25 ವರ್ಷದ ಅನುಭವವೂ ವಿದ್ಯುತ್ ಪಾಶಕ್ಕೆ ಬಲಿ: ಬೆಸ್ಕಾಂ ದುರಂತದಿಂದ ನಾವು ಕಲಿಯಬೇಕಾದ ಕಹಿ ಸತ್ಯಗಳು
25 ವರ್ಷದ ಅನುಭವವೂ ವಿದ್ಯುತ್ ಪಾಶಕ್ಕೆ ಬಲಿ: ಬೆಸ್ಕಾಂ ದುರಂತದಿಂದ ನಾವು ಕಲಿಯಬೇಕಾದ ಕಹಿ ಸತ್ಯಗಳು ಬೆಂಗಳೂರಿನ ವಿದ್ಯುತ್ ವ್ಯವಸ್ಥೆಯ ರಕ್ತನಾಳಗಳಂತೆ ಕೆಲಸ ಮಾಡುವ ಲೈನ್‌ಮ್ಯಾನ್‌ಗಳ ಬದುಕು ಇಂದು ಎಷ್ಟು ಅಸುರಕ್ಷಿತವಾಗಿದೆ ಎಂಬುದಕ್ಕೆ ಮಾರ್ಚ್ 17, 2026ರಂದು ನಡೆದ ಘಟನೆ ಸಾಕ್ಷಿಯಾಗಿದೆ. ಮಾರ್ಚ್ 4ರಂದು ‘ಲೈನ್‌ಮ್ಯಾನ್ ದಿನ’ ಎಂದು ಅತ್ಯಂತ ಸಂಭ್ರಮದಿಂದ ಆಚರಿಸಿದ ಬೆಸ್ಕಾಂ ಇಲಾಖೆ, ಕೇವಲ 15 ದಿನಗಳ ಅಂತರದಲ್ಲಿ ತನ್ನೊಬ್ಬ ನಿಷ್ಠಾವಂತ ನೌಕರನನ್ನು ವಿದ್ಯುತ್ ಪಾಶಕ್ಕೆ ಬಲಿ ನೀಡಿದೆ. ಶಿವಾಜಿನಗರ ವಿಭಾಗದ ನಾಗವಾರ-2 ವ್ಯಾಪ್ತಿಯಲ್ಲಿ, 53 ವರ್ಷದ ಮೆಕ್ಯಾನಿಕ್ ದರ್ಜೆ-2ರ ನೌಕರ ಅಂಬರೀಶ್ ಟಿ.ಸಿ. ಅವರು ಕಾಫಿ ಬೋರ್ಡ್ ಲೇಔಟ್‌ನಲ್ಲಿ ಕೆಟ್ಟುಹೋಗಿದ್ದ ಟ್ರಾನ್ಸ್‌ಫಾರ್ಮರ್ (TC) ಬದಲಾಯಿಸುವಾಗ ಸಾವನ್ನಪ್ಪಿದ್ದಾರೆ. 25 ವರ್ಷಗಳ ಅಪಾರ ಅನುಭವ ಹೊಂದಿದ್ದ ನೌಕರನೇ ಹೀಗೆ ಬಲಿಯಾಗುತ್ತಾನೆ ಎಂದರೆ, ಇಲ್ಲಿನ ತಾಂತ್ರಿಕ ನೈಪುಣ್ಯತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ನಾವು ಗಂಭೀರವಾಗಿ ಪ್ರಶ್ನಿಸಬೇಕಿದೆ.…
ಮುಂದೆ ಓದಿ..
