ಸುದ್ದಿ 

ಸವಣೂರಿನ ಬಳಿ ಬೈಕ್ ವ್ಯಕ್ತಿಗೆ ಡಿಕ್ಕಿ ಆಕ್ಸಿಡೆಂಟ್ :

Taluknewsmedia.com

Taluknewsmedia.comಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೆವರಮೆಳಹಳ್ಳಿ ಕ್ರಾಸ್ ನ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ. ದಿನಾಂಕ: 16-08-2025 ರಂದು ಸಂಜೆ 6-30 ಗಂಟೆ ಸುಮಾರಿಗೆ ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ಹೋಗಿರುವ ರಸ್ತೆಯಲ್ಲಿ ಮೋಟರ್ ಸೈಕಲ್ ನಂಬರ ಕೆ.ಎ. 27 ಇಎಸ್ 3282 ನೇದ್ದರ ಸವಾರ ಪ್ರಶಾಂತ ಶೇಖಪ್ಪ ದೇಸಾಯಿ ಸಾ|| ತೆವರಮೆಳಹಳ್ಳಿ ಈತನು ತನ್ನ ಮೋಟಾ‌ರ್ ಸೈಕಲ್ ನ್ನು ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಿರೀಶ ಕಿತ್ತೂರಮಠ ಎನ್ನುವ ವ್ಯಕ್ತಿಗೆ ಹಿಂದಿನಿಂದ ಡಿಕ್ಕಿ ಮಾಡಿದ್ದು ಡಿಕ್ಕಿ ಮಾಡಿದ ಪರಿಣಾಮ ಗಿರೀಶನಿಗೆ ತಲೆಗೆ, ಮುಖಕ್ಕೆ, ಹಣೆಗೆ ಗಾಯಗಳು ಆಗಿದ್ದು ಜೊತೆಗೆ ಬೈಕ್ ಸವಾರನಾದ ಪ್ರಶಾಂತ ದೇಸಾಯಿ ಈತನಿಗೂ…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಅಮಾಯಕ ವ್ಯಕ್ತಿ ಮೇಲೆ ಚಾಕು ಇರಿತ ಹಲ್ಲೆ ಯತ್ನ

Taluknewsmedia.com

Taluknewsmedia.comಸವಣೂರು ನಗರದಲ್ಲಿ ಇತ್ತೀಚಿಗೆ ಮತ್ತೆ ರೌಡಿಸಂ ನ್ ಸದ್ದು ಹೆಚ್ಚಾಗುತ್ತಿದೆ ಆಗಸ್ಟ್ 17 ನೆ ತಾರೀಕು ಸವಣೂರಿನ ಪ್ರಮುಖ ನಗರದಲ್ಲಿ ಅಮಾಯಕ ಕಾರ್ಮಿಕ ವ್ಯಕ್ತಿಯ ಮೇಲೆ ಇಬ್ಬರು ಗ್ಯಾಂಗ್ ಗೆಳೆಯರ ಅಟ್ಟ್ಯಾಕ್ ಈ ಪ್ರಕರಣದಲ್ಲಿ ಆಸ್ಲಾಮ ನಜೀರ್ಅಹ್ಮದ್ ರಾಯಚೂರು ಎಂಬಾತ ವ್ಯಕ್ತಿ ಕೆಲವು ದಿನಗಳ ಹಿಂದೆ ಸವಣೂರ ಶಹರದಲಿ.. ನೂರಹ್ಮದ ಅಕ್ಕಿ ಇವರ ಮನೆಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದಾಗ ನೂರಅಹ್ಮದ ಅಕ್ಕಿ ಮತ್ತು ಅವರ ತಮ್ಮ ಜಗಳ ಮಾಡುವ ಸಮಯದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಆಸ್ಲಾಮ್ ಅವರ ಜಗಳವನ್ನು ಬಿಡಿಸಿದ್ದನು. ಈ ಸಂಬಂದ ಇದರಲ್ಲಿ 1 ನೇ ಆರೋಪಿಯಾದ ನೂರಅಹ್ಮದ್ ಅಕ್ಕಿ ಈ ಜಗಳವನ್ನು ಮಾಡಲು ನಿನೇ ಕಾರಣ ಅಂತಾ ಗೌಂಡಿ ಆಸ್ಲಾಮ್ ಮೇಲೆ ಸಂಶಯ ಪಡುತ್ತಾ ಬಂದಿದ್ದನು. ಹೀಗಿರುವಾಗ ದಿನಾಂಕ: 17-08-2025 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ನೂರಅಹ್ಮದ್ಅಕ್ಕಿ ಅವನ ಗೌಂಡಿ ಆದ ಆಸ್ಲಾಮ್…

ಮುಂದೆ ಓದಿ..
ಸುದ್ದಿ 

ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ..

Taluknewsmedia.com

Taluknewsmedia.comಮುಳಬಾಗಿಲು: ಮನುಷ್ಯ ಆರೋಗ್ಯದ ಕೊರತೆ ಉಂಟಾದಾಗ ಮಾತ್ರ ಅದು ಎಷ್ಟು ಮುಖ್ಯ ಎಂಬುದು ಅರಿವಾಗುತ್ತದೆ ಎಂದು ಮುಳಬಾಗಿಲು ಫುಡ್ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ ಹೇಳಿದರು ನಗರದ ಎಸ್ ಬಿ ಐ ಬ್ಯಾಂಕ್ ಮುಂದೆ ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಆರೋಗ್ಯ ಭದ್ರತೆ ಒದಗಿಸಿದೆ. ಆದರೆ,ಹಿರಿಯ ನಾಗರಿಕರ ತಮ್ಮ ಜೀವನ ಕೊನೆಗಳಿಗೆಗೆ ಬೇಕಾದ ಅವಶ್ಯಕತೆಗಳಿಗೆ ಮಕ್ಕಳು ಭದ್ರತೆಯಾಗಬೇಕು ಎಂದರು.ಅನೇಕ ಪ್ರಕರಣದಲ್ಲಿ ಮಕ್ಕಳು ಪೋಷಕರಿಂದ ಅವರ ಅಸ್ತಿ, ಅಂತಸ್ತನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಂಡು ಕೊನೆಗೆ ಅವರನ್ನು ಬೀದಿಗೆ ತಳ್ಳುವ ನೂರಾರು ಘಟನೆಗಳು ಈಗಾಗಲೇ ನಡೆದಿದೆ. ಈ ಬಗ್ಗೆ ಹಿರಿಯ ನಾಗರೀಕರು ಎಚ್ಚರಿಕೆ…

ಮುಂದೆ ಓದಿ..
ಸುದ್ದಿ 

ಮಾರುತಿ ನಗರದಲ್ಲಿ ದಾರುಣ ಅಪಘಾತ – 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ

Taluknewsmedia.com

Taluknewsmedia.comಬೆಂಗಳೂರು 22 ಆಗಸ್ಟ್ 2025ಬೆಂಗಳೂರು: 21.08.2025 ರಂದು ಬೆಳಿಗ್ಗೆ ಸುಮಾರು 8:20 ಗಂಟೆಗೆ ಮಾರುತಿ ನಗರ, ಕೋಗಿಲು ಮುಖ್ಯ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ದಾರುಣ ರಸ್ತೆ ಅಪಘಾತ ಸಂಭವಿಸಿದೆ. ಯಲಹಂಕ ಸಂಚಾರಿ ಪೊಲೀಸರ ಪ್ರಕಾರ, ತನ್ನಿ ಕೃಷ್ಣ (10) ಹಾಗೂ ಕೃತಿ ಕೃಪಾ (5) ಎಂಬ ಇಬ್ಬರು ಮಕ್ಕಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಪೋಷಕರು ರಸ್ತೆ ಮೇಲೆ ಸಾಗುತ್ತಿದ್ದರು. ಈ ವೇಳೆ ಕೋಗಿಲು ಕ್ರಾಸ್ ದಿಕ್ಕಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿ.ಎಂ.ಟಿ.ಸಿ ಬಸ್ (ನಂಬರ್ KA-57-F-5375) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಬಸ್ ಚಕ್ರವು ತನ್ನಿ ಕೃಷ್ಣ ಅವರ ತಲೆಯ ಮೇಲೆ ಹಾದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಸ್ಥಳೀಯರು ಮತ್ತು ಯಲಹಂಕ ಸಂಚಾರಿ ಪೊಲೀಸರು ತಕ್ಷಣ ನೆರವಿಗೆ ಧಾವಿಸಿದರೂ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಅಪಘಾತಕ್ಕೆ ಕಾರಣನಾದ…

ಮುಂದೆ ಓದಿ..
ಸುದ್ದಿ 

ಯಮಹಾ ಬೈಕ್ ಕಳ್ಳತನ: ಕೇರಳಕ್ಕೆ ಹೋದ ಮಾಲೀಕ ವಾಪಸ್ಸು ಬಂದಾಗ ವಾಹನ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು:22 ಆಗಸ್ಟ್ 2025ಯಲಹಂಕ ಕಟ್ಟಿಗೆನಹಳ್ಳಿ ಎಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ವರದಿಯಾಗಿದೆ. ಅರುಣ್ ಸಿ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ Yamaha FZS ಬೈಕ್‌ (ನಂಬರ KA51-C-89295) ಅನ್ನು ಮನೆಯ ಬಳಿ ನಿಲ್ಲಿಸಿ, 01/07/2025 ರಂದು ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳಿದ್ದರು. 21/08/2025 ಬೆಳಿಗ್ಗೆ 9.00 ಗಂಟೆಗೆ ವಾಪಸ್ಸು ಬಂದಾಗ ಬೈಕ್ ಸ್ಥಳದಲ್ಲಿಲ್ಲವೆಂದು ಗಮನಿಸಿದ ಅವರು ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ ವಾಹನ ಪತ್ತೆಯಾಗದ ಕಾರಣ ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಮಾಲೀಕರು ಸುಮಾರು ₹20,000 ನಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೈಕ್ ಕಳ್ಳತನಕ್ಕೆ ಸಂಬಂಧಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಾಹನದ ಸುಳಿವು ತಿಳಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಮುಂದೆ ಓದಿ..
ಸುದ್ದಿ 

ಘೋರ ರಸ್ತೆ ಅಪಘಾತದಲ್ಲಿ ಯುವತಿಯ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 22 ಆಗಸ್ಟ್ 2025ದೊಡ್ಡಬಳ್ಳಾಪುರ ಬಾಷೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನಿವಾಸಿ ಜಯಶ್ರೀ ಬಿ.ಆರ್ (22) ಅವರು ದುರಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಜಯಶ್ರೀ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನದಂತೆ 21 ಆಗಸ್ಟ್ ಬೆಳಿಗ್ಗೆ 8 ಗಂಟೆಗೆ ಮನೆತನಕ್ಕೆ ತಿಳಿಸಿ KA51-X-6439 ನಂಬರಿನ ಟಿವಿಎಸ್ ವೆಗೋ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೊರಟಿದ್ದರು. ಬೆಳಿಗ್ಗೆ ಸುಮಾರು 8:30ಕ್ಕೆ ಮಾರಸಂದ್ರ ಗ್ರಾಮದ ಎಸ್.ಎಂ.ಎಸ್ ಬಾರ್ & ರೆಸ್ಟೋರೆಂಟ್ ಮುಂಭಾಗ ಬೆಂಗಳೂರು–ದೊಡ್ಡಬಳ್ಳಾಪುರ ರಸ್ತೆಯಲ್ಲಿ, KA02-AF-9951 ನಂಬರಿನ ಟಾಟಾ ಟಿಪ್ಪರ್ ಲಾರಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿದ ಪರಿಣಾಮ ಜಯಶ್ರೀ ಅವರ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಜಯಶ್ರೀ ಬಿದ್ದು, ಲಾರಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನೆಯ ಕುರಿತು ಮಾಹಿತಿ ದೊರೆತ ತಕ್ಷಣ ಜಯಶ್ರೀ ಅವರ ತಂದೆ-ತಾಯಿ ಸ್ಥಳಕ್ಕೆ ಬಂದು ಪರಿಶೀಲಿಸಿ ರಾಜಾನುಕುಂಟೆ…

ಮುಂದೆ ಓದಿ..
ಸುದ್ದಿ 

ಸಂಪಿಗೆಹಳ ಪೊಲೀಸ್ ಠಾಣೆ – ಎಂ.ಡಿ.ಎಂ.ಎ ವಶಪಡಿಕೆ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು 22 ಆಗಸ್ಟ್ 2022ದಿನಾಂಕ 21-08-2025 ಮಧ್ಯರಾತ್ರಿ, ಸಂಪಿಗೆಹಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ರವರ ನೇತೃತ್ವದಲ್ಲಿ, ಥಣಿಸಂದ್ರದ ಅಲಿ ಮಸೀದಿ ಹತ್ತಿರದ ಕಾರ್ ಗ್ಯಾರೇಜ್‌ನಲ್ಲಿ ದಾಳಿ ನಡೆಸಲಾಯಿತು. ಮಾಹಿತಿ ಆಧಾರವಾಗಿ, ಗ್ಯಾರೇಜ್‌ನಲ್ಲಿ ಒಬ್ಬ ವ್ಯಕ್ತಿ ಎಂ.ಡಿ.ಎಂ.ಎ ಮಾದಕ ವಸ್ತು ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕಾಯುತ್ತಿದ್ದನೆಂಬ ಸುಳಿವು ಪೊಲೀಸರಿಗೆ ದೊರಕಿತ್ತು. ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ ವೇಳೆ, ಆರೋಪಿ ಸೈಯ್ಯದ್ ಜಾವೀದ್ ಅಲಿಯಾಸ್ ಬೆಂಡ್ ಜಾವೀದ್ (34 ವರ್ಷ) ಬಂಧಿತನಾಗಿದ್ದು, ಅವನಿಂದ ಸುಮಾರು 13 ಗ್ರಾಂ ಎಂ.ಡಿ.ಎಂ.ಎ, ಒಂದು ತೂಕದ ಯಂತ್ರ ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ. ಸೋಕೊ ತಂಡದಿಂದ ವಶಪಡಿಸಿದ ವಸ್ತು ಎಂ.ಡಿ.ಎಂ.ಎ ಆಗಿರುವುದು ಖಚಿತಪಡಿಸಲಾಯಿತು. ಆರೋಪಿಯ ವಿರುದ್ಧ ಸಂಬಂಧಿತ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಮುಂದೆ ಓದಿ..
ಸುದ್ದಿ 

ಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ

Taluknewsmedia.com

Taluknewsmedia.comಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣಬೆಂಗಳೂರು 22 ಆಗಸ್ಟ್ 2025ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ ವರದಿಯಾಗಿದೆ. 27 ವರ್ಷದ ಅಹಾರ್.ಟಿ ಬಿನ್ ಥಹಾ ವಿ ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು ಯಶವಂತಪುರದಲ್ಲಿರುವ ಬೆಲೆಕ್ ಇಂಡಿಯಾ ಲಿಮಿಟೆಡ್‌ನಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 19.08.2025ರ ಮಧ್ಯರಾತ್ರಿ ಸುಮಾರು 2.20ಕ್ಕೆ ತಮ್ಮ ಹೊಂಡಾ ದ್ವಿಚಕ್ರ ವಾಹನ (ನಂಬರು: KL-23-P-6201) ಅನ್ನು ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಬೆಳಿಗ್ಗೆ ಸುಮಾರು 7.30ಕ್ಕೆ ನೋಡಿದಾಗ ವಾಹನ ಕಾಣಿಸದೆ ಹೋದ ಕಾರಣ, ಅನಾಮಿಕರು ಸುಮಾರು ₹40,000 ಮೌಲ್ಯದ ಸ್ಕೂಟರ್‌ನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪಿರ್ಯಾದುದಾರರು ತಮ್ಮ ಕೆಲಸದ ನಿರತೆಯಿಂದ ತಡವಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ ಗಾಂಜಾ ಮಾರಾಟಗಾರ ಬಂಧನ

Taluknewsmedia.com

Taluknewsmedia.com ಬೆಂಗಳೂರು:22 ಆಗಸ್ಟ್ 2025ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪಿಎಸ್‌ಐ ಇಬ್ರಾಹಿಂ ಅವರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಖಾಲಿ ಜಾಗದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. 20 ಆಗಸ್ಟ್ 2025 ರಂದು ಸಂಜೆ 6 ಗಂಟೆಯ ಸುಮಾರಿಗೆ ನಡೆದ ದಾಳಿಯಲ್ಲಿ, ಮರೂನ್ ಶರ್ಟ್ ಧರಿಸಿದ್ದ ಕಿರಣ್ @ ಕಿರಣ್ ಬೇಡಿ (25) ಎಂಬ ವ್ಯಕ್ತಿಯನ್ನು ವಿದ್ಯಾರಣ್ಯಪುರ ಪೊಲೀಸರು ವಶಕ್ಕೆ ಪಡೆದರು. ಆರೋಪಿಯಿಂದ 821 ಗ್ರಾಂ ಗಾಂಜಾ, 8 ಚಿಕ್ಕ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಮತ್ತು ₹500 ಮುಖಬೆಲೆಯ ನೋಟು ವಶಪಡಿಸಿಕೊಳ್ಳಲಾಗಿದೆ. ಕಿರಣ್ ವಿಶಾಖಪಟ್ಟಣಂನಿಂದ ಗಾಂಜಾ ತಂದು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅವನು ಪ್ರತಿ ಪ್ಯಾಕೆಟ್ ಅನ್ನು ₹500ಕ್ಕೆ ಮಾರಾಟ ಮಾಡುತ್ತಿದ್ದನೆಂದು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಹಾಗೂ ವಶಪಡಿಸಿದ ಮಾಲುಗಳನ್ನು ಠಾಣೆಗೆ ಕರೆತರಲಾಗಿದ್ದು, ಮುಂದಿನ ಕಾನೂನು…

ಮುಂದೆ ಓದಿ..
ಸುದ್ದಿ 

ಯುವತಿ ಕಾಣೆಯಾಗಿರುವ ಘಟನೆ – ಯಲಹಂಕದಲ್ಲಿ ಪೋಷಕರ ಮನವಿ

Taluknewsmedia.com

Taluknewsmedia.com ಬೆಂಗಳೂರು: 22 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸರ ಮಾಹಿತಿಯ ಪ್ರಕಾರ, ಲಕ್ಷ್ಮಿಪತಿ ಅವರು ತಮ್ಮ ಕುಟುಂಬದೊಂದಿಗೆ ಯಲಹಂಕದಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ಮಗಳೊಂದಿಗೆ ಹಣಕಾಸಿನ ವಿಷಯವಾಗಿ ಮನೆಯಲ್ಲಿ ಕೆಲ ಮಾತುಕತೆ ನಡೆದಿತ್ತು. ದಿನಾಂಕ 13.08.2025 ರಂದು ಲಕ್ಷ್ಮಿಪತಿ ಅವರು ತಮ್ಮ ಊರಾದ ಮಾಲಗಡಿ ತೆರಳಿದ್ದರು. ಅವರ ಪತ್ನಿ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋದರು. ಆ ಸಮಯದಲ್ಲಿ ಮಗಳು ಮತ್ತು ಮಗ ಮನೆಯಲ್ಲೇ ಇದ್ದರು. ಮಧ್ಯಾಹ್ನ ಸುಮಾರು 12:30 ಗಂಟೆಗೆ, ಮಗಳು “ಹೊರಗಡೆ ಕೆಲಸವಿದೆ” ಎಂದು ಹೇಳಿ ಮನೆಯಿಂದ ಹೊರಟಿದ್ದು, ನಂತರ ವಾಪಾಸಾಗಲಿಲ್ಲ. ಸಂಜೆ 6 ಗಂಟೆಗೆ ಮನೆಗೆ ಬಂದ ಪೋಷಕರು ಮಗಳು ಮನೆಗೆ ವಾಪಾಸಾಗಿಲ್ಲವೆಂದು ಗಮನಿಸಿದರು. ಸ್ನೇಹಿತರು ಮತ್ತು ಸಂಬಂಧಿಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಾಣೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ದೊರಕದ…

ಮುಂದೆ ಓದಿ..