ಸುದ್ದಿ 

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆಯ ದುರ್ಘಟನೆ!

Taluknewsmedia.com

Taluknewsmedia.comಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆಯ ದುರ್ಘಟನೆ! ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲೂಕು — ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಕೆ.ಎಸ್. ಜಯಶ್ರೀ (30) ಎಂದು ಗುರುತಿಸಲಾಗಿದೆ. ಕೇವಲ ಆರು ತಿಂಗಳ ಹಿಂದಷ್ಟೇ ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಮನೆಯ ಬಾತ್‌ರೂಮ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಜಯಶ್ರೀ, ತನ್ನ ಫೇಸ್‌ಬುಕ್ ಖಾತೆಯಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಡೆತ್ ನೋಟ್‌ನಲ್ಲಿ ಪತಿ ಚಂದ್ರಶೇಖರ್‌ನ ವಿರುದ್ಧ ಗಂಭೀರ ಆರೋಪ ಮಾಡಿರುವ ಜಯಶ್ರೀ,ಪತಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದ ಎಂಬುದಾಗಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು “ಚಂದ್ರಶೇಖರ್ ಬಂಧನದವರೆಗೆ ಶವ ಸಂಸ್ಕಾರ ಮಾಡಬಾರದು” ಎಂಬ ನಿಲುವು ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗುಡಿಬಂಡೆ ಠಾಣೆ…

ಮುಂದೆ ಓದಿ..
ಸುದ್ದಿ 

ಹಣವಿಲ್ಲದಿದ್ದರೂ ಹಸಿದವರಿಗೆ ಹೊಟ್ಟೆತುಂಬ ಊಟ ನೀಡುವ ‘ಫುಡ್ ಬ್ಯಾಂಕ್ ಯೋಜನೆ..

Taluknewsmedia.com

Taluknewsmedia.comಹಣವಿಲ್ಲದಿದ್ದರೂ ಹಸಿದವರಿಗೆ ಹೊಟ್ಟೆತುಂಬ ಊಟ ನೀಡುವ ‘ಫುಡ್ ಬ್ಯಾಂಕ್ ಯೋಜನೆ.. ರಾಜ್ಯದ 236 ತಾಲೂಕುಗಳಲ್ಲಿ ಕಾರ್ಯಾರಂಭ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು ‘ಫುಡ್ ಬ್ಯಾಂಕ್ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ. ಹಸಿದವರಿಗೆ ಊಟ ನೀಡುವ ಫುಡ್ ಬ್ಯಾಂಕ್ ಕೈಯಲ್ಲಿ ಹಣವಿಲ್ಲದಿದ್ದರೂ ಹಸಿದವರಿಗೆ ಹೋಟೆಲ್​ನಲ್ಲಿ ಊಟ ನೀಡುವ ಯೋಜನೆಯೊಂದು ಸದ್ದಿಲ್ಲದೆ ಕಾರ್ಯಾರಂಭ ಮಾಡಿದೆ. ರಾಜ್ಯದ 236 ತಾಲೂಕುಗಳಲ್ಲಿ ಫುಡ್ ಬ್ಯಾಂಕ್ ಪ್ರಾರಂಭ ಆಗುತ್ತಿದೆ. ಹೌದು, ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು ‘ಫುಡ್ ಬ್ಯಾಂಕ್ ಎಂಬ ಯೋಜನೆಯನ್ನು ಆರಂಭಿಸಲಾಗಿದೆ. ಬಡವರ ಹಸಿವು ತಣಿಸುವ ಕಾರ್ಯವನ್ನು ಮಾರಾಂಡಹಳ್ಳಿ ಗ್ರಾಮದಲ್ಲಿ ಜನಿಸಿದ ಎಂ. ಬಿ ಕೃಷ್ಣಮೂರ್ತಿ ಕರ್ನಾಟಕ ಫುಡ್ ಬ್ಯಾಂಕ್ ಆರಂಭಿಸಿದೆ. ಬಡವರ ಹಸಿವು ತಣಿಸಲೆಂದು ‘ಫುಡ್ ಬ್ಯಾಂಕ್’ ವ್ಯವಸ್ಥೆ ಇರುವ ಹೋಟೆಲ್ ಹೊರಗಡೆ ಅಳವಡಿಸಿರುವ ಟೋಕನ್ ತೆಗೆದುಕೊಂಡು ಕೌಂಟರ್​ನಲ್ಲಿ ನೀಡಿ ಯಾವುದೇ ಅಂಜಿಕೆಯಿಲ್ಲದೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ. ಸಹೃದಯಿಗಳು…

ಮುಂದೆ ಓದಿ..
ಸುದ್ದಿ 

ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ವಿಶ್ವ ಆತ್ಮ ಹತ್ಯ ತಡೆ ದಿನ

Taluknewsmedia.com

Taluknewsmedia.comಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ವಿಶ್ವ ಆತ್ಮ ಹತ್ಯ ತಡೆ ದಿನ ನಗರದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಆಡಳಿತ ಸಹಕಾರದೊಂದಿಗೆ ಗ್ರಾಮಭಾರತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾ. ಶ್ರೀ ನಟೇಶ್ ಜಿಲ್ಲಾ ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ ಪ್ರತಿ ವರ್ಷ ಸುಮಾರು 9 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇದೊಂದು ಆತಂಕಕಾರಿ ವಿಷಯ ಇದನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕನು ಸಂವಿಧಾನ ಬದ್ಧ ಕರ್ತವ್ಯಗಳಲ್ಲೂ ಒಂದಾಗಿದ್ದು ಇದಕ್ಕೆ ಪ್ರತಿಯೊಬ್ಬನಾಗರಿಕನು ಕೈಜೋಡಿಸಬೇಕೆಂದು ತಿಳಿಸಿದರು. ತಮ್ಮ ಸುತ್ತು ಮುತ್ತಲ ಪ್ರದೇಶದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ಮಾದಕ ವಸ್ತುಗಳು ಸಂಗ್ರಹಣೆ ಮತ್ತು ಮಾರಾಟ, ಪರಿಸರದ ಮೇಲೆ ಆಗುತ್ತಿರುವ ಅಕ್ರಮಗಳ ಬಗ್ಗೆ ಜಾಗೃತಿ ವಹಿಸಿ ಆರೋಗ್ಯವಂತ ಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಆಗಲೇ ಸುಸಂಸ್ಕೃತ ಸಮಾಜ ತಲೆಯೆತ್ತಲು…

ಮುಂದೆ ಓದಿ..
ಸುದ್ದಿ 

ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ..

Taluknewsmedia.com

Taluknewsmedia.comಮುಳಬಾಗಿಲು: ಮನುಷ್ಯ ಆರೋಗ್ಯದ ಕೊರತೆ ಉಂಟಾದಾಗ ಮಾತ್ರ ಅದು ಎಷ್ಟು ಮುಖ್ಯ ಎಂಬುದು ಅರಿವಾಗುತ್ತದೆ ಎಂದು ಮುಳಬಾಗಿಲು ಫುಡ್ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ ಹೇಳಿದರು ನಗರದ ಎಸ್ ಬಿ ಐ ಬ್ಯಾಂಕ್ ಮುಂದೆ ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಆರೋಗ್ಯ ಭದ್ರತೆ ಒದಗಿಸಿದೆ. ಆದರೆ,ಹಿರಿಯ ನಾಗರಿಕರ ತಮ್ಮ ಜೀವನ ಕೊನೆಗಳಿಗೆಗೆ ಬೇಕಾದ ಅವಶ್ಯಕತೆಗಳಿಗೆ ಮಕ್ಕಳು ಭದ್ರತೆಯಾಗಬೇಕು ಎಂದರು.ಅನೇಕ ಪ್ರಕರಣದಲ್ಲಿ ಮಕ್ಕಳು ಪೋಷಕರಿಂದ ಅವರ ಅಸ್ತಿ, ಅಂತಸ್ತನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಂಡು ಕೊನೆಗೆ ಅವರನ್ನು ಬೀದಿಗೆ ತಳ್ಳುವ ನೂರಾರು ಘಟನೆಗಳು ಈಗಾಗಲೇ ನಡೆದಿದೆ. ಈ ಬಗ್ಗೆ ಹಿರಿಯ ನಾಗರೀಕರು ಎಚ್ಚರಿಕೆ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಮಹಿಳೆಯರ ನಡುವೆ ಗಲಾಟೆ: ಇಬ್ಬರ ವಿರುದ್ಧ ಪೊಲೀಸ್ ದೂರು

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 17, 2025: ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೋಟೆಲ್ ನೌಕರಿಯಾಗಿರುವ ಮಹಿಳೆ ಹಾಗೂ ಆಕೆಯ ಪುತ್ರಿಗೆ ಹಲ್ಲೆ ನಡೆದಿದ್ದು, ಇಬ್ಬರ ವಿರುದ್ಧ ಆರೋಪಗಳು ದಾಖಲಾಗಿದೆ.ದೂರುದಾರರಾದ ಮುಮ್ತಾಜ್ ಬೆಗಂ ಇಮ್ತಿಯಾಜ್ (40) ಹಾಗೂ ಬಿಬಿ ಫಾತಿಮಾ (21) ಇವರುಗಳು ಹುಬ್ಬಳ್ಳಿಯ ಇಶ್ವರನಗರದ APMC ಬಳಿ ವಾಸವಿದ್ದಾರೆ. ಇವರ ಮೇಲೆ ಫಾತಿಮಾ ಸಾಜಾ ಹಾಗೂ ಆಕೆಯ ಸಹೋದರರಾದ ಸಾಜಾ ಎಂಬುವವರು ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.ಇದು ಜೂನ್ 5ರಂದು ಬೆಳಿಗ್ಗೆ 8:30ರಿಂದ 9 ಗಂಟೆಯ ಮಧ್ಯೆ ನಡೆದಿದ್ದು, ಗಲಾಟೆ ವೇಳೆ ದುಷ್ಕರ್ಮಿಗಳು 40,000 ರೂಪಾಯಿ ನಗದು, 20,000 ರೂ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ ಎಂಬ ದೂರು ದಾಖಲಾಗಿದೆ. ಹಲ್ಲೆ ಬಳಿಕ ಮಹಿಳೆಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ…

ಮುಂದೆ ಓದಿ..
ಸುದ್ದಿ 

ಗಾಂಜಾ ಸೇವನೆ ಮಾಡುತ್ತಿದ್ದ ಯುವಕನ ಬಂಧನ.

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 17, 2025: ನಗರದ ನವನಗರ ಪ್ರದೇಶದಲ್ಲಿ ನಿಷೇಧಿತ ಮಾದಕ ವಸ್ತು ಸೇವನೆಯ ಪ್ರಕರಣ ಬೆಳಕಿಗೆ ಬಂದಿದೆ. ದಿನಾಂಕ 15-06-2025 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಹುಲ ಜಗದೀಶ ಕಾಲೇಬಾಗ (ವಯಸ್ಸು: 31), ನವನಗರದ 3ನೇ ಕ್ರಾಸ್, EWS-577 ನಿವಾಸಿಯಾಗಿ ಗುರುತಿಸಲಾಗಿದೆ. ಆರೋಪಿತನು ಹಿಂದೂ ಚಲವಾದಿ ಸಮುದಾಯದಿಂದ ಆಗಿದ್ದು, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ.ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ರಾಹುಲನು ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ಪದಾರ್ಥವಾದ ಗಾಂಜಾ (ಮಾದಕ ಔಷಧಿ ಅಥವಾ ಮನೋಪರಿಣಾಮಕಾರಿ ವಸ್ತು) ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಕರಣದ ಮಾಹಿತಿ ಪಡೆದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ತಕ್ಷಣವೇ ಆರೋಪಿತನನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದೆ.ಈ ಘಟನೆಯ ಹಿನ್ನೆಲೆಯಲ್ಲಿ ನವನಗರ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಅಬಕಾರಿ ಕಾಯ್ದೆ ಉಲ್ಲಂಘನೆ: ರಾಜುವ ವಿರುದ್ಧ ಕಾನೂನು ಕ್ರಮ.

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 17, 2025: ನಗರದ ಈಶ್ವರನಗರ ಕ್ರಾಸ್ ಹತ್ತಿರ ಅಬಕಾರಿ ಕಾಯ್ದೆ ಉಲ್ಲಂಘನೆಯ ಪ್ರಕರಣ ಒಂದರಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತನನ್ನು ರಾಜು ಎಂದು ಗುರುತಿಸಲಾಗಿದ್ದು, ಅವನು ಭಗ್ರಾ ಪೂಜಾರಿಯ ಪುತ್ರನೆಂದು ತಿಳಿದುಬಂದಿದೆ. ಅವನ ವಯಸ್ಸು ಸುಮಾರು 50 ರಿಂದ 55 ವರ್ಷಗಳ ಮಧ್ಯದಲ್ಲಿದೆ. ಸುದ್ದಿಯ ಪ್ರಕಾರ, ದಿನಾಂಕ 16-06-2025 ರಂದು ಮುಂಜಾನೆ 11 ಗಂಟೆಯ ಸುಮಾರಿಗೆ, ವಿದ್ಯಾಧಿರಾಜ ಭವನದ ಹಿಂಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತನು ತನ್ನ ನಿಯಂತ್ರಣದಲ್ಲಿ ಮಧ್ಯಪಾನ ಪ್ಯಾಕೆಟ್‌ಗಳನ್ನು (ಟೆಟ್ರಾ ಪ್ಯಾಕ್) ಇರಿಸಿಕೊಂಡು, ಯಾವುದೇ ಕಾನೂನುಬದ್ಧ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.ಈ ಘಟನೆ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂಗಳು 32 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಆರೋಪಿತನನ್ನು ಬಂಧಿಸಿ,…

ಮುಂದೆ ಓದಿ..
ಸುದ್ದಿ 

ಆಮರಗೋಳ ಮೆಟ್ರೋ ಹಿಂದುಗಡೆ ಗಾಂಜಾ ಸೇವಿಸುತ್ತಿದ್ದ ಆರೋಪಿತನ ಬಂಧನ

Taluknewsmedia.com

Taluknewsmedia.comಹುಬ್ಬಳ್ಳಿ, 17 ಜೂನ್ 2025: ಈ ದಿನದ ಮುಂಜಾನೆ ಸುಮಾರು 10:30ರ ಸುಮಾರಿಗೆ ಹುಬ್ಬಳ್ಳಿ ನಗರದ ಆಮರಗೋಳ ಮೆಟ್ರೋ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಅಮೀನ್ (ವಯಸ್ಸು: 29), ತಂದೆ: ಶಹಜಾನ್ ನಾಲಬಂದ, ಜಾತಿ: ಮುಸ್ಲಿಂ, ಉದ್ಯೋಗ: ಖಾಸಗಿ ಕೆಲಸ, ವಿಳಾಸ: ಮನೆ ಸಂಖ್ಯೆ 105, 3ನೇ ಕ್ರಾಸ್, ನಂದೀಶ್ವರ ನಗರ, ನವನಗರ, ಹುಬ್ಬಳ್ಳಿ ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಾಥಮಿಕ ತನಿಖೆಯಂತೆ, ಆರೋಪಿತನು ನಿಷೇಧಿತ ಮಾಧಕ ಪದಾರ್ಥವಾದ ಗಾಂಜಾ ಸೇವಿಸುತ್ತಿದ್ದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದು, ಮದ್ಯನಿಯಂತ್ರಣ ಮತ್ತು ಮಾದಕ ಪದಾರ್ಥಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪೋಲಿಸ ಠಾಣೆಯಲ್ಲಿ ಸೂಕ್ತ ಕಲಂರಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ,…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಯುವಕನಿಂದ ಗಾಂಜಾ ಸೇವನೆ.

Taluknewsmedia.com

Taluknewsmedia.comಸಾರ್ವಜನಿಕ ಸ್ಥಳದಲ್ಲಿ ಕೃತ್ಯಹುಬ್ಬಳ್ಳಿ, ಜೂನ್ 17: ನಗರದ ನವನಗರದಲ್ಲಿರುವ ಕೆ.ಎಸ್.ಎಲ್.ಯು ರಸ್ತೆಯ ಹತ್ತಿರ ಇಂದು ಬೆಳಿಗ್ಗೆ ಸುಮಾರು 10:40ರ ಹೊತ್ತಿಗೆ ನಡೆದ ಘಟನೆದಲ್ಲಿ 19 ವರ್ಷದ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವೇಳೆ ಹಿಡಿದಿಟ್ಟುಕೊಳ್ಳಲಾಗಿದೆ.ಆರೋಪಿತನನ್ನು ವಿನಾಯಕ ಜಗದೀಶ ಹಿರೇಮಠ ಎಂದು ಗುರುತಿಸಲಾಗಿದ್ದು, ಉಣಕಲ್ ಕ್ರಾಸ್, ದಾನಮ್ಮನ ಗುಡಿ ಹತ್ತಿರವಿರುವ ಸಂಜೀವಿನಿ ಪಾನ ಶಾಪ್ ಹತ್ತಿರ ಗ್ಯಾರೇಜಿನಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾನೆ. ಈತನಿಂದ ಗಾಂಜಾ ಎಂಬ ನಿಷೇಧಿತ ಮಾದಕ ವಸ್ತು ಪತ್ತೆಯಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಆಟೋ ಡಿಕ್ಕಿಯಿಂದ ಮಹಿಳೆಗೆ ಗಾಯ: ಚಾಲಕನ ವಿರುದ್ಧ ಪ್ರಕರಣ ದಾಖಲು

Taluknewsmedia.com

Taluknewsmedia.comನಾಗಮಂಗಲ ಪಟ್ಟಣದಲ್ಲಿ ಸಂಭವಿಸಿದ ಅಜಾಗರೂಕ ಆಟೋ ಚಾಲನೆಯಿಂದ ಹಿರಿಯ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆ ನಿಂಗಮ್ಮ , ಘಟನೆ ನಡೆದ ಸಮಯದಲ್ಲಿ ನಾಗಮಂಗಲ ಸರ್ಕಲ್ ಬಳಿಯ ಆಟೋ ಸ್ಟ್ಯಾಂಡ್ ಬಳಿ ಫುಟ್‌ಪಾತ್‌ನಲ್ಲಿ ನಿಂತು ಊರಿಗೆ ತೆರಳಲು ಆಟೋ ನಿರೀಕ್ಷಿಸುತ್ತಿದ್ದರು. ಈ ಸಂದರ್ಭ ಆಟೋ ಚಾಲಕ ಆಫ್ರಾಬ್ ಪಾಷ (ಕೆಎ-05-ಎಎ-2738 ನಂ. ವಾಹನದ ಚಾಲಕ) ನಿರ್ಲಕ್ಷ್ಯದಿಂದ ಹಾಗೂ ಅಜಾಗರೂಕತೆಯಿಂದ ಆಟೋವನ್ನು ರಿವರ್ಸ್ ಚಾಲನೆ ಮಾಡಿ ನಿಂಗಮ್ಮಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ನಿಂಗಮ್ಮ ಕೆಳಗೆ ಬಿದ್ದು ಸೊಂಟದ ಬಲಭಾಗ ಮತ್ತು ಬಲಗಾಲಿನ ತೊಡೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲೇ ಇದ್ದ ಸಂಬಂಧಿ ರಾಮೇಗೌಡ ಮತ್ತು ಆಟೋಚಾಲಕ ಗಾಯಾಳುವಿಗೆ ತಕ್ಷಣ ಸಹಾಯ ಮಾಡಿದ್ದು, ಅವರನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ…

ಮುಂದೆ ಓದಿ..