ಸುದ್ದಿ 

ಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ..

Taluknewsmedia.com

Taluknewsmedia.comಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ.. ಯಾವುದು ಈ ಯೋಜನೆ ಅಂತೀರಾ ಅದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ವಿಭಾಗ. ಈ ಇಲಾಖೆಯು ತನ್ನ ಅಡಿಯಲ್ಲಿ ಬರತಕ್ಕಂತಹ ಎಲ್ಲಾ ಉದ್ಯೋಗಸ್ಥರಿಗೆ ಗುಡ್ ನ್ಯೂಸ್ ಅನ್ನು ಕೊಟ್ಟಿದೆ ಅಂತ ಹೇಳಬಹುದು. ಇದು ಕಟ್ಟಡ ಕಾರ್ಮಿಕರಿಗೆ ಅಚಾನಕ್ಕಾಗಿ ಅವರು ಮೃತಪಟ್ಟರೆ . ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುವ ಒಂದು ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲಿಕ್ಕೆ ಈ ಇಲಾಖೆ ಸಜ್ಜಾಗಿದೆ. ಹಾಗೆ ಕಾರ್ಮಿಕರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಮತ್ತು ಪರಿಹಾರ ಧನವನ್ನು ನೀಡಲು ಈ ಯೋಜನೆ ನೆರವಾಗುತ್ತದೆ. ಅಂತ್ಯಕ್ರಿಯೆಯ ಪರಿಹಾರ ಧನ ನಾಲ್ಕು ಸಾವಿರ ರೂಪಾಯಿಗಳಾಗಿದ್ದು. ಹಾಗೂ ಪರಿಹಾರ ಹಣ ರೂ.1, 46,000 ಎಂಬ ಮೊತ್ತವನ್ನು ಕುಟುಂಬಕ್ಕೆ ಇಲಾಖೆ ನೀಡಲು ಮುಂದಾಗಿದೆ ಹಾಗೆ…

ಮುಂದೆ ಓದಿ..
ಸುದ್ದಿ 

ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣ ದಿನ ಬದಲಾವಣೆಗೆ ಅವಕಾಶವನ್ನು ನೀಡಲು ರೈಲ್ವೆ ಇಲಾಖೆ, ಚಿಂತನೆ.

Taluknewsmedia.com

Taluknewsmedia.comಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣ ದಿನ ಬದಲಾವಣೆಗೆ ಅವಕಾಶವನ್ನು ನೀಡಲು ರೈಲ್ವೆ ಇಲಾಖೆ, ಚಿಂತನೆ. ರಾಜ್ಯದಲ್ಲಿ ಹೆಚ್ಚು ಜನರು ಉಪಯೋಗಿಸುವ ವಾಹನಗಳಲ್ಲಿ ರೈಲ್ವೆಯು ಕೂಡ ಒಂದಾಗಿದ್ದು ಹಾಗೆಯೇ ಇದು ಉತ್ತಮವಾದ ಶುಲ್ಕವನ್ನು ಕೂಡ ಹೊಂದಿದೆ. ಮಧ್ಯಮ ವರ್ಗದವರಿಗೆ ಬಡವರಿಗೆ ಹಾಗೂ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಇದು ಉತ್ತಮವಾದ ವಾಹನವಾಗಿದೆ. ರೈಲ್ವೆ ಇಲಾಖೆಯಲ್ಲಿನ ಸಮಸ್ಯೆ ಎಂದರೆ ಒಮ್ಮೆ ಟಿಕೆಟ್ ಬುಕ್ಕಾದ ತಕ್ಷಣ ಆ ದಿನ ಪ್ರಯಾಣ ಮಾಡಲಿಲ್ಲವೆಂದರೆ ಅದು ಕ್ಯಾನ್ಸಲ್ ಆಗುವ ಸಂಭವ ಇತ್ತು ಹಾಗೆ ಯಾವುದೇ ಶುಲ್ಕವು ಮರಳಿ ಬರುವುದಿಲ್ಲ. ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರು ತಮ್ಮ ಪ್ರಯಾಣದ ದಿನವನ್ನು ಬದಲಿಸಲು ಅವಕಾಶವಿರಲಿಲ್ಲ ಹಾಗೆ ಆ ಟಿಕೆಟ್ ಅನ್ನ ರದ್ದುಗೊಳಿಸಿ ಬೇರೆ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆ ಇತ್ತು. ಇಲಾಖೆ ಈ ಮನವಿಯನ್ನು ಪರಿಶೀಲಿಸುತ್ತಿದೆ. ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರು ತಮ್ಮ ದಿನವನ್ನು…

ಮುಂದೆ ಓದಿ..
ಸುದ್ದಿ 

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆಯ ದುರ್ಘಟನೆ!

Taluknewsmedia.com

Taluknewsmedia.comಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆಯ ದುರ್ಘಟನೆ! ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲೂಕು — ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಕೆ.ಎಸ್. ಜಯಶ್ರೀ (30) ಎಂದು ಗುರುತಿಸಲಾಗಿದೆ. ಕೇವಲ ಆರು ತಿಂಗಳ ಹಿಂದಷ್ಟೇ ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಮನೆಯ ಬಾತ್‌ರೂಮ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಜಯಶ್ರೀ, ತನ್ನ ಫೇಸ್‌ಬುಕ್ ಖಾತೆಯಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಡೆತ್ ನೋಟ್‌ನಲ್ಲಿ ಪತಿ ಚಂದ್ರಶೇಖರ್‌ನ ವಿರುದ್ಧ ಗಂಭೀರ ಆರೋಪ ಮಾಡಿರುವ ಜಯಶ್ರೀ,ಪತಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದ ಎಂಬುದಾಗಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು “ಚಂದ್ರಶೇಖರ್ ಬಂಧನದವರೆಗೆ ಶವ ಸಂಸ್ಕಾರ ಮಾಡಬಾರದು” ಎಂಬ ನಿಲುವು ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗುಡಿಬಂಡೆ ಠಾಣೆ…

ಮುಂದೆ ಓದಿ..
ಸುದ್ದಿ 

ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ……..

Taluknewsmedia.com

Taluknewsmedia.comಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ…….. ನ್ಯಾಯಾಂಗದ ಕ್ರಿಯಾಶೀಲತೆಯನ್ನು ಸ್ವಾಗತಿಸುತ್ತಾ, ನ್ಯಾಯಾಧೀಶರ ಅತಿರೇಕದ ಅಕ್ರಮಣಕಾರಿ ಮಾತುಗಳನ್ನು ಖಂಡಿಸುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ಚಪ್ಪಲಿ ಎಸೆದ ದುಷ್ಟ, ಮತಾಂಧ ವಕೀಲರ ನಡೆಯನ್ನು ಪ್ರಬಲವಾಗಿ ವಿರೋಧಿಸುತ್ತಾ, ಮೂಲಭೂತವಾದ ಸಂಪೂರ್ಣವಾಗಿ ತನ್ನ ನೆಲೆಯನ್ನು ವಿಸ್ತರಿಸುವ ಮುನ್ನ ಕ್ರಿಯೆ – ಪ್ರತಿಕ್ರಿಯೆಗಳ ಸುತ್ತ ಒಂದು ಸುತ್ತು……. ವಿರೋಧಿಗಳನ್ನುಕೆಲವರು ಬಾಂಬ್ ಹಾಕಿ ಉಡಾಯಿಸುತ್ತಾರೆ,ಕೆಲವರು ಬಂದೂಕಿನಿಂದ ಗುರಿಯಿಟ್ಟು ಹೊಡೆಯುತ್ತಾರೆ,ಕೆಲವರು ಮಚ್ಚು ಲಾಂಗುಗಳನ್ನು ಬೀಸುತ್ತಾರೆ,ಕೆಲವರು ರಾಡು, ದೊಣ್ಣೆಗಳಿಂದ ದಾಳಿ ಮಾಡುತ್ತಾರೆ,ಕೆಲವರು ಚಾಕುವಿನಿಂದ ಚುಚ್ಚುತ್ತಾರೆ,ಕೆಲವರು ಕಲ್ಲು ಬೀಸುತ್ತಾರೆ,ಕೆಲವರು ಚಪ್ಪಲಿ ಎಸೆಯುತ್ತಾರೆ, ಕೆಲವರು ಪೇಪರ್ ಹರಿದು ಹಾಕುತ್ತಾರೆ,ಕೆಲವರು ಧಿಕ್ಕಾರ ಕೂಗುತ್ತಾರೆ, ಕೆಲವರು ಮೌನವಾಗಿ ಪ್ರತಿಭಟಿಸುತ್ತಾರೆ,ಕೆಲವರು ಕಾನೂನು ಕ್ರಮ ಕೈಗೊಳ್ಳುತ್ತಾರೆ,ಕೆಲವರು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತಾರೆ,ಕೆಲವರು ಸ್ವತಃ ಪತ್ರ ಬರೆದು ಅಥವಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ,ಕೆಲವರು ಸಂಬಂಧಪಟ್ಟವರಿಗೆ ದೂರು ನೀಡುತ್ತಾರೆ,ಕೆಲವರು ಎಲ್ಲಾ ಘಟನೆಗಳನ್ನು ನಿರ್ಲಕ್ಷಿಸುತ್ತಾರೆ,ಕೆಲವರು ತಮಗೆ ಸಂಬಂಧವೇ ಇಲ್ಲದಂತೆ ದಿವ್ಯ ಮೌನಕ್ಕೆ…

ಮುಂದೆ ಓದಿ..
ಸುದ್ದಿ 

ಅಕ್ಟೋಬರ್ 9 ರಿಂದ ರಾಜ್ಯದ 60 ಕಡೆಗಳಲ್ಲಿ ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಗ್ರಹ ಆಂದೋಲನ ಶುರುವಾಗುತ್ತದೆ.

Taluknewsmedia.com

Taluknewsmedia.comಅಕ್ಟೋಬರ್ 9 ರಿಂದ ರಾಜ್ಯದ 60 ಕಡೆಗಳಲ್ಲಿ ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಗ್ರಹ ಆಂದೋಲನ ಶುರುವಾಗುತ್ತದೆ. ಧರ್ಮಸ್ಥಳ ಇದ್ದ ಕ್ಷಣ ನಮಗೆ ನೆನಪಿಗೆ ಬರುತ್ತಿರುವ ವಿಷಯವೇ ಇತ್ತೀಚಿಗೆ ಕೆಲವೊಂದಿಷ್ಟು ನಡೆದ ಅಹಿತಕರ ಘಟನೆಗಳು ಹಾಗೂ ಎಂದಿಗೂ ಎಲ್ಲರ ಮನಸಲ್ಲಿ ಪ್ರಶ್ನೆಯಾಗಿ ಕಾಣುತ್ತಿರುವ ಸೌಜನ್ಯ ಕೇಸ್ ಧರ್ಮಸ್ಥಳ ತನ್ನ ಪಾವಿತ್ರತೆಯನ್ನು ಕಾಪಾಡಿಕೊಂಡು ಬರುತ್ತಿರುವ ಹಂತದಲ್ಲಿ ಈ ಘಟನೆ ನಡೆದು ಹೋಗಿದ್ದರಿಂದ ಪ್ರತಿಯೊಬ್ಬರಿಗೂ ಇದು ನೆನಪಿನಲ್ಲಿ ಇಟ್ಟುಕೊಳ್ಳುವಂತ ಸ್ಥಿತಿಯನ್ನು ತಂದು ಬಿಟ್ಟಿದೆ. ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆಯಾಗಿ 13 ವರ್ಷ ಸಂದಿರುವ ಹಿನ್ನೆಲೆ ಧರ್ಮಸ್ಥಳ ಅತ್ಯಾಚಾರ. ಭೂಕಬಳಿಕೆ . ದಲಿತರ ಮೀಸಲು. ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆ . ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆ ಆಯೋಜಿಸಿರುವ ನ್ಯಾಯಕ್ಕಾಗಿ ಜನಗ್ರಹ 2025 ಅಕ್ಟೋಬರ್ 9ರಂದು ರಾಜ್ಯಾದ್ಯಂತ ಮೊದಲ ಬಾರಿಗೆ ಒಂದೇ ದಿನದಲ್ಲಿ ಗ್ರಾಮ ಗ್ರಾಮಗಳಲ್ಲಿ ದೌರ್ಜನ್ಯ ವಿರೋಧಿ ವೇದಿಕೆ…

ಮುಂದೆ ಓದಿ..
ಸುದ್ದಿ 

ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ – ಹಾವೇರಿಯಲ್ಲಿ ಪ್ರಕರಣ ದಾಖಲು!

Taluknewsmedia.com

Taluknewsmedia.comಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ – ಹಾವೇರಿಯಲ್ಲಿ ಪ್ರಕರಣ ದಾಖಲು! ಹಾವೇರಿ: ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಇಬ್ಬರು ರಿಕವರಿ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮಹಿಳಾ ಏಜೆಂಟ್ ಗೌರಮ್ಮ ಹಾಗೂ ಸಹಏಜೆಂಟ್ ಗಣೇಶ್ ಅವರ ಮೇಲೆ ಆರೋಪಿ ಸುಲೇಮಾನ ಮತ್ತು ನೂರಜಾನ್ ಸೇರಿ ಐವರು ಗ್ಯಾಂಗ್‌ ರೀತಿಯಲ್ಲಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘದ ದಾಖಲೆಗಳ ಪ್ರಕಾರ, A2 ಆರೋಪಿ ನೂರಜಾನ್ ಧರ್ಮಸ್ಥಳ ಸಂಘದಿಂದ ₹3 ಲಕ್ಷ ಸಾಲ ಪಡೆದಿದ್ದನು. ಮೊದಲಿಗೆ ₹1.06 ಲಕ್ಷ ಕಂತು ಪಾವತಿಸಿದ ಬಳಿಕ ಉಳಿದ ₹1.94 ಲಕ್ಷ ಹಣವನ್ನು ಪಾವತಿಸದೆ ವಂಚನೆ ಮಾಡಿದ್ದಾನೆ. ಏಜೆಂಟ್‌ಗಳೊಂದಿಗೆ ಮಾತನಾಡಿ “ಸಾಲ ಕಟ್ಟುತ್ತೇನೆ, ಬನ್ನಿ ಮನೆಗೆ” ಎಂದು ಕರೆಸಿಕೊಂಡು,…

ಮುಂದೆ ಓದಿ..
ಸುದ್ದಿ 

ಸಿನಿಮಾ ಹೆಸರಿನಲ್ಲಿ ಕಿರುಕುಳ — ಮಹಿಳಾ ಗೌರವದ ಮೇಲೆ ಮತ್ತೊಂದು ಹೊಡೆತ!

Taluknewsmedia.com

Taluknewsmedia.comಸಿನಿಮಾ ಹೆಸರಿನಲ್ಲಿ ಕಿರುಕುಳ — ಮಹಿಳಾ ಗೌರವದ ಮೇಲೆ ಮತ್ತೊಂದು ಹೊಡೆತ! ಬೆಂಗಳೂರು ನಗರ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಸ್ಯಾಂಡಲ್ವುಡ್‌ನ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಹೇಮಂತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮತ್ತು ಬಂಧನ ಸುದ್ದಿ ಕೇವಲ ಸಿನಿಮಾ ವಲಯದ ವಿಷಯವಲ್ಲ — ಇದು ನಮ್ಮ ಸಮಾಜದ ಕನ್ನಡಕ! ಒಂದು ಮಹಿಳೆ ತನ್ನ ಪ್ರತಿಭೆಯಿಂದ ಸಿನಿಮಾ ಲೋಕದಲ್ಲಿ ಹೆಜ್ಜೆ ಇಡಲು ಯತ್ನಿಸಿದಾಗ, ಆಕೆಯ ಕನಸುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಕೇವಲ ವೈಯಕ್ತಿಕ ಅಪರಾಧವಲ್ಲ — ಇದು ವೃತ್ತಿಪರ ವೇದಿಕೆಯಲ್ಲಿನ ಮಹಿಳಾ ಗೌರವದ ಮೇಲೆ ದಾಳಿ.ಸಿನಿಮಾ ಎಂಬ ಕನಸುಗಳ ಜಗತ್ತಿನಲ್ಲಿ ಮಹಿಳೆಯರು ಸುರಕ್ಷಿತವಾಗಿರದಿದ್ದರೆ, ಅದು ಕಲೆಗೇ ಅಪಮಾನ. ⚖️ ಕಾನೂನಿನ ನಂಬಿಕೆ, ಸಮಾಜದ ಬೆಂಬಲ ಅಗತ್ಯ ನಟಿ ಧೈರ್ಯದಿಂದ ದೂರು ನೀಡಿರುವುದು ಶ್ಲಾಘನೀಯ. ಆದರೆ ಕೇವಲ ಪ್ರಕರಣ ದಾಖಲು ಸಾಕಾಗದು — ಇಂತಹ ಪ್ರಕರಣಗಳು ನ್ಯಾಯದ ಬೆಳಕಿನಲ್ಲಿ ಸಂಪೂರ್ಣವಾಗಿ ತನಿಖೆಗೊಂಡು, ತಪ್ಪಿತಸ್ಥರಿಗೆ…

ಮುಂದೆ ಓದಿ..
ಅಂಕಣ 

ಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ…….

Taluknewsmedia.com

Taluknewsmedia.comಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ……. ಒಂದು ಸಲಹೆ ಮತ್ತು ಮನವಿ….. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ, ಮೌಲ್ಯಗಳ, ಮಾತಿನ ಸ್ವಾತಂತ್ರ್ಯದ ಪುನರ್ ಸ್ಥಾಪನೆಯ ಪ್ರಯತ್ನ…… ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?……………….. ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ……… ನಾವು ಗೆಳೆಯ/ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ ಅಥವಾ ಪರಿಚಿತ/ಅಪರಿಚಿತರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ ನಡೆಸುತ್ತೇವೆ. ನಮ್ಮ ಅತ್ಯಂತ ಖಾಸಗಿ ಆರೋಗ್ಯದಿಂದ – ವಿಶ್ವದ ಎಲ್ಲಾ ಆಸಕ್ತಿದಾಯಕ ವಿಷಯಗಳನ್ನೂ ಚರ್ಚಿಸುತ್ತೇವೆ. ನಮ್ಮ ಆರ್ಥಿಕ ಸಂಕಷ್ಟ, ನೈತಿಕ/ಅನೈತಿಕ ಸಂಬಂಧಗಳು, ಇತರರ ಬಗ್ಗೆ ನಮಗಿರುವ ಪ್ರೀತಿ/ದ್ವೇಷ/ಅಸೂಯೆ ಎಲ್ಲವನ್ನೂ ಮಾತನಾಡುತ್ತೇವೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲವೂ ನಮ್ಮ ನಮ್ಮ ಆಸಕ್ತಿಗೆ ಅನುಗುಣವಾಗಿ ಸಂಭಾಷಣೆ ಇರುತ್ತದೆ. ಕೆಲವೊಮ್ಮೆ…

ಮುಂದೆ ಓದಿ..
ವಿಶೇಷ ಸುದ್ದಿ 

ಸಾಮಾಜಿಕ ಕಳಕಳಿ: ಧಾರ್ಮಿಕ ಭಾವನೆಗಳು ಮತ್ತು ನ್ಯಾಯಾಂಗದ ಗೌರವ — ಚಿಂತನೆಗೆ ಆಹ್ವಾನ ನೀಡಿದ ಘಟನೆಯೊಂದು

Taluknewsmedia.com

Taluknewsmedia.comಸಾಮಾಜಿಕ ಕಳಕಳಿ: ಧಾರ್ಮಿಕ ಭಾವನೆಗಳು ಮತ್ತು ನ್ಯಾಯಾಂಗದ ಗೌರವ — ಚಿಂತನೆಗೆ ಆಹ್ವಾನ ನೀಡಿದ ಘಟನೆಯೊಂದು ದಿಲ್ಲಿಯ ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ಘಟನೆ ದೇಶದ ಸಾಮಾಜಿಕ ಮತ್ತು ಧಾರ್ಮಿಕ ಸಂವೇದನೆಗಳ ಕುರಿತಂತೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ ವಕೀಲ ರಾಜೇಶ್ ಕಿಶೋರ್, ಈ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಕ್ರಮಗಳ ಕುರಿತು ಯಾವುದೇ ವಿಷಾದವಿಲ್ಲವೆಂದು ತಿಳಿಸಿದ್ದಾರೆ. ರಾಜೇಶ್ ಕಿಶೋರ್ ಅವರು ಖಜುರಾಹೋದಲ್ಲಿ ಭಗ್ನಗೊಂಡ ವಿಷ್ಣುಮೂರ್ತಿಗಳ ಮರುಸ್ಥಾಪನೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಆದರೆ, ಆ ಅರ್ಜಿಯ ವಿಚಾರಣೆಯ ವೇಳೆ ಸಿಜೆಐ ಗವಾಯಿ ಅವರಿಂದ “ಮೂರ್ತಿಯನ್ನು ಮರುಸ್ಥಾಪನೆ ಮಾಡಬೇಕಾದರೆ ವಿಷ್ಣುವನ್ನೇ ಹೋಗಿ ಕೇಳಿ” ಎಂಬ ವ್ಯಂಗ್ಯಾತ್ಮಕ ಹೇಳಿಕೆ ಬಂದಿತೆಂದು ಅವರು ಆರೋಪಿಸಿದ್ದಾರೆ. ಈ ಹೇಳಿಕೆ ತಮಗೆ ಅತ್ಯಂತ ನೋವನ್ನುಂಟುಮಾಡಿದ್ದು, ಅದೇ ಅಸಮಾಧಾನದಿಂದಾಗಿ ಅವರು…

ಮುಂದೆ ಓದಿ..
ಸುದ್ದಿ 

ಬಿಗ್‌ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದ ಘಟನೆ – ಪೊಲೀಸರ ಸಮ್ಮುಖದಲ್ಲಿ ಮನೆಗೆ ಬೀಗ!

Taluknewsmedia.com

Taluknewsmedia.comಬಿಗ್‌ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದ ಘಟನೆ – ಪೊಲೀಸರ ಸಮ್ಮುಖದಲ್ಲಿ ಮನೆಗೆ ಬೀಗ! ಬೆಂಗಳೂರು, ಅಕ್ಟೋಬರ್ 7, 2025: ರಿಯಾಲಿಟಿ ಶೋ ಬಿಗ್‌ಬಾಸ್ ಮನೆಯೊಳಗಿದ್ದ ಎಲ್ಲಾ 17 ಸ್ಪರ್ಧಿಗಳನ್ನು ಇಂದು ಪೊಲೀಸ್ ಸಮ್ಮುಖದಲ್ಲಿ ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಮನೆಗೆ ತಕ್ಷಣವೇ ಬೀಗ ಹಾಕಲಾಗಿದ್ದು, ಸ್ಪರ್ಧಿಗಳನ್ನು ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಗ್‌ಬಾಸ್ ಆಡಳಿತ ಮಂಡಳಿ ತಿಳಿಸಿದ್ದಾರೆ. ಈ ಘಟನೆ ಮೊದಲು ಸ್ಪರ್ಧಿಗಳಿಗೆ ತಿಳಿಯದೇ ನಡೆಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಬಂದಿರುವುದು ಕಾರಣವಾಗಿ ಎಲ್ಲ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಬೇಕು ಎಂದು ಆಡಳಿತ ನಿರ್ಧರಿಸಿತು. ಪೊಲೀಸರು ಮನೆಯಿಂದ ಹೊರಗೆ ನಿಂತು, ಬಿಗ್‌ಬಾಸ್ ಆಡಳಿತ ಸಿಬ್ಬಂದಿಯೊಂದಿಗೆ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕರೆದೊಯ್ದರು. ಸ್ಪರ್ಧಿಗಳನ್ನು ಸುಮಾರು 10 ಕಾರುಗಳಲ್ಲಿ ವಿಭಜಿಸಿ, ಗೌಪ್ಯ ಸ್ಥಳಕ್ಕೆ ಕರೆದೊಯಲಾಗಿದೆ. ಕಾರುಗಳ ಕಿಟಕಿಗಳಿಗೆ ಕಪ್ಪು ಬಟ್ಟೆ ಹಾಕಿ, ಮಾಧ್ಯಮಗಳಿಗೆ ಯಾವುದೇ ಮಾಹಿತಿ ಲಭ್ಯವಾಗದಂತೆ…

ಮುಂದೆ ಓದಿ..