ಸುದ್ದಿ 

ಹುಬ್ಬಳ್ಳಿಯಲ್ಲಿ ಯುವಕನಿಂದ ಗಾಂಜಾ ಸೇವನೆ.

ಸಾರ್ವಜನಿಕ ಸ್ಥಳದಲ್ಲಿ ಕೃತ್ಯಹುಬ್ಬಳ್ಳಿ, ಜೂನ್ 17: ನಗರದ ನವನಗರದಲ್ಲಿರುವ ಕೆ.ಎಸ್.ಎಲ್.ಯು ರಸ್ತೆಯ ಹತ್ತಿರ ಇಂದು ಬೆಳಿಗ್ಗೆ ಸುಮಾರು 10:40ರ ಹೊತ್ತಿಗೆ ನಡೆದ ಘಟನೆದಲ್ಲಿ 19 ವರ್ಷದ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವೇಳೆ ಹಿಡಿದಿಟ್ಟುಕೊಳ್ಳಲಾಗಿದೆ.ಆರೋಪಿತನನ್ನು ವಿನಾಯಕ ಜಗದೀಶ ಹಿರೇಮಠ ಎಂದು ಗುರುತಿಸಲಾಗಿದ್ದು, ಉಣಕಲ್ ಕ್ರಾಸ್, ದಾನಮ್ಮನ ಗುಡಿ ಹತ್ತಿರವಿರುವ ಸಂಜೀವಿನಿ ಪಾನ ಶಾಪ್ ಹತ್ತಿರ ಗ್ಯಾರೇಜಿನಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾನೆ. ಈತನಿಂದ ಗಾಂಜಾ ಎಂಬ ನಿಷೇಧಿತ ಮಾದಕ ವಸ್ತು ಪತ್ತೆಯಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಆಟೋ ಡಿಕ್ಕಿಯಿಂದ ಮಹಿಳೆಗೆ ಗಾಯ: ಚಾಲಕನ ವಿರುದ್ಧ ಪ್ರಕರಣ ದಾಖಲು

ನಾಗಮಂಗಲ ಪಟ್ಟಣದಲ್ಲಿ ಸಂಭವಿಸಿದ ಅಜಾಗರೂಕ ಆಟೋ ಚಾಲನೆಯಿಂದ ಹಿರಿಯ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆ ನಿಂಗಮ್ಮ , ಘಟನೆ ನಡೆದ ಸಮಯದಲ್ಲಿ ನಾಗಮಂಗಲ ಸರ್ಕಲ್ ಬಳಿಯ ಆಟೋ ಸ್ಟ್ಯಾಂಡ್ ಬಳಿ ಫುಟ್‌ಪಾತ್‌ನಲ್ಲಿ ನಿಂತು ಊರಿಗೆ ತೆರಳಲು ಆಟೋ ನಿರೀಕ್ಷಿಸುತ್ತಿದ್ದರು. ಈ ಸಂದರ್ಭ ಆಟೋ ಚಾಲಕ ಆಫ್ರಾಬ್ ಪಾಷ (ಕೆಎ-05-ಎಎ-2738 ನಂ. ವಾಹನದ ಚಾಲಕ) ನಿರ್ಲಕ್ಷ್ಯದಿಂದ ಹಾಗೂ ಅಜಾಗರೂಕತೆಯಿಂದ ಆಟೋವನ್ನು ರಿವರ್ಸ್ ಚಾಲನೆ ಮಾಡಿ ನಿಂಗಮ್ಮಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ನಿಂಗಮ್ಮ ಕೆಳಗೆ ಬಿದ್ದು ಸೊಂಟದ ಬಲಭಾಗ ಮತ್ತು ಬಲಗಾಲಿನ ತೊಡೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲೇ ಇದ್ದ ಸಂಬಂಧಿ ರಾಮೇಗೌಡ ಮತ್ತು ಆಟೋಚಾಲಕ ಗಾಯಾಳುವಿಗೆ ತಕ್ಷಣ ಸಹಾಯ ಮಾಡಿದ್ದು, ಅವರನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ…

ಮುಂದೆ ಓದಿ..
ಸುದ್ದಿ 

ಮಳ್ಳಿಕೊಪ್ಪಲು ಗ್ರಾಮದಲ್ಲಿ ಜಮೀನಿನ ವಿವಾದದಿಂದ ಹಲ್ಲೆ: ದಂಪತಿಗೆ ಗಾಯ

ನಾಗಮಂಗಲ ತಾಲ್ಲೂಕಿನ ಮಳ್ಳಿಕೊಪ್ಪಲು ಗ್ರಾಮದಲ್ಲಿ ಜಮೀನಿನ ಹಕ್ಕು ಸಂಬಂಧಿಸಿದ ವಿಚಾರದಿಂದ ಉಂಟಾದ ವಿವಾದ ಹಲ್ಲೆಗೆ ದಾರಿ ತೋರಿದೆ. ಈ ಘಟನೆಯಲ್ಲಿ ದಂಪತಿಗೆ ಗಾಯಗಳಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಲಮ್ಮ ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಅದರ ಪ್ರಕಾರ ಅವರು ದೇವಲಾಪುರ ಹೋಬಳಿಯ ಮಳ್ಳಿಕೊಪ್ಪಲು ಗ್ರಾಮದಲ್ಲಿರುವ ಸರ್ವೇ ನಂ. 56 ರಲ್ಲಿನ ಸುಮಾರು 1 ಎಕರೆ 32 ಕುಂಟೆ ಜಮೀನನ್ನು ತಮ್ಮ ಮಗ ಅನಿಲ್ ಕುಮಾರ್ ಎಂ.ವಿ. ಅವರ ಹೆಸರಿನಲ್ಲಿ ಬಿ.ಪಿ. ಪ್ರಕಾಶ ಬಿನ್ ಪುಟ್ಟಪರವರಿಂದ ಜನರಲ್ ಪವರ್ ಆಫ್ ಅಟಾರ್ನಿಯ ಮೂಲಕ ಪಡೆದಿದ್ದು, ಕುಟುಂಬ ಸಮೇತ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಶೀಲಮ್ಮ ಪ್ರಕಾರ,(ಕೋಂ ಶ್ರೀನಿವಾಸ), ಚಿಕ್ಕತಾಯಮ್ಮ (ಕೋಂ ವೆಂಕಟೇಶ), ಶ್ರೀನಿವಾಸ (ಕೋಂ ವೆಂಕಟೇಶ), ಜಯಮ್ಮ (ಕೋಂ ಗಂಗರಸಯ್ಯ), ಶಾರದಾ (ಕೋಂ ಅರಸೇಗೌಡ) ಮತ್ತು ತೇಜಸ್ ಗೌಡ (ಬಿನ್ ಅರಸೇಗೌಡ) ಎಂಬವರು ತಮ್ಮ ಹಸು ಮತ್ತು…

ಮುಂದೆ ಓದಿ..
ಸುದ್ದಿ 

ರಾಷ್ಟ್ರೀಯ ವ್ಯಾಪಾರಿ ಕಲ್ಯಾಣ ಮಂಡಳಿಯ ಸಭೆ ಸಂಪನ್ನ — ವ್ಯಾಪಾರಿಗಳು ಸ್ವದೇಶಿ ಸಂಕಲ್ಪ ತೆಗೆದುಕೊಂಡರು.

ನವದೆಹಲಿ, ವಾಣಿಜ್ಯ ಭವನ: ರಾಷ್ಟ್ರೀಯ ವ್ಯಾಪಾರಿ ಕಲ್ಯಾಣ ಮಂಡಳಿಯ ಸಭೆ ಅಧ್ಯಕ್ಷ ಶ್ರೀ ಸುನೀಲಜಿ ಸಿಂಘಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು “ಆಪರೇಷನ್ ಸಿಂಧೂರ” ಯಶಸ್ಸಿಗೆ ಕೇಂದ್ರ ಸರ್ಕಾರ ಮತ್ತು ಸೇನೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಮತ್ತು ಈ ಅಭಿಯಾನ ದೇಶಭಕ್ತಿಯ ಭಾವನೆಗೆ ಹೊಸ ಶಕ್ತಿ ನೀಡುತ್ತದೆ ಎಂದು ಹೇಳಿದರು. 20 ಅಂಶಗಳ ಸ್ವದೇಶಿ ಸಂಕಲ್ಪ: ವಿದೇಶೀ ಉತ್ಪನ್ನಗಳ ಬಹಿಷ್ಕಾರ, ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ, ವಿವಾಹ ಮತ್ತು ಶಿಕ್ಷಣ ಭಾರತದಲ್ಲೇ, ಸ್ಥಳೀಯ ರೈತರ ಹಾಗೂ ಕಸೂತರರಿಗೆ ಬೆಂಬಲ, ಭಾರತೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ವಿವಿಧ ಅಂಶಗಳ ಮೇಲೆ ಶ್ರೀ ಸಿಂಘಿಯವರು ವ್ಯಾಪಾರಿಗಳಿಂದ ಸಂಕಲ್ಪ ತೆಗೆದುಕೊಳ್ಳುವಂತೆ ಕೋರಿದರು.ಕರ್ನಾಟಕದ ಮಂಡಳಿ ಸದಸ್ಯ ಶ್ರೀ ಪ್ರಕಾಶ್ ಪಿರಗಲ್ ಅವರು ಶ್ರಮ ಕಾನೂನುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಂತೋಷ ವ್ಯಕ್ತಪಡಿಸಿದರು. ಅವರು ಬೇಂಗಳೂರಿನಲ್ಲಿ ವ್ಯಾಪಾರಿ ಸಂಘಗಳ ಮೂಲಕ ಶೀಘ್ರದಲ್ಲೇ ಸ್ವದೇಶಿ ಪ್ರತಿಜ್ಞೆ…

ಮುಂದೆ ಓದಿ..
ಅಂಕಣ 

ಶೋಷಿತರ ಧ್ವನಿಯನ್ನು ನೆನೆಯುತ್ತಾ…….

ಇಸಂಗಳನ್ನು ಮೀರಿ ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕಾದ ಸನ್ನಿವೇಶದಲ್ಲಿ…..ಕಮ್ಯುನಿಸ್ಟ್ ಜಗತ್ತಿನ ಗ್ಲಾಮರಸ್ ಹೀರೋ ಆರ್ನೆಸ್ಟ್ ಚೆಗುವಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ,ಜೂನ್ 14………ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ ಮುಕ್ತ ಮಾರುಕಟ್ಟೆಯ ಹೊಸ ಪೀಳಿಗೆ ಮುಖ್ಯವಾಹಿನಿಯಲ್ಲಿ ಮಹತ್ವ ಪಡೆದಿರುವಾಗ ಕಾರ್ಲ್ ಮಾರ್ಕ್ಸ್, ಮಾವೋ, ಸ್ಟಾಲಿನ್, ಕ್ಯಾಸ್ಟ್ರೋ ಮುಂತಾದವರು ಈ ಕೊಳ್ಳುಬಾಕ ಸಂಸ್ಕೃತಿಯ ಜನರ ನಡುವೆ ವಿಲನ್ ರೀತಿಯಲ್ಲಿ ಬಿಂಬಿತವಾಗುತ್ತಿರುವಾಗ, ಬಹುತೇಕ ಯುವ ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮವಾಗಿ ಸೂಕ್ಷ್ಮತೆ ಕಳೆದುಕೊಂಡಿರುವಾಗ, ಈಗಲೂ ಈ ವ್ಯವಸ್ಥೆಯ ಬಂಡಾಯಗಾರರಿಗೆ ” ಚೆ ” ಅತ್ಯಂತ ಆಕರ್ಷಕ ಮತ್ತು ಸ್ಪೂರ್ತಿದಾಯಕವಾಗಿದ್ದಾರೆ.ಚೆಗುವಾರ ಅವರ ಹೋರಾಟದ ಹಾದಿಯನ್ನು ಮೆಚ್ಚುತ್ತಲೇ ಅವರ ಅಭಿಮಾನಿಗಳಾಗಿ ಈಗಲೂ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಪಿಕ್ಚರ್ ಚೆಗುವಾರ ಆಗಿರುವುದನ್ನು ಕಾಣಬಹುದು.ಆಧುನಿಕ ಸಂಕೀರ್ಣ ಜೀವನಶೈಲಿಯ ಮೋಹಕ್ಕೆ ಒಳಗಾಗಿ ವಸ್ತು ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ವ್ಯಾಪಾರವಾಗಿಸಿರುವಾಗ ಪ್ರತಿಯೊಬ್ಬರು…

ಮುಂದೆ ಓದಿ..
ಅಂಕಣ 

ಅಪ್ಪನ ದಿನ……..ತಂದೆ ಎಂಬ ಪಾತ್ರವ ಕುರಿತು……ಅಪ್ಪಾ…………ಸ್ವಲ್ಪ ಇಲ್ಲಿ ನೋಡಪ್ಪಾ…….

ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾವಲಂಬನೆ ಸಾಧ್ಯವಾದ ನಂತರ ಸ್ವಲ್ಪ ಬದಲಾವಣೆ ಕಾಣುತ್ತಿದೆ. )ಈ ದೇಶದ ಇಂದಿನ ಎಲ್ಲಾ ಪರಿಸ್ಥಿತಿಗಳ ಬಹುಮುಖ್ಯ ಪಾತ್ರದಾರಿ ಅಪ್ಪ, ಅಮ್ಮ ಪೋಷಕ ಪಾತ್ರದಾರಿ ಮಾತ್ರ.ಇವತ್ತಿನ ಸಂದರ್ಭದಲ್ಲಿ ನಿಮಗೆ ನಮ್ಮ ಒಟ್ಟು ವ್ಯವಸ್ಥೆಯ ಬಗ್ಗೆ ಹೆಮ್ಮೆಯಿದ್ದರೆ ಅದಕ್ಕೆ ಅಪ್ಪ ಕಾರಣ ಅಥವಾ ಇದರ ಬಗ್ಗೆ ಅತೃಪ್ತಿ, ಅಸಹನೆ ಇದ್ದರೆ ಅದಕ್ಕೂ ಅಪ್ಪನೇ ಕಾರಣ.ಅಪ್ಪ, ಈ ಸಂಬಂಧವನ್ನು ಅರ್ಥೈಸುವುದು ಹೇಗೆ.ಸ್ವಂತ ಮಕ್ಕಳು ಅಪ್ಪನನ್ನು ಆಕಾಶಕ್ಕೆ ಏರಿಸುತ್ತವೆ, ನನ್ನ ಅಪ್ಪನಂತ ಅಪ್ಪ ಯಾರೂ ಇಲ್ಲ, ಆತನೇ ಪ್ರತ್ಯಕ್ಷ ದೇವರು, ನನ್ನ ಸ್ಪೂರ್ತಿ, ನನ್ನ ಮಾರ್ಗದರ್ಶಕ, ನನ್ನ ಬದುಕು ಕಲಿಸಿದವ ಮುಂತಾಗಿ ವರ್ಣಿಸುತ್ತಾರೆ. ( ಕೆಲವು…

ಮುಂದೆ ಓದಿ..
ಅಂಕಣ 

ಮರಣವೇ ಮಹಾ ನವಮಿ…….ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ..

ಮರಣವೇ ಮಹಾ ನವಮಿ…….ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ ನಡೆದ ಬೋಯಿಂಗ್ ಡ್ರೀಮ್ ಲೈನರ್ 787 ವಿಮಾನದ 265 ಕ್ಕೂ ಹೆಚ್ಚು ಜನರ ಸಾವಿನ ದುರ್ಘಟನೆ ನಮ್ಮ ಬದುಕಿಗೆ ಹೇಗೆಲ್ಲಾ ಪಾಠವಾಗಬಹುದು…….. ಏಕೆಂದರೆ ಆಧುನಿಕ ಕಾಲದಲ್ಲಿ ಅಪಘಾತಗಳೆಂಬುದು ಬಹುತೇಕ ಸಾಮಾನ್ಯ ಸಹಜ. ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ಹೇಗೆ ನಾವು ಸುರಕ್ಷಿತೆಗಾಗಿ, ಅಧೀಕೃತವಾಗಿ ಜೀವವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ಅನಧೀಕೃತವಾಗಿ ನಮ್ಮ ಬೆನ್ನ ಹಿಂದೆಯೇ ನೆರಳಿನಂತೆ ಸಾವು ಎಂಬ ಅಂತಿಮ ಸತ್ಯವೂ ಹಿಂಬಾಲಿಸುತ್ತಿರುತ್ತದೆ. ಬದುಕಿನ ಪ್ರಯಾಣದಲ್ಲಿ ಅದೂ ಸಹ ಜೊತೆಗಾರ…….ಅದರಲ್ಲೂ ನಾವು ವಿದೇಶಕ್ಕೆ ಹೋಗಬೇಕಾದರೆ ಸಧ್ಯದಲ್ಲಿ ಇರುವ ಅತ್ಯಂತ ಸುಲಭ, ಸುರಕ್ಷಿತ ಪ್ರಯಾಣದ ಮಾರ್ಗವೆಂದರೆ ವಾಯುಯಾನ ಮಾತ್ರ. ಸಮುದ್ರ ಮತ್ತು ರಸ್ತೆ ತೀರಾ ಅವಾಸ್ತವಿಕ. ನೀವು ಅನಿವಾರ್ಯವಾಗಿ ವಿಮಾನದಲ್ಲಿ ಅದರಲ್ಲಿ ಸಂಚರಿಸಲೇಬೇಕು ಅಂತಹ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಈ ರೀತಿಯ ಅಪಘಾತವು ಕೂಡ ಆಕಸ್ಮಿಕ ಮತ್ತು ಅನಿರೀಕ್ಷಿತವೇ…

ಮುಂದೆ ಓದಿ..
ಅಂಕಣ 

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಜೂನ್ 12..

ಹೊಟ್ಟೆ ಪಾಡಿನ ವೇಶ್ಯೆಯರ ನಂತರ ನನ್ನನ್ನು ಅತಿಹೆಚ್ಚು ಕಾಡುವುದು ಬಾಲ ಕಾರ್ಮಿಕರು. ಪುಟ್ಟ ಮಕ್ಕಳು ಆ ಎಳೆಯ ವಯಸ್ಸಿನಲ್ಲಿ ಅತ್ಯಂತ ಕಠಿಣ ಕೆಲಸಗಳನ್ನು ಮಾಡುವುದು ಮತ್ತು ಅದೇ ಸಮಯದಲ್ಲಿ ಕೆಲವು ಶ್ರೀಮಂತರ ಮಕ್ಕಳು ಮಾಡಬಾರದ ಮೋಜು ಮಸ್ತಿ ಮಾಡುವುದನ್ನು ನೋಡಲು ಹಿಂಸೆಯಾಗುತ್ತದೆ…..ನಾವೇ ಹುಟ್ಟಿಸಿದ ನಮ್ಮದೇ ಅತ್ಯಂತ ಮುದ್ದಾದ ಮಕ್ಕಳು ಹೊಟ್ಟೆ ಪಾಡಿಗಾಗಿ ಇನ್ನೊಬ್ಬರ ಬಳಿ ದೈನೇಸಿಯಾಗಿ ದುಡಿಯುವ ದೃಶ್ಯಗಳನ್ನು ಒಮ್ಮೆ ಸುಮ್ಮನೆ ಕಲ್ಪಿಸಿಕೊಳ್ಳಿ, ದು:ಖದ ಕಟ್ಟೆ ಒಡೆಯುತ್ತದೆ…….ಅಂತಹ ಒಂದು ನೈಜ ಘಟನೆ…..ಅದು ಮಧ್ಯಮ ವರ್ಗದವರೇ ಹೆಚ್ಚಾಗಿ ಹೋಗುವ ಆಂಧ್ರ ಶೈಲಿಯ ಊಟದ ಹೋಟೆಲ್‌. ಅಂದು ಶೂಟಿಂಗ್ ಕೆಲಸ ಮುಗಿಸಿ ಜೊತೆಗಾರರೊಂದಿಗೆ ರಾತ್ರಿ ೧೧ ಗಂಟೆಗೆ ಹೋಟೆಲ್ ಒಳಗೆ ಪ್ರವೇಶಿಸಿದೆ. ಮ್ಯಾನೇಜರ್ ನನಗೆ ಬಹಳ ಪರಿಚಯದವರು. ಹೋಟೆಲ್ ಮುಚ್ಚುವ ಸಮಯ ೧೦/೪೫ . ಆದರೂ ನಾನು ಒಳಗೆ ಹೋದೆ. ಕೇವಲ ಒಂದು ಕುಟುಂಬದವರು ಮಾತ್ರವೇ ಊಟ ಮುಗಿಸಿ ಬಿಲ್…

ಮುಂದೆ ಓದಿ..
ಅಂಕಣ 

” ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು ” ಜಾರ್ಜ್ ವಾಷಿಂಗ್ಟನ್…

ಅರ್ಥವಾಯಿತೆ ? ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ ಅರ್ಥ ನೀಡುವ ಪ್ರಯತ್ನ. ಇದು ಎಲ್ಲಾ ವಯಸ್ಸಿನ, ಎಲ್ಲಾ ಪ್ರದೇಶದ, ಎಲ್ಲಾ ವರ್ಗಗಳಿಗೂ ಅನ್ವಯಿಸುವ ಮಾತು. ಆದರೂ ಹೆಚ್ಚಾಗಿ ಯುವ ವಯಸ್ಸಿನವರಿಗೆ ತುಂಬಾ ಎಚ್ಚರಿಕೆಯ ಅರ್ಥ ಕೊಡುತ್ತದೆ.ಮೊದಲಿಗೆ ಕೆಟ್ಟವರು ಎಂದರೆ ಯಾರು ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಜೂಜು, ಕುಡಿತ, ಅನೈತಿಕವಾಗಿ ಹೆಣ್ಣಿನ ಸಹವಾಸ, ಡ್ರಗ್ಸ್, ಕಳ್ಳತನ ಮುಂತಾದ ದುರಭ್ಯಾಸಗಳನ್ನು ಅನಿಯಂತ್ರಿತವಾಗಿ ಹೊಂದಿರುವವರನ್ನು ಕೆಟ್ಟವರು ಎನ್ನಲಾಗುತ್ತದೆ. ಜೊತೆಗೆ ಆಧುನಿಕ ಸಮಾಜದಲ್ಲಿ ರೌಡಿಸಂ, ಕಾನೂನು ಬಾಹಿರ ಚಟುವಟಿಕೆಗಳು, ಅಕ್ರಮ ವ್ಯವಹಾರಗಳು, ಸಮಾಜದ ಸ್ಥಾಪಿತ ಹಿತಾಸಕ್ತಿಗೆ ವಿರುದ್ಧವಾಗಿ ಹಿಂಸೆಯಲ್ಲಿ ತೊಡಗುವುದು ಮುಂತಾದ ಕ್ರಿಮಿನಲ್ ಚಟುವಟಿಕೆಗಳನ್ನು ಮಾಡುವವರು ಸಹ ಕೆಟ್ಟ ಜನರು ಎನಿಸಿಕೊಳ್ಳುತ್ತಾರೆ. ( ಇದನ್ನು ಹೊರತುಪಡಿಸಿ ಆಂತರ್ಯದಲ್ಲಿ ಕೋಪ, ಅಸೂಯೆ, ದುಡುಕುತನ ಮುಂತಾದ ಕೆಲವು ಕೆಟ್ಟ ಚಾಳಿಗಳು…

ಮುಂದೆ ಓದಿ..
ಅಂಕಣ 

ಅನೈತಿಕ ಸಂಬಂಧಗಳೆಂಬ ಸಾವಿನ ಹೆದ್ದಾರಿ……….

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು ಅದರಿಂದಾಗಿ ನಡೆಯುತ್ತಿರುವ ಭೀಕರ ಕೊಲೆಗಳು……ಮನುಷ್ಯ ಸಂಬಂಧಗಳು, ನಂಬಿಕೆಗಳು, ಕೌಟುಂಬಿಕ ವ್ಯವಸ್ಥೆಗಳು, ಪ್ರೀತಿ ಪ್ರೇಮ ಪ್ರಣಯದ ಪಾವಿತ್ರ್ಯತೆ, ಕಾನೂನು ಸುವ್ಯವಸ್ಥೆ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯೇ ಕುಸಿದು ಬೀಳುವ ಹಂತಕ್ಕೆ ತಲುಪಬಹುದು ಎಂಬಷ್ಟು ವೇಗವಾಗಿ ಮತ್ತು ತೀವ್ರವಾಗಿ ವ್ಯಾಪಿಸುತ್ತಿದೆ……..ಬಹಳ ಹಿಂದೆ ಕಡಿಮೆ ಜನಸಂಖ್ಯೆ, ಸಂಪರ್ಕ ಮಾಧ್ಯಮಗಳ ಕೊರತೆ, ಕೌಟುಂಬಿಕ ಮೌಲ್ಯಗಳ ಗಾಢತೆ, ಹೆಣ್ಣು ಗಂಡು ಸಂಬಂಧಗಳ ಗೌಪ್ಯತೆ, ಆರ್ಥಿಕ ಅಸಮಾನತೆ, ಪುರುಷ ಕೇಂದ್ರಿತ ಸಮಾಜ ಮುಂತಾದ ಕಾರಣಗಳಿಂದ ಅಕ್ರಮ ಸಂಬಂಧಗಳು ಕಡಿಮೆ ಇದ್ದವು, ಹೆಚ್ಚು ಹೊರಗೆ ಬರುತ್ತಿರಲಿಲ್ಲ ಮತ್ತು ಅದಕ್ಕೆ ಬಹುತೇಕ ಪುರುಷರೇ ಹೆಚ್ಚು ಹೊಣೆಗಾರರಾಗಿದ್ದರು……..ಆದರೆ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ, ಉದ್ಯೋಗ, ನಗರೀಕರಣ, ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿ, ಸಣ್ಣ ಕುಟುಂಬಗಳ ಅನಿವಾರ್ಯತೆ, ವಲಸೆ, ದೂರ…

ಮುಂದೆ ಓದಿ..