ಶಿವಮೊಗ್ಗ: 22 ವರ್ಷದ ಯುವತಿ ಆನ್‌ಲೈನ್ ಹೂಡಿಕೆ ಮೋಸಕ್ಕೆ ಬಲಿಯಾಗಿ ₹67.78 ಲಕ್ಷ ನಷ್ಟ!
ಶಿವಮೊಗ್ಗ: 22 ವರ್ಷದ ಯುವತಿ ಆನ್‌ಲೈನ್ ಹೂಡಿಕೆ ಮೋಸಕ್ಕೆ ಬಲಿಯಾಗಿ ₹67.78 ಲಕ್ಷ ನಷ್ಟ! ಮಲೆನಾಡು ಭಾಗದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿದ್ದರೆ, ಶಿವಮೊಗ್ಗದ 22 ವರ್ಷದ ಯುವತಿ ಒಬ್ಬರು ಸುಮಾರು ₹67.78 ಲಕ್ಷಕ್ಕೂ ಅಧಿಕ ಮೊತ್ತ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹೆಚ್ಚು ಲಾಭ ದೊರೆಯುತ್ತದೆ ಎಂಬ ಆಮಿಷ ನೀಡಿ, ‘FUNIN Exchange’ ಎಂಬ ಆನ್‌ಲೈನ್ ಹೂಡಿಕೆ ವೇದಿಕೆಯ ಹೆಸರಿನಲ್ಲಿ ಅಪರಿಚಿತರಿಂದ ಸಂದೇಶವೊಂದನ್ನು ಯುವತಿಗೆ ಕಳುಹಿಸಲಾಗಿತ್ತು. ಆಪ್‌ನಲ್ಲಿ ಯುವತಿಯ ಹೆಸರಲ್ಲಿ ಖಾತೆ ತೆರೆಯಲಾಗಿದ್ದು, ಹೂಡಿಕೆ ಮಾಡಿದರೆ ತ್ವರಿತ ಲಾಭ ದೊರೆಯುತ್ತದೆ ಎಂದು ಸುಳ್ಳು ಭರವಸೆ ನೀಡಲಾಗಿತ್ತು. ಜೂನ್ 9ರಿಂದ ನವೆಂಬರ್ 26ರ ನಡುವೆ ಒಟ್ಟು 559 ವ್ಯವಹಾರಗಳ ಮೂಲಕ ₹67,78,100 ಮೊತ್ತವನ್ನು ಯುವತಿ ಹೂಡಿಕೆ ಮಾಡಿಕೊಂಡಿದ್ದರು. ಆರಂಭದಲ್ಲಿ ಲಾಭ ತೋರಿಸಿದರೂ, ಬಳಿಕ ಆಪ್‌ನಲ್ಲಿ ಹೂಡಿಕೆ ಹಾಗೂ ಹಣ ಹಿಂದಕ್ಕೆ ಪಡೆಯುವ ಆಯ್ಕೆಯನ್ನು ಸಂಪೂರ್ಣವಾಗಿ…
ಮುಂದೆ ಓದಿ..
