ಓದಿಲ್ಲವೆಂದು 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳನೆ – ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಕೃತ್ಯ…
Taluknewsmedia.comಓದಿಲ್ಲವೆಂದು 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳನೆ – ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಕೃತ್ಯ… ಓದಿಲ್ಲ ಅಂತ 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ ಸರ್ಕಾರಿ ಶಾಲೆ ಶಿಕ್ಷಕಿರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ನಡೆದ ಘಟನೆ ಶಿಕ್ಷಣ ವ್ಯವಸ್ಥೆಯ ಮಾನವೀಯತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಓದಿಲ್ಲ ಎನ್ನುವ ಒಂದೇ ಕಾರಣಕ್ಕೆ ಮೂರನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಮನಸೋಇಚ್ಛೆ ಥಳಿಸಿರುವ ಅಮಾನವೀಯ ಘಟನೆ ಸರ್ಕಾರಿ ಉರ್ದು ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಹರ್ಷಿಯಾ ತಸ್ಕಿನ್, ಓದದೆ ಶಾಲೆಗೆ ಬಂದಿದ್ದಾನೆ ಎಂಬ ಕಾರಣಕ್ಕೆ 3ನೇ ತರಗತಿ ಬಾಲಕನ ಮೇಲೆ ಭಾರೀ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಾಲಕನ ದೇಹದ ಮೇಲೆ ಬಾಸುಂಡೆಗಳು ಕಾಣಿಸಿಕೊಂಡಿದ್ದು, ಥಳನೆಯ ತೀವ್ರತೆ ಎಷ್ಟು ಭೀಕರವಾಗಿತ್ತೆಂಬುದಕ್ಕೆ ಇದು ಸಾಕ್ಷಿಯಾಗಿದೆ.ಶಿಕ್ಷಕಿಯ ಕ್ರೂರ ವರ್ತನೆಯಿಂದ ಗಾಯಗೊಂಡ ಬಾಲಕನ ಸ್ಥಿತಿ ಗಂಭೀರವಾಗಿದ್ದು,…
ಮುಂದೆ ಓದಿ..
