ಶೂನ್ಯ ಶಿಕ್ಷೆ, ಅಮಾನವೀಯ ಹೇಳಿಕೆ: ಅಂಕಿ-ಅಂಶಗಳು ತೆರೆದಿಟ್ಟ ಕರ್ನಾಟಕದ ಕರಾಳ ಸತ್ಯ…
ಶೂನ್ಯ ಶಿಕ್ಷೆ, ಅಮಾನವೀಯ ಹೇಳಿಕೆ: ಅಂಕಿ-ಅಂಶಗಳು ತೆರೆದಿಟ್ಟ ಕರ್ನಾಟಕದ ಕರಾಳ ಸತ್ಯ… “ಅತ್ಯಾಚಾರ ಅನಿವಾರ್ಯವಾದರೆ ಮಲಗಿ ಆನಂದಿಸಬೇಕು” – ಈ ಮಾತುಗಳು 2021 ರ ಬೆಳಗಾವಿ ವಿಧಾನ ಸಭೆ ಕಲಾಪದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಮಾಜಿ ಶಾಸಕ ರಮೇಶ್ ಕುಮಾರ್ ಅವರದ್ದು. ಸದನದಲ್ಲಿ ಇಂತಹದೊಂದು ಅಮಾನವೀಯ ಹೇಳಿಕೆ ನೀಡಿದು ಕೇವಲ ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ತೋರಿಸುವುದಿಲ್ಲ, ಬದಲಿಗೆ ನಮ್ಮ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯ ಆಳದಲ್ಲಿ ಬೇರೂರಿರುವ ಒಂದು ಗಂಭೀರ ಸಮಸ್ಯೆಯ ಪ್ರತಿಬಿಂಬವಾಗಿದೆ. ಇದು ಒಬ್ಬ ಜನಪ್ರತಿನಿಧಿಯ ಬೇಜವಾಬ್ದಾರಿ ಹೇಳಿಕೆಗಿಂತ ಮಿಗಿಲಾದದ್ದು.ಈ ಹೇಳಿಕೆ ಕೇವಲ ನಾಲಿಗೆಯ ಪ್ರಮಾದವಲ್ಲ, ಬದಲಿಗೆ ಅಂಕಿ-ಅಂಶಗಳು ದೃಢಪಡಿಸುವ ವ್ಯವಸ್ಥಿತ ವೈಫಲ್ಯದ ಮುಖವಾಣಿ. ಈ ಲೇಖನದಲ್ಲಿ ನಾವು ಪೊಲೀಸ್ ಇಲಾಖೆಯದ್ದೇ ಡೇಟಾವನ್ನು ಬಳಸಿ, ಸಂತ್ರಸ್ತರಿಗೆ ನ್ಯಾಯ ಹೇಗೆ ಶೂನ್ಯವಾಗುತ್ತಿದೆ ಎಂಬುದನ್ನು ಅನಾವರಣ ಮಾಡುತ್ತೇವೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಗಂಭೀರ ಅಪರಾಧಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಕಟು ಸತ್ಯವನ್ನು…
ಮುಂದೆ ಓದಿ..
