗಿ ಹೆಸರು ಮಾಡಿದ್ದ ಹಲವರು ಈಗಾಗಲೇ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದಾರೆ. ಅಪರ್ಣ, ಗೌದೀಶ್ ಅಕ್ಕಿ ರೆಹಮಾನ್, ಜಾಹ್ನವಿ, ಶೀತಲ್ ಶೆಟ್ಟಿ, ಪ್ರಮೋದ್ ಬೋಪಣ್ಣ, ವೆಂಕಟೇಶ್ ಅಡಿಗ ಅವರ ಸಾಲಿಗೆ ಇದೀಗ ಮತ್ತೊಬ್ಬ ನಿರೂಪಕ ಜಯಪ್ರಕಾಶ್ ಶೆಟ್ಟಿ (ಜೆ.ಪಿ. ಶೆಟ್ಟಿ) ಸೇರಿಕೊಂಡಿದ್ದಾರೆ. ಜಗ್ಗೇಶ್ ನಾಯಕನಾಗಿದ್ದ ‘ಸಾಫ್ಟ್‌ವೇರ್ ಗಂಡ’ ಚಿತ್ರ ಹಾಗೂ ‘ನಿರ್ಭಯ’ ಧಾರಾವಾಹಿಯಲ್ಲಿ ನಟಿಸಿದ್ದ ಜೆ.ಪಿ. ಶೆಟ್ಟಿ, ಇದೀಗ ‘ಬನ’ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಧರ್ಮದೈವ’ ಹಾಗೂ 75 ದಿನಗಳ ಕಾಲ ಪ್ರದರ್ಶನ ಕಂಡ ‘ಧರ್ಮ ಚಾವಡಿ’ ಚಿತ್ರಗಳ ಖ್ಯಾತಿಯ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಜೆ.ಪಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿದ…

ಮುಂದೆ ಓದಿ..
ಸುದ್ದಿ 

ವಾಮಾಚಾರ ಶಂಕೆ: ಎರಡು ವರ್ಷದ ಮಗುವಿನ ರಕ್ಷಣೆ…

Taluknewsmedia.com

Taluknewsmedia.comವಾಮಾಚಾರ ಶಂಕೆ: ಎರಡು ವರ್ಷದ ಮಗುವಿನ ರಕ್ಷಣೆ… ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪಟ್ಟಣದ ಜನತಾ ಕಾಲನಿಯಲ್ಲಿ ವಾಮಾಚಾರಕ್ಕೆ ಸಂಬಂಧಿಸಿದ ಗಂಭೀರ ಶಂಕೆಯೊಂದು ಬೆಳಕಿಗೆ ಬಂದಿದೆ. ನಿಧಿ ಲಾಭಕ್ಕಾಗಿ ಎರಡು ವರ್ಷದ ಗಂಡು ಮಗುವನ್ನು ಬಲಿಕೊಡುವ ಉದ್ದೇಶದಿಂದ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಗುವನ್ನು ತಕ್ಷಣ ದೇವನಹಳ್ಳಿಯ ಶಿಶುಮಂದಿರದ ಆರೈಕೆಗೆ ಒಪ್ಪಿಸಲಾಗಿದೆ. ಹುಣ್ಣಿಮೆ ದಿನವಾದ ಶನಿವಾರ ಮಗುವನ್ನು ಬಲಿ ನೀಡಲು ಯೋಜನೆ ರೂಪಿಸಲಾಗಿತ್ತು ಎಂಬುದು ಮೇಲ್ನೋಟದ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರಿಂದ ಮಾಹಿತಿ ಬಂದ ಬಳಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಮ್ಮ, ಮಕ್ಕಳ ರಕ್ಷಣಾಧಿಕಾರಿ…

ಮುಂದೆ ಓದಿ..
ಸುದ್ದಿ 

ಪೊಲೀಸರಿಗೆ ಶಹಬ್ಬಾಶ್‌ಗಿರಿ: ಹೊಸ ವರ್ಷ ಭದ್ರತೆಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದನೆ

Taluknewsmedia.com

Taluknewsmedia.comಪೊಲೀಸರಿಗೆ ಶಹಬ್ಬಾಶ್‌ಗಿರಿ: ಹೊಸ ವರ್ಷ ಭದ್ರತೆಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದನೆ ನಗರದಲ್ಲಿ 2026ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಹಾಗೂ ಫೇಸ್ ರಿಕಗ್ನಿಷನ್ ಕ್ಯಾಮರಾಗಳ ಪರಿಣಾಮ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಹೊಸ ವರ್ಷ ಆಚರಣೆ ನಡೆದಿರುವುದು ಸಂತಸಕರ ಸಂಗತಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಓಬೆರಾಯ್ ಜಂಕ್ಷನ್, ಇಂದಿರಾನಗರ, ಎಲೆಕ್ಟ್ರಾನಿಕ್ಸ್ ಸಿಟಿ, ಕೋರಮಂಗಲ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿತ್ತು. ಈ ಜನಸಂದಣಿಯನ್ನು ನಿಯಂತ್ರಿಸುವುದು, ಪರಿಸ್ಥಿತಿಯನ್ನು ನಿಖರವಾಗಿ ಅವಲೋಕಿಸುವುದು ಹಾಗೂ ಸಂಭವನೀಯ ಅಹಿತಕರ ಘಟನೆಗಳನ್ನು ಮುಂಚಿತವಾಗಿ ತಡೆಯುವ ಉದ್ದೇಶದಿಂದ ಎವಿರೋಸ್ ಎಐ ಪ್ಲಾಟ್‌ಫಾರ್ಮ್, ವಿಸನ್ ಎಐ ಅಪ್ಲಿಕೇಶನ್ ಹಾಗೂ ಬೆಂಗಳೂರು ಸೇಫ್ ಸಿಟಿ ವ್ಯವಸ್ಥೆಯ ಮೂಲಕ ವ್ಯಾಪಕ…

ಮುಂದೆ ಓದಿ..
ಸುದ್ದಿ 

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳು ಬಹಿರಂಗ :

Taluknewsmedia.com

Taluknewsmedia.comಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳು ಬಹಿರಂಗ : ಕೈದಿಗಳು ಧೂಮಪಾನ, ಮದ್ಯಪಾನ, ಜೂಜಿನಲ್ಲಿ ತೊಡಗಿರುವ ವೀಡಿಯೋ ವೈರಲ್.. ಕಲಬುರಗಿ: ಕರ್ನಾಟಕದ ಕಲಬುರಗಿ ಕೇಂದ್ರ ಕಾರಾಗೃಹದೊಳಗೆ ಕೈದಿಗಳು ಧೂಮಪಾನ ಮಾಡುತ್ತಾ, ಮದ್ಯಪಾನ ಮಾಡುತ್ತಾ ಹಾಗೂ ಗುಂಪಾಗಿ ಜೂಜಿನಲ್ಲಿ ತೊಡಗಿರುವ ದೃಶ್ಯಗಳು ವೈರಲ್ ಆಗಿದ್ದು, ಹೈ-ಸೆಕ್ಯುರಿಟಿ ಜೈಲಿನ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ವೈರಲ್ ಆದ ವೀಡಿಯೋಗಳಲ್ಲಿ ಕೈದಿಗಳು ದುಬಾರಿ ಸಿಗರೇಟ್‌ಗಳನ್ನು ಸೇವಿಸುತ್ತಿರುವುದು, ಪಾನೀಯಗಳನ್ನು ಕುಡಿಯುತ್ತಿರುವುದು ಮತ್ತು ಪತ್ರಿಕೆಯ ಮೇಲೆ ಜೂಜಾಡುತ್ತಿರುವುದು ಕಂಡುಬಂದಿದೆ. ಇದರಿಂದ ಕಾರಾಗೃಹದೊಳಗೆ ನಿಷೇಧಿತ ವಸ್ತುಗಳು ಹೇಗೆ ಪ್ರವೇಶಿಸುತ್ತಿವೆ ಎಂಬ ಕುರಿತು ಶಂಕೆಗಳು ವ್ಯಕ್ತವಾಗಿವೆ. ಇಂತಹ ‘ಹೈ-ಪ್ರೊಫೈಲ್’ ಜೀವನಶೈಲಿ ಕೈದಿಗಳಿಗೆ ರೂಢಿಯಾಗಿರುವುದನ್ನು ಈ ದೃಶ್ಯಗಳು ಸೂಚಿಸುತ್ತಿವೆ.ಈ ಪ್ರಕರಣದ ಹಿನ್ನೆಲೆಯಲ್ಲಿ ಕಲಬುರಗಿ ಕೇಂದ್ರ ಜೈಲಿನ ನಾಲ್ವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಆಕಾಶ್ ರಾಕೇಶ್, ಪ್ರಜ್ವಲ್ ಸೇರಿದಂತೆ ಇನ್ನೊಬ್ಬ ಕೈದಿ ಸೇರಿದ್ದಾರೆ. ಜೈಲು ಅಧೀಕ್ಷಕಿ…

ಮುಂದೆ ಓದಿ..
ಸುದ್ದಿ 

ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಹಿಂಸಾಚಾರ:…

Taluknewsmedia.com

Taluknewsmedia.comಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಹಿಂಸಾಚಾರ:… ಬಳ್ಳಾರಿ ಎಸ್ಪಿ ಪವನ ನೆಜ್ಜೂರ್ ಅಮಾನತುಬಳ್ಳಾರಿ ನಗರದಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಮುನ್ನ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಭೀಕರ ಹಿಂಸಾಚಾರದ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪವನ ನೆಜ್ಜೂರ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಗುರುವಾರ ಸಂಜೆ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ಪವನ ನೆಜ್ಜೂರ್ ಅವರು ಜನವರಿ 1ರಂದು ಮಾತ್ರ ಬಳ್ಳಾರಿ ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸರ್ಕಾರದ ಆದೇಶದ ಪ್ರಕಾರ, ಬಳ್ಳಾರಿಯ ಎಸ್ಪಿ ಸರ್ಕಲ್‌ನಲ್ಲಿ ವಾಲ್ಮೀಕಿ ಮಹರ್ಷಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲೇ ಗಲಾಟೆ ಉಂಟಾಗಿ ಕಲ್ಲು…

ಮುಂದೆ ಓದಿ..