ಕರ್ನಾಟಕದ ಒಳಮೀಸಲಾತಿ ಕಗ್ಗಂಟಿಗೆ ಸಿಕ್ಕ ಐತಿಹಾಸಿಕ ಪರಿಹಾರ: ದಶಕಗಳ ಶೋಷಿತರ ಕನಸು ನನಸಾಗುವ ಹಾದಿಯಲ್ಲಿ…
ಕರ್ನಾಟಕದ ಒಳಮೀಸಲಾತಿ ಕಗ್ಗಂಟಿಗೆ ಸಿಕ್ಕ ಐತಿಹಾಸಿಕ ಪರಿಹಾರ: ದಶಕಗಳ ಶೋಷಿತರ ಕನಸು ನನಸಾಗುವ ಹಾದಿಯಲ್ಲಿ… ದಶಕಗಳಿಂದ ರಾಜಕೀಯ ವಲಯದಲ್ಲಿ ಕೇವಲ ಭರವಸೆಯಾಗಿ, ಚುನಾವಣಾ ಸರಕಾಗಿ ಉಳಿದಿದ್ದ ‘ಒಳಮೀಸಲಾತಿ’ ಎಂಬ ಜಟಿಲ ಸಮಸ್ಯೆಗೆ ಕರ್ನಾಟಕ ಸರ್ಕಾರವು ಕೊನೆಗೂ ಒಂದು ತಾರ್ಕಿಕ ಹಾಗೂ ಐತಿಹಾಸಿಕ ಅಂತ್ಯವನ್ನು ಹಾಡಿದೆ. ಇದು ಕೇವಲ ಅಂಕಿ-ಅಂಶಗಳ ಹಂಚಿಕೆಯಲ್ಲ; ಬದಲಾಗಿ ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ, ದಶಕಗಳಿಂದ ಅಧಿಕಾರದ ಹಾಗೂ ಅವಕಾಶಗಳ ಮುಖ್ಯವಾಹಿನಿಯಿಂದ ವಂಚಿತರಾದ ಸಮುದಾಯಗಳಿಗೆ ನೀಡಿದ ಸಾಂವಿಧಾನಿಕ ಭರವಸೆ. ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಇದೊಂದು ಅತ್ಯಂತ ಧೈರ್ಯಶಾಲಿ ಮತ್ತು ದೂರದೃಷ್ಟಿಯ ತೀರ್ಮಾನವೆಂಬುದರಲ್ಲಿ ಸಂಶಯವಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಹಿನ್ನೆಲೆಯಲ್ಲಿ ರೂಪುಗೊಂಡ ಈ ಒಳಮೀಸಲಾತಿ ಸೂತ್ರವು, ಪರಿಶಿಷ್ಟ ಜಾತಿಯ ಒಟ್ಟು 101 ಉಪಜಾತಿಗಳನ್ನು ಮೂರು ಪ್ರಮುಖ ಗುಂಪುಗಳಾಗಿ ವಿಂಗಡಿಸಿದೆ. ಈ ವರ್ಗೀಕರಣದ ಹಿಂದಿರುವ ತರ್ಕವೆಂದರೆ, ಪ್ರತಿಯೊಂದು ಸಮುದಾಯಕ್ಕೂ ಅದರ ಜನಸಂಖ್ಯೆ ಮತ್ತು…
ಮುಂದೆ ಓದಿ..
